;

ಪೋಲೀಸರ ಸೋಗಿನಲ್ಲಿ ಬಂದ ಕಳ್ಳರಿಂದ ವೃದ್ಧನ ಬಂಗಾರ ದೋಚಿ ಪರಾರಿ….!!!

ಪೋಲೀಸರ ಸೋಗಿನಲ್ಲಿ ಬಂದ ಕಳ್ಳರಿಂದ ವೃದ್ಧನ ಬಂಗಾರ ದೋಚಿ ಪರಾರಿ.

ಸಿಂಧನೂರು: ಜೂನ್.10.ನಗರದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ.ನಿನ್ನ ಗಾಡಿ ಚೆಕ್ ಮಾಡುತ್ತೇವೆ ಎಂದು ಪೊಲೀಸರ ಸೋಗಿನಲ್ಲಿದ್ದ 3-4 ಜನ ಕಳ್ಳರು ವೃದ್ಧನ ಬಳಿ ಇದ್ದ ಬಂಗಾರ ಕದ್ದು ಪರಾರಿಯಾಗಿದ್ದಾರೆ.ಬಂಗಾರ ಕಳೆದುಕೊಂಡ ವೃದ್ಧ ಗಾಬರಿಗೊಂಡಿದ್ದಾನೆ ಹಾಡು ಹಗಲೇ ಸಾರ್ವಜನಿಕ ಸ್ಥಳದಲ್ಲಿ ಬಂಗಾರ ಕಳ್ಳತನ ಮಾಡಿದ ಸುದ್ದಿ ತಿಳಿದು ಜನರು ಭಯಭೀತರಾಗಿದ್ದಾರೆ.

ತಾಲೂಕಿನ ಸಾಲಗುಂದ ಗ್ರಾಮದ ಹನುಮೇಶ ಶೆಟ್ಟಿ ವಯಸ್ಸು 67 ಬಂಗಾರ ಕಳೆದುಕೊಂಡ ವೃದ್ಧನಾಗಿದ್ದಾನೆ.ಈತ ಸಿಂಧನೂರಿನಿಂದ ಬೈಕ್ ಮೂಲಕ ತನ್ನ ಸ್ವಗ್ರಾಮ ಸಾಲಗುಂದ ಕ್ಕೆ ತೆರಳುವಾಗ ಇಂದು ಬೆಳಿಗ್ಗೆ 10:30 ಕ್ಕೆ ನಗರದ ಗಂಗಾವತಿ ರಸ್ತೆಯ ರಿಲಾಯನ್ಸ್ ಪೆಟ್ರೋಲ್ ಬಂಕ್ ನ ಪಕ್ಕದ ಹಳ್ಳದ ಹತ್ತಿರ ವೃದ್ಧನ ಬೈಕ್ ತಡೆದ 3-4 ಜನ ನಾವು ಪೋಲಿಸರು ಕಳ್ಳರ ಹಾವಳಿ ಹೆಚ್ಚಾಗಿದ್ದು ನೀನು ಕಳ್ಳ ಎಂದ್ದಾಗ ನಾನು ಕಳ್ಳ ಅಲ್ಲ ನಾನು ಒಬ್ಬ ವ್ಯಾಪಾರಿ ಇದ್ದು ಊರಿಗೆ ಹೊಗುತ್ತಿದ್ದೇನೆ ಎಂದಿದ್ದಾನೆ. ಆದರೂ ಬೈಕ್ ತಡೆದು ಹನುಮೇಶ ಶೆಟ್ಟಿ ಹತ್ತಿರ ಇದ್ದ 2 ಉಂಗುರ ,1 ಸರ ಒಟ್ಟು 3 ತೊಲೆ ಮೇಲ್ಪಟ್ಟು ಬಂಗಾರ ತೆಗೆದುಕೊಂಡು ಪೊಲೀಸರಂತೆ ಗಾಡಿ ಚೆಕ್ ಮಾಡಿದಂತೆ ನಾಟಕ ಮಾಡಿ ನೀನು ಕಳ್ಳ ಅಲ್ಲ ನಿನ್ನ ಬಂಗಾರ ಗಾಡಿಯ ಒಳಗಡೆ ಇಟ್ಟಿದ್ದೇವೆ ಹೋಗು ಎಂದು ಕಳುಹಿಸಿದ್ದಾರೆ. ಸ್ವಲ್ಪ ದೂರದಲ್ಲಿ ಹೋಗಿ ಗಾಡಿ ನಿಲ್ಲಿಸಿ ಬಾಕ್ಸ್ ನಲ್ಲಿ ನೋಡಿದಾಗ ಬಂಗಾರ ಇಲ್ಲದೆ ಇರುವುದನ್ನು ಕಂಡ ವೃದ್ಧ ಎದೆ ಬಡಿದುಕೊಂಡು ಮರಳಿ ಪೆಟ್ರೋಲ್ ಬಂಕ್ ಹತ್ತಿರ ಬಂದು ನೋಡಿದಾಗ ಪೊಲೀಸರು ಎಂದು ಹೇಳಿಕೊಂಡ 3-4 ಜನ ಸ್ಥಳದಲ್ಲಿ ಇಲ್ಲದೆ ಇರುವುದನ್ನು ಕಂಡು ಗಾಬರಿಯಿಂದ ಸಾಲಗುಂದದ ತಮ್ಮ ಮನೆಗೆ ಹೋಗಿ ಕುಟುಂಬಸ್ಥರಿಗೆ ನಡೆದ ವಿಷಯ ತಿಳಿಸಿದ್ದಾನೆ ಎಂದು ಅವರ ಮಗ ಸತ್ಯನಾರಾಯಣ ಪತ್ರಿಕೆಗೆ ತಿಳಿಸಿದ್ದಾರೆ.

ಪೋಲಿಸ್ ಮಹಜರು : ನಗರ ಪೋಲಿಸ್ ಠಾಣೆಗೆ ವ್ರದ್ದ ಮತ್ತು ಅವರ ಸಂಬಂದಿಕರು ವಿಷಯ ತಿಳಿಸಿದಾಗ ಸ್ಥಳಕ್ಕೆ ಆಗಮಿಸಿದ ಸಿಪಿಐ ಉಮೇಶ್ ಕಾಂಬಳೆ, ಪಿಎಸ್ ಐ ಸೌಮ್ಯ ಹಿರೇಮಠ, ಸಂಚಾರಿ ಪಿಎಸ್ ಐ ಬಸವರಾಜ, ಸಿಬ್ಬಂದಿಗಳು ಸ್ಥಳ ಪರಿಶೀಲನೆ ಮಾಡಿ ವ್ರದ್ದನಿಗೆ ದೈರ್ಯ ತುಂಬಿದರು. ಪೋಲೀಸರು ಕಳ್ಳರನ್ನು ಪತ್ತೆ ಹಚ್ಚಲು ಭಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;