ಕೂಡ್ಲಿಗಿ:ಕಿಡ್ನಿ ವೈಫಲ್ಯ ಚಿಕಿತ್ಸೆಗಾಗಿ ಆರ್ಥಿಕ ನೆರವಿಗೆ ಮನವಿ
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ, ಬೀದಿ ಬದಿಯಲ್ಲಿ ಚಿಕ್ಕ ಟೀ ಶಾಪ್ ಹೊಂದಿರುವ. ಎಮ್.ಆರ್.ಉಮೇಶ ರವರು 65ರ ವಯೋಮಾನದವರು. ಅವರ ಮಡದಿ ಎಮ್.ಯು.ಸುಷ್ಮಾ ರವರು 55ವರ್ಷದವರು, ಸುಷ್ಮಾ ಕಳೆದ ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತಿದ್ದಾರೆ.ಸುಷ್ಮಾ ವರ್ಷದಿಂದ ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ, ಪ್ರತಿ ವಾರಕ್ಕೆರೆಡುಬಾರಿ ನಿಯಮಿತವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಕ್ಕಳಿಲ್ಲದ ಇವರು ಚಿಕ್ಕದೊಂದು ದುನೀಯ ಸಿನಿಮಾದ ಹೀರೋ ಹೀರೋಹಿನ್ ರೀತಿಯಲ್ಲಿ, ಟೀ ಶಾಪ್ ನಿಂದ ಬಂದ ಬಿಡಿಗಾಸಲ್ಲೆ ಸರಳ ಅಲ್ಪ ತೃಪ್ತಿ ಜೀವನ ನಡೆಸುತ್ತಿದ್ದಾರೆ. ಆದರೆ ದುತ್ತೆಂದು ಎದುರಾಗಿ ಕಾಡುತ್ತಿರೋದು ಸುಷ್ಮಾರವರಿಗೆ ಕಿಡ್ನಿ ವೈಫಲ್ಯ ಸಮಸ್ಯೆ, ಅವರಿಹೆ ಈವರೆಗೆ ಅಂದಾಜು ಎಂಟು ಲಕ್ಷರೂ ಅಧಿಕ ಹಣ ಚಿಕಿತ್ಸೆಗೆ ಭರಿಸಿದ್ದಾರಂತೆ ಪತಿ ಉಮೇಶ. ಇಂತಹ ಸಂದರ್ಭದಲ್ಲಿ ಇವರಿಗೆ ತಮ್ಮ ಕಿರು ಸಹೋದರ, ತಕ್ಕ ಮಟ್ಟಿಗೆ ಆರ್ಥಿಕ ಸಹಕಾರ ನೀಡಿದ್ದಾರೆಂದು ಸ್ಮರಿಸುತ್ತಾರೆ ಉಮೇಶ. ದುಭಾರಿ ವ್ಯೆಚ್ಚದ ಚಿಕಿತ್ಸೆಗೆ ಸಹೋದರನ ಆರ್ಥಿಕ ನೆರವು ಏನಕ್ಕೂ ಸಾಲದಾಗಿದೆ, ತಾನು ದಿನ ನಿತ್ಯ ಟೀ ವ್ಯಾಪಾರ ಮಾಡಿ ಜೀವನ ಸಾಗಿಸುವುದೇ ದುಸ್ಥರ ಪರಿಸ್ಥಿತಿಯಾಗಿದ್ದು. ಮಡದಿಯ ಅನಾರೋಗ್ಯಕ್ಕೆ ಚಿಕಿತ್ಸೆಗೆ ಪ್ರತಿ ವಾರಕ್ಕೆ ಆರು ಸಾವಿರ ಹಣ ಜೋಡಿಸುವುದು, ನಿಜಕ್ಕೂ ನಿತ್ಯ ಸರ್ಕಸ್ ಆಗಿದೆ ಎನ್ನುತ್ತಾರೆ ಉಮೇಶ. ಕಳೆದ ಎಂಟು ತಿಂಗಳಿಂದ ಮಡದಿ ಸುಷ್ಮಾ ರವರಿಗೆ ಪ್ರತಿ ವಾರಕ್ಕೆರೆಡು ಬಾರಿಯಂತೆ, ಸತತವಾಗಿ ಡಯಾಲಸಿಸ್ ಮಾಡಿಸಯವುದು ಅನಿವಾರ್ಯ ಚಟುವಟಿಕೆಯಾಗಿದೆ. ಒಮ್ಮೆ ಕೂಡ್ಲಿಗಿ ಯಿಂದ ದಾವಣಗೆರೆ ಆಸ್ಪತ್ರೆಗೆ ತೆರಳಿ ಡಯಾಲಿಸಸ್ ಗೆ ಒಳಗಾಗಿ,ಮರಳಿ ಬಂದರೆ ಕನಿಷ್ಠ ಒಟ್ಟು 3.000ರೂ(ಮೂರು ಸಾವಿರ) ಕರ್ಚಾಗುತ್ತದೆ.ಇದರಂತೆ ಪ್ರತಿ ವಾರಕ್ಕೆರೆಡು ಬಾರಿ ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ತೆರಳುತ್ತಿದ್ದು,ತಿಂಗಳಿಗೆ ಒಟ್ಟು 25ಸಾವಿರ ರೂಗಳಂತೆ ಈಗ್ಗೆ ವರ್ಷದಿಂದ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ ಉಮೇಶರವರ ಮಡದಿ ಸುಷ್ಮಾ. ಬೀದಿ ಬದಿಯಲ್ಲಿರುವ ಟೀ ಶಾಪ್ ನಿಂದ ಬರುವ ಅಲ್ಪ ಆದಾಯದಲ್ಲಿ,ನಿತ್ಯದ ಜೀವನ ನಡೆಸುವುದೇ ದುಸ್ಥರವಾಗಿರುವಾಗ. ಮಡದಿಗೆ ಇಂತಹ ದುಭಾರಿ ಚಿಕಿತ್ಸೆ ಕೊಡಿಸುವ ಜವಾಬ್ದಾರಿ ಉಮೇಶರವರ ಹೆಗಲ ಮೇಲಿದೆ,ಮಡದಿಯ ಚಿಕಿತ್ಸೆಗೆಂದು ಅಲ್ಲಲ್ಲಿ ಕೈಗಡ ಸಾಲ ಹಾಗೂ ಸ್ಥಳೀಯ ಖಾಸಗೀ ಬ್ಯಾಂಕ್, ಫೈನಾನ್ಸ್ ಗಳಲ್ಲಿ ತಾವು ಸಾಲ ಮಾಡಿರುವುದಾಗಿ ಉಮೇಶ ಸಂಕಷ್ಟ ಹೇಳಿಕೊಂಡಿದ್ದಾರೆ.

ಉಮೇಶ ರವರು ಮಡದಿ ಸುಷ್ಮಾರವರ ಆರೋಗ್ಯ ಚೇತರಿಕೆಗೆ,ಕಂಡ ಕಂಡ ದೇವರ ಮೊರೆಹೋಗಿದ್ದಾರೆ. ಚಿಕ್ಕ ಚಿಕ್ಕ ಆಸ್ಪತ್ರೆಗಳಿಂದ ದೊಡ್ಡ ದೊಡ್ಡ ಆಸ್ಪತ್ರೆಗಳ ಬಾಗಿಲು ತಟ್ಟಿದ್ದಾರೆ, ಪರಿಣಾಮ ಮಡದಿಯ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡಿದೆ ಅಷ್ಟೇ.. ದುಭಾರಿ ವ್ಯೆಚ್ಚದ ಚಿಕಿತ್ಸೆಯಿಂದಾಗಿ ಭಾರೀ ಸಾಲದ ಹೊರೆ ಅವರ ಹೆಗಲೇರಿದೆ. ಅದಾವುದರ ಪರಿವಿಲ್ಲದವರಂತೆ ಸದಾ ದೇವರ ಧ್ಯಾನದಲ್ಲಿ ಮಿಂದೇಳಯತ್ತಾ, ತಮ್ಮ ಟೀ ಅಂಗಡಿಗೆ ಬರುವ ಗಿರಾಕಿಗಳೊಡನೆ ಹಸನ್ಮುಖರಾಗಿ ವ್ಯವಹರಿಸುವ ಉಮೇಶರವರು.ತಾವು ತಮ್ಮ ಮಡದಿಯ ಚಿಕಿತ್ಸೆಗೆ ಭರಿಸುತ್ತಿರುವ ಹಣ ಹಾಗೂ ಗುಡ್ಡದಂತಹ ಸಾಲದ ಹೊರೆ ಹೊತ್ತರೂ ಕೂಡ, ಸಂಬಂಧಿಸಿದಂತೆ ಯಾರೊಂದಿಗೂ ತಮ್ಮ ಸಂಕಷ್ಟ ಹೇಳಿಕೊಂಡವರಲ್ಲ. ಇದನ್ನರಿತ ಕೆಲ ಅವರ ಆತ್ಮೀಯ ಸಹೃದಯವಂತರು ಅವರಿಗೆ,ಒಡಲಾಳದ ನೋವನ್ನು ಹೊರಹಾಕುವಂತೆ ಮತ್ತು ತಾವು ಹೊತ್ತಿರುವ ಸಾಲದ ಹೊರೆಯ ಕುರಿತು. ತಮ್ಮ ಸಂಕಷ್ಟದ ಕುರಿತು ಸಮಾಜದೊಂದಿಗೆ ಹಂಚಿಕೊಳ್ಳವಂತೆ,ಮತ್ತು ನೆರೆವಿಗೆ ಕೋರುವಂತೆ ಉಮೆಶರಿಗೆ ಒತ್ತಾಯಿಸಿದಾಗ.ಉಮೇಶರವರು ತಮ್ಮ ಒಡಲಾಳದ ನೋವನ್ನ ಹೊರಹಾಕಿದ್ದಾರೆ. ಮಡದಿ ಸುಷ್ಮಾರವರು ಸಾಕಷ್ಟು ಭಾರಿ ಡಯಾಲಿಸಸ್ ಹಾಗೂ ಇತರೆ ದುಭಾರಿ ಚಿಕಿತ್ಸೆ ಹೊಂದಬೇಕಿದ್ದು, ಅದಕ್ಕಾಗಿ ತಿಂಗಳಾ ಕನಿಷ್ಠ 25ಸಾವಿರ ಹಣ ಖರ್ಚಾಗಲಿದೆ. ಟೀ ಶಾಪ್ ನಿಂದ ಬರುವ ಬಿಡಿಗಾಸು ನಿತ್ಯ ಜೀವನ ನಡೆಯದಂತಾಗಿದೆ, ಇಂತಹ ಸಂದರ್ಭದಲ್ಲಿ ಸಾಲದ ಹೊರೆ ವಾರ ವಾರ ಏರುತ್ತಿದೆ ಇನ್ನೂ ಲಕ್ಷ ಗಟ್ಟಲೆ ಹಣ ಚಿಕಿತ್ಸೆಗೆ ಅಗತ್ಯವಿದೆ.

ಕಾರಣ ಉಮೇಶರವರು ನಾಡಿನ ಸಮಸ್ತ ಸಹೃದಯವಂತ ದಾನಿಗಳಲ್ಲಿ, ಈ ಮೂಲಕ ತಮ್ಮ ಮಡದಿ ಸುಷ್ಮಾರವರ ಚಿಕಿತ್ಸೆಗಾಗಿ ಆರ್ಥಿಕ ನೆರವನ್ನು ಕೋರಿದ್ದಾರೆ. ಕಾರಣ ಸಹೃದಯ ವಂತ ದಾನಿಗಳು ಉಮೇಶರವರ ಮಡದಿ ಸುಷ್ಮಾ ರವರ (ಕರ್ನಾಟಕ ಬ್ಯಾಂಕ್ ಕೂಡ್ಲಿಗಿ ಶಾಕೆಯ ಉಳಿತಾಯ ಖಾತೆ ಸಂಖ್ಯೆ:3582500100115801) (Ifsc code KARB0000358) ನಂ ಗೆ ನೆರವಿನ ಹಣ ಸಂದಾಯ ಮಾಡಬಹುದಾಗಿದೆ.ಆರ್ಥಿಕ ನೆರವು ಅಥವಾ ಮತ್ತಾವುದೋ ರೀತಿಯಲ್ಲಾದರೂ ಸಹಕಾರ ನೀಡಬೇಕೆಂದು ಬಯಸುವವರು,ಖುದ್ದು ಸಂಪರ್ಕಿಸಿ ನೆರವು ನೀಡಬಹುದಾಗಿದೆ.
ಟೀ ಶಾಪ್ ಉಮೇಶರವರ ವಿಳಾಸ : ಎಮ್.ಅರ್.ಉಮೇಶ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರ ಕೂಡ್ಲಿಗಿ ಪಟ್ಟಣ, ವಿಜಯನಗರ ಜಿಲ್ಲೆ-583135. ಮೊ ನಂ +91 97313 10824 ಸಂಪರ್ಕಿಸಬಹುದಾಗಿದೆ ಎಂದು ಈ ಮೂಲಕ ಟೀಶಾಪ್ ಉಮೇಶರವರು ಕೋರಿದ್ದರೆ.

ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
