;

ಛಲವಾದಿ ಜನಾಂಗದಿಂದ ನೆಹರೂ ಓಲೇಕಾರ್ ಗೆ ಸಚಿವ ಸ್ಥಾನ ನೀಡಲು ಒತ್ತಾಯ…!!!

ಛಲವಾದಿ ಜನಾಂಗದಿಂದ ನೆಹರೂ ಓಲೇಕಾರ್ ಗೆ ಸಚಿವ ಸ್ಥಾನ ನೀಡಲು ಒತ್ತಾಯ.

ಹಾವೇರಿ : ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯ ಛಲವಾದಿ ಜನಾಂಗದ ಶಾಸಕರಾದ ನೆಹರೂ ಓಲೇಕಾರ್ ಗೆ ತಮ್ಮ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಲು ಒತ್ತಾಯ.

ಚಲವಾದಿ ಸಮಾಜದಿಂದ ನೆಹರು ಓಲೇಕಾರ ಅವರನ್ನು ಮಂತ್ರಿಯನ್ನಾಗಿ ಮಾಡಬೇಕೆಂದು ಚಲುವಾದಿ ಸಮಾಜದಿಂದ ತಹಸೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಯಾದಗಿರಿ ಜಿಲ್ಲೆಯ ಶಹಾಪೂರ ಚಲವಾದಿ ಮಹಾಸಭಾದ ವತಿಯಿಂದ ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯ ಮೂರನೇ ಬಾರಿಗೆ ಶಾಸಕರಾದ ನೆಹರು ಓಲೇಕರ್ ಗೆ ಸಾಮಾಜಿಕ ನ್ಯಾಯದಡಿಯಲ್ಲಿ ಹಾಗೂ ಬಲಗೈ ಸಮಾಜದ ಒಬ್ಬರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಹಾಗೂ ಹಿಂದಿನ ಸರ್ಕಾರದಲ್ಲಿ ಕನಿಷ್ಠ ಎರಡರಿಂದ ಮೂರು ಜನ ಮಂತ್ರಿಯಾಗಿದ್ದರು ಕಾರಣ ಸತತವಾಗಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಒಂದು ವೇಳೆ ಮಾಡದಿದ್ದರೆ ಛಲವಾದಿ ಜನಾಂಗ ಐವತ್ತು ಲಕ್ಷ ಜನಕ್ಕೆ ಅನ್ಯಾಯವಾದಂತೆ ಇಡೀ ಉತ್ತರ ಕರ್ನಾಟಕ ಛಲವಾದಿ ಜನಾಂಗದವರು ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ದೇವಿಂದ್ರ ಗೌಡೂರ , ಶರಣರಡ್ಡಿ ಹತ್ತಿಗೂಡುರ, ಆರ್ ಕೆ ಅಂಜು,ಶರಣಪ್ಪ ಗಂಗನಾಳ , ಭೀಮರಾಯ ಗಂಗನಾಳ , ಮಹೇಶ್ ಕುಮಾರ್ , ಮಾರ್ತಾಂಡಪ್ಪ ಚಲವಾದಿ , ರಮೇಶ್ ಛಲವಾದಿ ,ನಾಗರಾಜ ಚಲವಾದಿ , ನಿಂಗಪ್ಪ ಛಲವಾದಿ ಇತರರು ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;