ಹೂಡೇಂ: ಸರ್ಕಾರಿ ಶಾಲಾ ಪ್ರಾರಂಭೋತ್ಸವ ಸಂಭ್ರಮ…!!!

ಹೂಡೇಂ: ಸರ್ಕಾರಿ ಶಾಲಾ ಪ್ರಾರಂಭೋತ್ಸವ ಸಂಭ್ರಮ

ವಿಜಯನಗರ: ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇ-16 ಇಂದು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಿಕ್ಷಣ ಇಲಾಖೆ ಸಜ್ಜಾಗಿದ್ದು. ಬಿರು ಬಿಸಿಲಿನ ಬೇಸಿಗೆ ರಜೆ ಮಜಾ ಅನುಭವಿಸಿದ್ದ ಮಕ್ಕಳು ಮತ್ತೆ ಶಾಲೆಯತ್ತ ಮರಳುತ್ತಿದ್ದು ಪ್ರತಿ ವರ್ಷದಂತೆ ಶೈಕ್ಷಣಿಕ ವರ್ಷ ಆರಂಭದಲ್ಲಿ ವಿದ್ಯಾರ್ಥಿಗಳನ್ನು ವಿನೂತನ ವಿಶೇಷವಾಗಿ ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ, ಶಾಲೆಯ ಮುಖ್ಯದ್ವಾರದಲ್ಲಿ ಮಕ್ಕಳಿಗೆ ಸಿಹಿ, ಹೂವಿನ ಕುಚ್ಚು ನೀಡಿ ಮುಂದಿನ ತರಗತಿಗೆ ಸ್ವಾಗತ ಮಾಡಿಕೊಂಡರು. ಶಾಲೆಯ ಮಕ್ಕಳ ಮನಸ್ಸಿಗೆ ಮುದ ನೀಡಲು ಶಾಲೆಯನ್ನು ಮಾವಿನ ತೋಪು ಹಾಗೂ ಹೂಮಾಲೆ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ತರಗತಿಗೆ ಆಹ್ವಾನ ನೀಡಿದ ದೃಶ್ಯಗಳು ಕಂಡ ಬಂದವು. ಸಂದರ್ಭದಲ್ಲಿ ಮುಖ್ಯಗುರುಗಳಾದ ನರಸಿಂಹ ರೆಡ್ಡಿ ಹಾಗೂ ಶಿಕ್ಷಕರಾದ ಗೋವಿಂದಪ್ಪ, ಮಚ್ಚೇಂದ್ರ, ಅನ್ನಪೂರ್ಣಮ್ಮ, ಎಸ್ಡಿಎಂಸಿ ಅಧ್ಯಕ್ಷರು ಚಿನ್ನ ಓಬಯ್ಯ , ಸದಸ್ಯರು, ಶಾಲಾ ಸಿಬ್ಬಂದಿಗಳು, ಮಕ್ಕಳು ಇದ್ದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend