ಕೊಪ್ಪಳ: ಅಧಿಕ ಪ್ರಮಾಣದ ಭಕ್ತಾದಿಗಳಿಂದ ಹುಲಿಗಿ ಕ್ಷೆತ್ರದ ಉದೋ ಉದೋ ಹುಲಿಗೆಮ್ಮ ದೇವಿಯ ವಿಜೃಂಭಣೆಯ ರಥೋತ್ಸವ….ಕೋಪಳ ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ ಸಾಯಂಕಾಲ 5:30 ಕ್ಕೆ ಬಹಳ ವಿಜೃಂಭಣೆಯಿನ ಜರುಗಿತು. ಕಳೆದ ಎರೆಡು ವರ್ಷಗಳಿಂದ ಕೋವಿಡ್19 ಕಾರಣದಿಂದಾಗಿ ಸುಮಾರು ಒಂದು ತಿಂಗಳ ನೆಡೆಯುವ ಹುಲಿಗೆಮ್ಮ ದೇವಿ ಜಾತ್ರೆಯನ್ನು ರದ್ದುಗೊಳಿಸಲಾಗಿತ್ತು. ಆದ್ದರಿಂದ ಈ ವರ್ಷ ಅಧಿಕ ಪ್ರಮಾಣದಲ್ಲಿ ಭಕ್ತಾದಿಗಳು ಅಮ್ಮನ ರಥೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಯಾವುದೇ ರೀತಿಯ ಭಕ್ತಾದಿಗಳಿಗೆ ತೊಂದರೆಯಾಗದಂತೆ ಇಲ್ಲಿನ ಪೊಲೀಸ್ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಹರಸಾಹಸ ಪಟ್ಟರು ಎಂದರೆ ತಪ್ಪಾಗಲಾರದು.. ಹಾಗೆಯೇ ನಾಳೆ ಬೆಳಿಗಿನ ಜಾವ ನೆಡೆಯುವ ಬಾಳಿದಂಡಿಗೆ ಕಾರ್ಯಕ್ರಮವು ಇಲ್ಲಿನ ವಿಶೇಷ ಕಾರ್ಯಕ್ರಮವಾಗಿದ್ದು ಇದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಭಕ್ತಾದಿಗಳು ಆಗಮಿಸಬಹುದು ಎನ್ನಲಾಗಿದೆ.ಇಲ್ಲಿನ ಕಾರ್ಯನಿರ್ವಹಣಾಧಿಕಾರಿಗಳಾದ ಅರವಿಂದ್ ಅಯ್ಯಪ್ಪ ಸುತಗುಂಡಿ ರವರು ಸಿಬ್ಬಂದಿವರ್ಗದವರಿಗೆ ಜಾತ್ರಾ ಸುರಕ್ಷತೆಯ ಬಗ್ಗೆ ಕಾಳಜಿವಹಿಸಲು ಹಾಗೂ ಗಂಗಾವತಿ,ಕೊಪ್ಪಳ, ಹೊಸಪೇಟೆಗೆ ಭಕ್ತಾದಿಗಳಿಗೆ ಅನುಕೂಲ ದೃಷ್ಟಿಯಿಂದ ವಿಶೇಷ ಬಸ್ಸುಗಳನ್ನು ಬಿಡಲಾಗಿತ್ತು…
ವರದಿ. ಉಮೇಶ್, ಕಂಪ್ಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
