ಗೋರೆಬಾಳ ಗ್ರಾ.ಪಂ.ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಯಶಸ್ವಿ…!!!

ಗೋರೆಬಾಳ ಗ್ರಾ.ಪಂ.ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಯಶಸ್ವಿ.

ಸಿಂಧನೂರು : ಏ.1 ತಾಲೂಕಿನ ಗೊರೆಬಾಳ ಗ್ರಾಮ ಪಂಚಾಯಿತಿ 20 ವರ್ಷ ಜೆಡಿಎಸ್ ವಶದಲ್ಲಿದ್ದು ಪ್ರಸ್ತುತ ವರ್ಷ ನಾಗ ಪ್ರಮೀಳಾ ಅಧ್ಯಕ್ಷರಾಗಿದ್ದರು. ಒಟ್ಟು 31 ಜನ ಗ್ರಾಮ ಪಂಚಾಯಿತಿ ಸದಸ್ಯರಲ್ಲಿ ಜೆಡಿಎಸ್ 10 ಜನ, ಕಾಂಗ್ರೆಸ್ 14 , ಬಿಜೆಪಿ 7, ಬೆಂಬಲಿತ ಸದಸ್ಯರಿದ್ದು, ಕೆಲವು ಕಾಂಗ್ರೆಸ್ ಸದಸ್ಯರನ್ನು ತಮ್ಮ ಕಡೆ ಕರೆದುಕೊಂಡು ಜೆಡಿಎಸ್ ಗ್ರಾಮ ಪಂಚಾಯಿತಿಯನ್ನು ತಮ್ಮ ಕೈವಶ ಮಾಡಿಕೊಂಡ ಕಾರಣ ಹೆಚ್ಚು ಸದಸ್ಯರು ಇರುವ ಕಾಂಗ್ರೆಸ್ ಪಕ್ಷ ಅಧಿಕಾರ ದಿಂದ ವಂಚಿತಗೊಂಡಿತ್ತು.

ಮೂರು ಪಕ್ಷಗಳ 22 ಬೆಂಬಲಿತ ಸದಸ್ಯರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಲಿಂಗಸುಗೂರು ಎಸಿ ಗೆ ಮೇ 12 ರಂದು ದೂರು ನೀಡಿದ ಕಾರಣ ಇಂದು ಸಹಾಯಕ ಆಯುಕ್ತರಾದ ರಾಹುಲ್ ಸುಂಕನೂರು ಅವರು ಇಂದು ಅಧ್ಯಕ್ಷರ ಅವಿಶ್ವಾಸ ಗೊತ್ತುವಳಿಗೆ ದಿನಾಂಕ ನಿಗದಿ ಮಾಡಿದ್ದು ಮೂರು ಪಕ್ಷಗಳ ಬೆಂಬಲಿತ 21 ಜನ ಅವಿಶ್ವಾಸ ಪರವಾಗಿ ಕೈ ಎತ್ತಿದರು. ಜೆಡಿಎಸ್ ಬೆಂಬಲಿತ 10 ಜನ ಹಾಗೂ ಕಾಂಗ್ರೆಸ್ ಬೆಂಬಲಿತ ಒಬ್ಬ ಸದಸ್ಯರು ಸೇರಿದಂತೆ ಜೆಡಿಎಸ್ ಮುಖಂಡರು ಅವಿಶ್ವಾಸ ಗೊತ್ತುವಳಿಯಲ್ಲಿ ಭಾಗವಹಿಸದೇ ದೂರ ಉಳಿದಿದ್ದರು.

ಅವಿಶ್ವಾಸ ಗೊತ್ತುವಳಿ ಮಂಡನೆಗೆ 21 ಸದಸ್ಯರು ಬೆಳಗ್ಗೆ 10 ಘಂಟೆಗೆ ಗ್ರಾಮ ಪಂಚಾಯಿತಿಗೆ ಆಗಮಿಸಿ ಅವಿಶ್ವಾಸ ಪರವಾಗಿ ಕೈ ಎತ್ತುವ ಮೂಲಕ ಮತ ಚಲಾವಣೆ ಮಾಡಿದ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಕಳಿಸುತ್ತೇವೆ. ಮುಂದಿನ ತೀರ್ಮಾನ ಜಿಲ್ಲಾಧಿಕಾರಿಗಳು ತೆಗೆದುಕೊಳ್ಳುತ್ತಾರೆ ಎಂದು ಚುನಾವಣಾ ಅಧಿಕಾರಿ ಹಾಗೂ ಸಹಾಯಕ ಆಯುಕ್ತರಾದ ರಾಹುಲ್ ಸುಂಕನೂರು ಪತ್ರಿಕೆಗೆ ಸ್ಪಷ್ಟನೆ ನೀಡಿದರು.

ಅವಿಶ್ವಾಸ ನಿರ್ಣಯ ಯಶಸ್ವಿಯಾದ ಕಾರಣ ಸದಸ್ಯರು ಬಿಜೆಪಿ ಕಾಂಗ್ರೆಸ್ ಮುಖಂಡರು ಪಟಾಕಿ ಸಿಡಿಸಿ ಸಂಭ್ರಸಿದರು.

ಅವಿಶ್ವಾಸದ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ಸಂಸದ ಕೆ. ವಿರುಪಾಕ್ಷಪ್ಪ ರವರು ಜೆಡಿಎಸ್ ಬೆಂಬಲಿತ ಸದಸ್ಯರು ಶಾಸಕರ ಬಲಗೈ ಬಂಟ ಅಧ್ಯಕ್ಷರಾದರು ಕೂಡ ನಾಡಗೌಡರು ತಾವೇ ಪ್ರಜಾ ತಂತ್ರ ವ್ಯವಸ್ಥೆಯನ್ನು ಒಪ್ಪಿಕೊಂಡು ಶಾಸಕರಾಗಿದ್ದವರು, ಈ ವ್ಯವಸ್ಥೆಯಲ್ಲಿ ನಂಬಿಕೆ ಇದ್ದರೆ ಆಗಿಂದಾಗಲೇ ಸರಿಪಡಿಸಬಹುದಿತ್ತು. ಒಬ್ಬ ವ್ಯಕ್ತಿಯ ಕೈ ಗೊಂಬೆಯಾಗಿ ಸುಮ್ಮನೆ ಆಗಿದ್ದಾರೆ ಅಧ್ಯಕ್ಷರ ಮಾಡಿದಕ್ಕೆಲ್ಲಾ ನಾಡಗೌಡರ ಒಪ್ಪಿಗೆ ಇರುವದರಿಂದಲ್ಲೇ ಈ ದುಸ್ಥಿತಿಗೆ ಕಾರಣ.ಗ್ರಾಮ ಪಂಚಾಯತಿಯಲ್ಲಿ 31ಜನ ಸದಸ್ಯರಿದ್ದು 4 ಕ್ಯಾಂಪ್ 2 ಗ್ರಾಮಗಳಿದ್ದು ಕೇವಲ ಶಾಂತಿನಗರದಲ್ಲಿ 5 ಜನ ಸದಸ್ಯರಲ್ಲಿ 2 ಜನ ಸದಸ್ಯರಿಗೆ 80% ಕ್ರಿಯಾ ಯೋಜನೆಯನ್ನು ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯದೇ ಅನುದಾನ ಬಳಕೆಯಾಗಿದೆ.ಇನ್ನುಳಿದ 26 ಗ್ರಾಮ ಪಂಚಾಯತ್ ಸದಸ್ಯರಿಗೆ ಕೇವಲ 20% ಅನುದಾನ ನೀಡಿದ್ದಾರೆ. ತಾಲೂಕಿನ ಶಾಸಕರಿಗೆ 31 ಸದಸ್ಯರ ಪೈಕಿ 5 ಜನರಿಗೆ ಮಾತ್ರ ಕಾಳಜಿ ಇದೇ. ಇದೆಲ್ಲವನ್ನು ಮನಗಂಡು ಅಧ್ಯಕ್ಷರ ಆಡಳಿತದ ಮೇಲೆ ನಂಬಿಕೆ ಇಲ್ಲದೆ ಕಾಂಗ್ರೆಸ್ ಬೆಂಬಲಿತ 12, ಬಿಜೆಪಿ 7, ಜೆಡಿಎಸ್ 2, ಒಟ್ಟಾರೆ 21 ಗ್ರಾಮ ಪಂಚಾಯತ್ ಸದಸ್ಯರು ಒಗ್ಗಟ್ಟಾಗಿ ಸ್ವ ಇಚ್ಛೆಯಿಂದ ಅವಿಶ್ವಾಸ ಮಂಡನೆಗೆ ಸೂಚಿಸಿದ್ದಾರೆ. ಎಲ್ಲಾ ಸದಸ್ಯರಿಗೆ ಅನುಧಾನ ನೀಡುವಂತೆ ಶಾಸಕರಿಗೆ ಜಿಲ್ಲಾಧಿಕಾರಿಗಳಿಗೆ ದೂರ ನೀಡಿದಾಗ ಶಾಸಕ ನಾಡಗೌಡ ಇದನ್ನು ಸರಿಪಡಿಸದೇ ಒಬ್ಬ ವ್ಯಕ್ತಿ ಮಾತು ಕೇಳಿ ಒಂದೇ ಕ್ಯಾಂಪಿಗೆ ಅನುಧಾನ ನೀಡಿ ಉಳಿದ ಸದಸ್ಯರ ಕ್ಷೇತ್ರ ಗಳಿಗೆ ಅನುಧಾನ ನೀಡದೇ ಇರುವುದು ಅವಿಶ್ವಾಸ ಮಂಡನೆಗೆ ಕಾರಣವಾಗಿದೆ ಎಂದರು.

ನಂತರ ಮಾತನಾಡಿದ ಗ್ರಾಮ ಪಂಚಾಯತ್ ಸದಸ್ಯರಾದ ಲಕ್ಷ್ಮಣರಾವ್ ಅವಿಶ್ವಾಸ ನಿರ್ಣಯದ ವಿರುದ್ಧ 22 ಸದಸ್ಯರೆಲ್ಲಾ ಸೇರಿ ಒಟ್ಟಾಗಿ ಒಂದು ಕಡೆ ಸೇರಿದೆವು ರಾತ್ರೋ ರಾತ್ರಿ ಒಬ್ಬ ಸದಸ್ಯನನ್ನು ಕಿಡ್ನಾಪ್ ಮಾಡಿ ದೌರ್ಜನ್ಯದಿಂದ ಎರಡು ಕಾರು ತೆಗೆದುಕೊಂಡು ಬಂದು ಒಂದು ಕಾರಿನಲ್ಲಿ ನಮ್ಮ ಗಮನಕ್ಕೆ ಇಲ್ಲದೆ ಎತ್ತಿಕೊಂಡು ಹೋಗಿದ್ದಾರೆ. ಇಂತಹ ಅಕ್ರಮಗಳು ಬಹಳ ದಿನ ನಡೆಯುವದಿಲ್ಲ. ಇಂದು ಗೋರೆಬಾಳ ಗ್ರಾಮ ಪಂಚಾಯತಿಯಲ್ಲಿ ಧರ್ಮ ಅಧರ್ಮಗಳ ಯುದ್ಧ ನಡೆದಿದೆ, ಇಂದು ಧರ್ಮ ಗೆದ್ದಿದೆ ಎನ್ನುವುದಕ್ಕೆ ಇಂದಿನ ಒಮ್ಮತದ ಅವಿಶ್ವಾಸ ನಿರ್ಣಯವೇ ಕಾರಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೊಲ್ಲಾ ಶೇಷಗಿರಿ ರಾವ್ , ಶಿವನಗೌಡ ಗೋರೆಬಾಳ, ಎಂ.ದೊಡ್ಡ ಬಸವರಾಜ್, ಹನುಮೇಶ ಸಾಲುಗುಂದಾ , ಕಾಂಗ್ರೆಸ ಮುಖಂಡರಾದ ಪಂಪನಗೌಡ ಬಾದರ್ಲಿ,ಬಸವರಾಜ ಹಿರೇಗೌಡ, ಬಾಬುಗೌಡ ಬಾದರ್ಲಿ ,ಸಣ್ಣ ಬೀಮನಗೌಡ, ರಂಗನಗೌಡ ,ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ, ಮಾಜಿ ಅಧ್ಯಕ್ಷರಾದ ಜಾಫರ್ ಜಾಹಗೀರದಾರ್, ಸದಸ್ಯರಾದ ಮುನೀರಪಾಷ, ಎಚ್ ಭಾಷ, ಸುಬ್ಬರಾವ್,ಜೆ ವೀರರಾಜು, ಸೇರಿದಂತೆ ಇತರರಿದ್ದರು.

ಅವಿಶ್ವಾಸ ಗೊತ್ತುವಳಿ ಮಂಡಳಿ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ 1 ಡಿವಾಯ್ ಎಸ್ ಪಿ, 3 ಸಿ ಪಿ ಐ,9 ಪಿ ಎಸ್ ಐ,80 ಪೊಲೀಸ್ ಸಿಬ್ಬಂದಿ ,10 ಮಹಿಳಾ ಪೊಲೀಸ್ , 2
ಡಿ ಆರ್ ವ್ಯಾನ್ ತೂಕಡಿ ನಿಯೋಜನೆ ಮಾಡಲಾಗಿತ್ತು.ಕಾರಣ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮತ್ತು ಸಿಂದ್ರಾಮಯ್ಯ ದೂರವಾಣಿ ಮಾಡಿದ್ದರಿಂದ ಈ ಚುನಾವಣೆಗೆ ಇಷ್ಟೊಂದು ಭದ್ರತೆ ಒದಗಿಸಲಾಗಿತ್ತು.

ಡಿ ವಾಯ್ ಎಸ್ ಪಿ, ವೆಂಕಟಪ್ಪ ನಾಯಕ, ಸಿಪಿಐ ಉಮೇಶ ಕಾಂಬಳೆ ನೇತ್ರತ್ವದಲ್ಲಿ ಸೂಕ್ತ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡುವ ಜೊತೆಗೆ ದಡೆಸೂಗೂರು, ಹಂಚಿನಾಳಕ್ಯಾಂಪ್, ಜವಳಗೇರಾ, ಮಸ್ಕಿ, ಕುಷ್ಟಗಿ, ರಸ್ತೆಯ ಚೆಕಪೋಷ್ಟಗಳಲ್ಲಿ ನಾಕಾಬಂದಿ ಹಾಕಲಾಗಿತ್ತು. ನಗರ ಠಾಣೆ ಪಿಎಸ್ಐ ಸೌಮ್ಯ, ಗ್ರಾಮೀಣ ಪಿ ಎಸ್ ಐ ಯರಿಯಪ್ಪ, ತುರ್ವಿಹಾಳ ಪಿ ಎಸ್ ಐ ಚಂದ್ರಪ್ಪ ಸೇರಿದಂತೆ ಸಿಂಧನೂರು ಉಪ ವಿಭಾಗದ ಪೋಲೀಸ್ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಹಾಜರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend