ದಲಿತ ಮನೆಗಳಿಗೆ ಬೆಂಕಿ ಲಕ್ಷಾಂತರ ರೂಪಾಯಿ ಹಣ ನಷ್ಟ.
ತುಮಕೂರು : ಜಿಲ್ಲೆಯ, ತುರುವೇಕೆರೆ ತಾಲ್ಲೂಕು, ದಂಡಿನಶಿವರ ಹೋಬಳಿ, ಅಪ್ಪಸಂದ್ರದ ಗುಂಡಿಕಾವಲ್ ಊರಿನ ಈಶ್ವರ ತೋಟದ ವಾಸದ ಮನೆಗೆ ಮೊದಲಿನಿಂದಲೂ ಕಲ್ಲು ಹೊಡಿಯೋದು, ಕರೆಂಟ್ ಕಟ್ ಮಾಡೋದನ್ನ ಮಾಡುತ್ತಿದ್ದರು. ಪೋಲೀಸರಿಗೂ ಸಹ ವಿಷಯ ತಿಳಿಸಿರುತ್ತಾರೆ ಅವರು ಯಾವ ಕ್ರಮಾ ತೆಗೆದುಕೊಳ್ಳದ ಕಾರಣ ಮೇ 04 ಬುಧವಾರ ಮಧ್ಯಾಹ್ನ 1 ರಿಂದ 2 ಘಂಟೆಗೆ ಯಾರೂ ಇಲ್ಲದ ಸಮಯ ನೋಡಿ ಹಗಲಿನಲ್ಲೇ ಸಮಾಜ ಘಾತುಕರು ಕಿಡಿಗೇಡಿಗಳು, ಜಾತೀಯ ಮನೋರೋಗಿಗಳು ಈಶ್ವರ ಅವರ ಮನೆಗೆ ಬೆಂಕಿ ಇಟ್ಟು ಅವರ ಮನೆಯಲ್ಲಿದ್ದ (30000 ತೆಂಗಿನ ಕಾಯಿ, ಕೊಬ್ಬರಿ,) ಬಟ್ಟೆ, ಒಡವೆ ವಸ್ತುಗಳೆಲ್ಲವನ್ನು ಸಂಪೂರ್ಣವಾಗಿ ಸುಟ್ಟು ಭಸ್ಮ ಮಾಡಿರುತ್ತಾರೆ. ಸ್ಥಳಕ್ಕೆ ಪೈರ್ ಇಂಜಿನ್ ಬಂದು ಬೆಂಕಿ ಆರಿಸಿದ್ದು ಆದರೂ ಬೆಂಕಿ ಬರುತ್ತಿದೆ. ಸಿ ಸಿ ಕ್ಯಾಮರ ವನ್ನು ತಿರುಗಿಸಿ ಬೆಂಕಿ ಇಡಲಾಗಿದೆ. ಕೂಡಲೇ ದಂಡಿನಶಿವರ ಪೋಲಿಸ್ ಠಾಣೆಗೆ 2 ರಿಂದ 3 ಬಾರಿ ಪೋನ್ ಮಾಡಿದರೂ ಅವರು ಪೋನ್ ಕರೆಯನ್ನು ದಿಕ್ಕರಿಸಿದ್ದಾರೆ. ಮೇ 5 ರಂದು ಗುರುವಾರ ಸ್ಥಳೀಯ ಶಾಸಕರಿಗೆ ಮನೆಯವರು ವಿಷಯ ತಿಳಿಸಿದಾಗ,ಶಾಸಕರು ದಂಡಿನಶಿವರ ಪೋಲೀಸ್ ಠಾಣೆಗೆ ವಿಷಯ ತಿಳಿಸಿದಾಗ ಬರುತ್ತಿದ್ದೇವೆ ಅಂತ ಹೇಳಿದ್ದಾರೆ. ಅವರ ಮನೆಯ ಸುತ್ತಲೂ ಮೇಲ್ಜಾತಿಯ ಜನ ವಾಸವಾಗಿರುತ್ತಾರೆ 4 ಕಿಲೋಮೀಟರ್ ವರೆಗೂ ಯಾವ ಮನೆಗಳೂ ಇರುವುದಿಲ್ಲ .ಪೋಲಿಸ್ ಅಧಿಕಾರಿಗಳು ಶಾಸಕರು ಹೇಳಿದರೆ ಮಾತ್ರ ಬರೋದಾ ?ಸಾಮಾನ್ಯ ಪರಿಶಿಷ್ಟ ಜನ ಪೋನ್ ಮಾಡಿದರೆ ಅವರು ಲೆಕ್ಕಕ್ಕೆ ಇಲ್ವಾ? ಪೋಲಿಸ್ ಇಲಾಖೆ, ತಹಸೀಲ್ದಾರ್, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೊಂದಿರುವ ಅಸಹಾಯಕ ಜನರಿಗೆ ಸ್ಪಂದಿಸಿ ನ್ಯಾಯ ಕೊಡಿಸಿ ಮನೆಗೆ ಬೆಂಕಿ ಹಚ್ಚಿದ ಸಮಾಜ ಘಾತುಕರಿಗೆ
ಸರಿಯಾದ ಶಿಕ್ಷೆ ಕೊಡಿಸಬೇಕೆಂದು ಇಂದ್ರಯ್ಯ ಹೆಚ್ ,ಅದ್ಯಕ್ಷರು ,ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ರಕ್ಷಣಾ ಒಕ್ಕೂಟ (ರಿ) ಹಾಗೂ ,ಅದ್ಯಕ್ಷರು , ಕರ್ನಾಟಕ ರಾಜ್ಯ ರೈತರ ಸೇವಾ ಸಂಘ (ರಿ)ದ ಪರವಾಗಿ ಇವರು ತುಮಕೂರು ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ದಲಿತ ಕುಟುಂಬಕ್ಕಾದ ನಷ್ಟವನ್ನು ಸರ್ಕಾರ ದಿಂದ ಕೊಡಿಸಬೇಕೆಂದು ಒತ್ತಾಯಿಸುತ್ತಿದ್ದಾರೆ…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
