ಕಾಂಗ್ರೆಸ್ ಪಕ್ಷ ತತ್ತಿಗಳನ್ನಿಟ್ಟ ಬ್ರಹ್ಮ ರಾಕ್ಷಸ ಪಕ್ಷವಾಗಿದೆ- ಸಚಿವ ಪ್ರಹ್ಲಾದ್ ಜೋಷಿ.
ಸಿಂಧನೂರು : ಕಾಂಗ್ರೆಸ್ ಪಕ್ಷ ತತ್ತಿಗಳನ್ನಿಟ್ಟ ಬ್ರಹ್ಮ ರಾಕ್ಷಸ ಪಕ್ಷವಾಗಿದೆ. ಡಿಕೆಶಿ ತನ್ನ ಅಧಿಕಾರದಲ್ಲಿ ನಡೆದ ಸೋಲಾರ್ ಹಗರಣದ ಬಗ್ಗೆ ಮರೆತು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆಂದರು.
ನಗರದ ಸುಕಾಲಪೇಟೆಯ ಮಾಜಿ ಸಂಸದರು ಹಾಗೂ ಬಿಜೆಪಿ ಮುಖಂಡರಾದ ಕೆ.ವಿರುಪಾಕ್ಷಪ್ಪ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅದ್ಯಕ್ಷರಾದ ಡಿಕೆ ಶಿವಕುಮಾರ ಹುಬ್ಬಳಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಎಲ್ಲಾ ವಿಡಿಯೋಗಳ ಸಮೇತ ಘಟನೆಗೆ ಸಂಭಂಧಿಸಿದವರನ್ನು ಬಂಧಿಸಿರುವದಕ್ಕೆ ಅಮಾಯಕರ ಬಂಧನ ಎಂಬ ಆರೋಪ ಮಾಡುತ್ತಾ ತುಷ್ಟಿಕರಣ ರಾಜಕಾರಣ ಮಾಡುತ್ತಿದ್ದಾರೆಂದು ಕಾನೂನು, ಸಂಸದೀಯ ವ್ಯವಹಾರಗಳ ಕೆಂದ್ರ ಸಚಿವರಾದ ಪ್ರಹ್ಲಾದ ಜೋಷಿ ಹೇಳಿದರು.
ಬಿಜೆಪಿ ಪಕ್ಷ ಸಂಘ ಪರಿವಾರದ ಪಕ್ಷ ಹೌದು, ಪ್ರತಿಯೊಬ್ಬರೂ ಸಂಘ ಪರಿವಾರದಿಂದ ಬಂದವರು ಸಂಘ ಇದ್ದರೆ ಸಮಾಜದ ಕಲ್ಯಾಣ ಸಾದ್ಯ .
ಅಗತ್ಯ ವಸ್ತುಗಳ ಬೆಲೆ ಗಗನಕ್ಕೆರಲು ಕಾಂಗ್ರೆಸ್ ಬೆಂಬಲಿತ ರಾಜ್ಯಗಳಲ್ಲಿ ತೆರಿಗೆ ಕಡಿಮೆ ಮಾಡದ ಕಾರಣ ಹಾಗೂ ಆಮದು ಬೆಲೆಗಳು ಹೆಚ್ಚಾಗಿರುವುದರಿಂದ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಾಗಿವೆಂದರು.
ಏಳು ವರ್ಷಗಳನ್ನು ಪೂರೈಸಿ ಎಂಟನೇ ವರ್ಷದಲ್ಲಿ ಅಧಿಕಾರದಲ್ಲಿದ್ದೆವೆ ಜನ ನಮ್ಮನ್ನು ಒಪ್ಪಿಕೊಂಡಿದ್ದಾರೆ ಉತ್ತರ ಪ್ರದೇಶ ರಾಜ್ಯದಲ್ಲಿ 397 ಕ್ಷೇತ್ರಗಳಲ್ಲಿ ಸ್ಪರ್ದಿಸಿದ್ದ ಕಾಂಗ್ರೆಸ್ ಠೇವಣಿ ಕಳೆದುಕೊಂಡಿದೆ.ನಾವು 2/3 ಬಹುಮತದಲ್ಲಿ ಬಂದಿದ್ದೆವೆ ಇದು ನಾಚಿಕೇಗೆಡಿತನ ಪ್ರಸಂಗ. ಸಿಂಧನೂರು ನಗರಕ್ಕೆ ಮೆಡಿಕಲ್ ಕಾಲೇಜುಗೆ ನಮ್ಮ ಸಹಮತ ಇದೆ ಹಂತ ಹಂತಗಳಲ್ಲಿ ಪ್ರಯತ್ನ ಮಾಡಲಾಗುವದೆಂದು ಸಚಿವರು ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ ಮುನೇನ ಕೊಪ್ಪ, ಸಂಸದರಾದ ಕರಡಿ ಸಂಗಣ್ಣ, ಮಾಜಿ ಸಂಸದರಾದ ಕೆ. ವಿರುಪಾಕ್ಷಪ್ಪ,ಜಿ.ಪ ಸದಸ್ಯರಾದ ಶಿವನಗೌಡ ಗೋರೆಬಾಳ, ಅಹಿಂದ ತಾಲೂಕು ಅದ್ಯಕ್ಷರಾದ ರಾಯಪ್ಪ ವಕೀಲರು, ಹನುಮೇಶ ಸಾಲಗುಂದಾ , ಪೂಜಪ್ಪ ಪೂಜಾರಿ , ನಿಂಗರಾಜ ಹೊಸಳ್ಳಿ , ವೆಂಕೊಬಣ್ಣ ತಿಪ್ಪನಹಟ್ಟಿ ,ಹನುಮಂತರೆಡ್ಡಿ ಹುಡಾ ಸೇರಿದಂತೆ ಬಿಜೆಪಿ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
