ಹರಪನಹಳ್ಳಿ ನಿವೃತ್ತ ಶಿಕ್ಷಕ ಇಸ್ಮಾಯಿಲ್ ಎಲಿಗಾರ್ ಅವರಿಗೆ ಜನವಿಜ್ಞಾನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು…!!!

ಹರಪನಹಳ್ಳಿ ನಿವೃತ್ತ ಶಿಕ್ಷಕ ಇಸ್ಮಾಯಿಲ್ ಎಲಿಗಾರ್ ಅವರಿಗೆ ಜನವಿಜ್ಞಾನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು

ಹರಪನಹಳ್ಳಿ:ಜನ ವಿಜ್ಞಾನ ಚಳುವಳಿಯ ಬಗ್ಗೆ ಇರುವ ಆಸಕ್ತಿ ಬದ್ಧತೆ ಹಾಗೂ ಕಾಳಜಿಯನ್ನು ಪರಿಗಣಿಸಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ 2021 22ನೇ ಸಾಲಿನ ಜನ ವಿಜ್ಞಾನ ಪ್ರಶಸ್ತಿಯನ್ನು ಪಟ್ಟಣದ ನಿವೃತ್ತ ಪ್ರೌಢ ಶಿಕ್ಷಕ ಇಸ್ಮಾಯಿಲ್ ಅವರಿಗೆ ನೀಡಿ ಗೌರವಿಸಿದರು.

ಈಚೆಗೆ ತುಮಕೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗಿದೆ .ಇಸ್ಮಾಯಿಲ್ ಎಲಿಗಾರ್ ಅವರು 22 ವರ್ಷ ಪ್ರಾಥಮಿಕ ಶಾಲಾ ಶಿಕ್ಷಣ ಶಿಕ್ಷಕರಾಗಿ . ಹಾಗೂ 13 ವರ್ಷ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ವಿದ್ಯಾರ್ಥಿಯಾಗಿದ್ದಾಗ ಎಸ್, ಎಫ್, ಐ ಸಂಘಟನೆ ನಂತರ ಸಮುದಾಯ ಸಾಂಸ್ಕೃತಿಕ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಇಷ್ಟ ಕೆ ,ಜಿ ,ವಿ, ಎಸ್, ಬಂಡಾಯ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಸಾಕ್ಷರತಾ ಆಂದೋಲನ ಸಂಯೋಜಕರಾಗಿ ಸಂಪನ್ಮೂಲ ವ್ಯಕ್ತಿಗಳಾಗಿ ಕೆಲಸ ಮಾಡಿದ್ದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಇದೇ ವಿಜಯನಗರ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.

ಇವರಿಗೆ ಆಸಕ್ತಿ ಕುರಿತು ಗುರುತಿಸಿ ಜನ ವಿಜ್ಞಾನ ಪ್ರಶಸ್ತಿ ಲಭಿಸಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಡಾ, ಸಿ, ಆರ್, ಚಂದ್ರಶೇಖರ್ ಕಾರ್ಯದರ್ಶಿ ಈ ಬಸವರಾಜ್ ತಿಳಿಸಿದ್ದಾರೆ…

ವರದಿ. ಪ್ರತಾಪ್. ಸಿ. ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend