ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಶಾಸಕರೇ ಪಾಲುದಾರರು – ಬಸನಗೌಡ ಬಾದರ್ಲಿ..
ಸಿಂಧನೂರು : ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಶಾಸಕರು ಪಡೆಯುವ ಪರ್ಷೆಟೆಂಜ್ ನಿಂದಾಗಿ ಕಳಪೆಯಿಂದ ಕೂಡಿರುತ್ತವೆ. ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಶಾಸಕರೇ ಪಾಲುದಾರರು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ತಿಳಿಸಿದರು.
ನಗರದ ಯುವ ಕಾಂಗ್ರೆಸ್ ಕಾಂಗ್ರೆಸ್ ಕಛೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಸಿಂದ್ರಾಮಯ್ಯ ಆಡಳಿತದಲ್ಲಿ ಇಟ್ಟಂತ ಕಾಮಗಾರಿ 24/7 ಕುಡಿಯುವ ನೀರು,ಯುಜಿಡಿ ಕಾಮಗಾರಿ ಟೆಂಡರ್ ಗುತ್ತೆದಾರರು ಮಾಡದೇ ಅನುಭವ ಇಲ್ಲದ ತಮ್ಮ ಪಕ್ಷದ ಕಾರ್ಯಕರ್ತರಿಗೆ ಶಾಸಕರು ಪರ್ಸಂಟೇಜ್ ತೆಗೆದುಕೊಂಡು ಉಪ ಗುತ್ತಿಗೆದಾರಿಗೆ ನೀಡಿದ ಪರಿಣಾಮವಾಗಿ ಕಾಮಗಾರಿಗಳು ಸಂಪೂರ್ಣವಾಗಿ ಕಳಪೆ ಮಟ್ಟದಿಂದ ಕೂಡಿವೆ ಎಂದು ಹೇಳಿದರು .
ನಗರಸಭೆ ಅದ್ಯಕ್ಷರು ಕಾಂಗ್ರೆಸ್ ಪಕ್ಷದವರು ಕಳಪೆ ಕಾಮಗಾರಿಗಳಲ್ಲಿ ಯಾವುದೇ ರಾಜಿಮಾಡಿಕೊಳ್ಳದೆ, ಕಾಮಗಾರಿ ನಡೆಯುವ ಸ್ಥಳಕ್ಕೆ ಅಧಿಕಾರಿಗಳ ಜೊತೆ ಬೇಟಿ ನೀಡಿ ಅದು ಕಳಪೆ ಮಟ್ಟದ್ದಾಗಿದೆ ಎಂದು ತಿಳಿದರೆ ತಕ್ಷಣವೇ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರ ವಿರುದ್ದ ಸೂಕ್ತ ಕ್ರಮ ತೆಗೆದು ಕೊಳ್ಳಬೇಕು, ಇಲ್ಲದಿದ್ದರೆ ಇದರ ವಿರುದ್ದ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ರಾಯಚೂರು ಜಿಲ್ಲೆಯಲ್ಲಿ ಸಿಂಧನೂರು ತಾಲೂಕು ಕಾಂಗ್ರೆಸನಿಂದ 41 ಸಾವಿರ ಸದಸ್ಯತ್ವ ನೋಂದಣಿ ಅಭಿಯಾನ ಮಾಡಲಾಗಿದ್ದು, ಅದರಲ್ಲಿ ಮಹಿಳಾ ಕಾರ್ಯಕರ್ತರ ಪಾತ್ರವೂ ಪ್ರಮುಖವಾಗಿದೆ,ಇದನ್ನು ಗಮನಿಸಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ, ವಿರೋದ ಪಕ್ಷದ ನಾಯಕರಾದ ಸಿದ್ದರಾಮಯ್ಯ ,ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಪುಷ್ಪ ಅಮರನಾಥ್ ಅವರ ಆದೇಶದ ಮೇರೆಗೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ನಿರ್ಮಲ ಬೆಣ್ಣೆ ಯವರು ಆದೇಶ ನೀಡಿದ್ದಾರೆ. ಹೆಚ್ಚು ಮಹಿಳಾ ಸಂಘಟನೆಯಲ್ಲಿ ತೊಡಗಿಸಿಕೊಂಡ ಹಂಪಮ್ಮ ಗಂಡ ಚಂದ್ರಶೇಕರ್ ವಲ್ಕಂದಿನ್ನಿ ಇವರನ್ನು ಸಿಂಧನೂರು ತಾಲೂಕಿನ ಗ್ರಾಮೀಣ ಮಹಿಳಾ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಆದೇಶ ಪತ್ರವನ್ನು ನೀಡಿ, ಒಬ್ಬ ಸಾಮಾನ್ಯ ಮಹಿಳೆ ಹಾಗೂ ಯಾವುದೇ ರಾಜಕೀಯ ಹಿನ್ನಲೆ ಇಲ್ಲದವರನ್ನು ಗುರುತಿಸಿ ಪಕ್ಷ ಜವಾಬ್ದಾರಿ ನೀಡಿದೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಗೆ ಮತ್ತು ಬಲವರ್ಧನೆಗೆ ಶ್ರಮಿಸಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಯಂಕೋಬ ನಾಯಕ ವಲ್ಕಂದಿನ್ನಿ,ಶಿವಕುಮಾರ್ ಜವಳಿ,ಮಹಿಳಾ ಕಾಂಗ್ರೆಸ್ ಸದಸ್ಯರಾದ ನೀಲಮ್ಮ,ಇಂದುಮತಿ ಅನ್ನಪೂರ್ಣಮ್ಮ,ಲಕ್ಷ್ಮಿ, ಸಮೀನಾ, ಶೇಖಾನಬೀ, ಹೇಮಾವತಿ, ರೇಣುಕಾ, ಹನುಮಂತಿ, ಗೌರಮ್ಮ, ಸೇರಿದಂತೆ ಇತರರಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
