;

ಮಾನ್ಯ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣ ರವರಿಂದ ವಿವಿಧ ಕಾಮಗಾರಿಗಳ ಮತ್ತು ನೂತನ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ.
ಮಾನ್ಯ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣ ರವರಿಂದ ವಿವಿಧ ಕಾಮಗಾರಿಗಳ ಮತ್ತು ನೂತನ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮ.
ಸುಮಾರು ವರ್ಷಗಳ ತಲೆಮಾರಿನ ಬೇಡಿಕೆಗಳಾದ ಹೂಡೇಂ ಗ್ರಾಮದಲ್ಲಿ ಸುಮಾರು 175.00 ಲಕ್ಷಗಳ ವೆಚ್ಚದಲ್ಲಿನಿರ್ಮಾಣವಾಗಿರುವ ಹೂಡೇO. ತಾಯಕನಹಳ್ಳಿ ಇಂದ ಸೂರವ್ವನಹಳ್ಳಿ ಗೆ ಹೋಗುವ ಸೇತುವೆ ನಿರ್ಮಾಣದ ಉದ್ಘಾಟನೆಯನ್ನು ಮಾಡಿದರು, ನಂತರ ಕಾನಹೊಸಹಳ್ಳಿ ಗ್ರಾಮದ ರೂ.200 ಲಕ್ಷಗಳ ಅನುದಾನದ ಆರೋಗ್ಯ ಕೇಂದ್ರ ಕಟ್ಟಡದ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದರು,
ನಂತರ ಆರೋಗ್ಯ ಕೇಂದ್ರದಲ್ಲಿ ಪ್ರತಿಯೊಂದು ಕೋಣೆಗಳಲ್ಲಿ ಸುತ್ತಾಡಿ ತಾಲೂಕು ವೈದ್ಯಾಧಿಕಾರಿಗಳ ಜೊತೆ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳ ಜೊತೆ ಆರೋಗ್ಯ ಕೇಂದ್ರದ ಸಮಸ್ಯೆಗಳನ್ನು ಆಲಿಸಿದರು.ಆದಷ್ಟು ಆರೋಗ್ಯ ಕೇಂದ್ರದ ಕೇಂದ್ರಸ್ಥಾನದಲ್ಲಿ ವೈದ್ಯಾಧಿಕಾರಿಗಳು ಇದ್ದು ಕರ್ತವ್ಯ ನಿರ್ವಹಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಹೇಳಿದರು, ಅಲ್ಲಿಂದ ಹೊಸಹಳ್ಳಿ ಹೋಬಳಿಯ ರೂ. 30 ಲಕ್ಷಗಳಲ್ಲಿ ನಿರ್ಮಾಣವಾದ ನೂತನ ಗ್ರಂಥಾಲಯದ ಕೊಠಡಿಯನ್ನು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಗ್ರಂಥಪಾಲಕರಿಗೆ ಉತ್ತಮವಾದ ಪತ್ರಿಕೆ, ಕತೆ-ಕಾದಂಬರಿಗಳ ಪುಸ್ತಕಗಳು ಗ್ರಂಥಾಲಯಕ್ಕೆ ತರಿಸಿಕೊಳ್ಳಲು ಹೇಳಿದರು, ನಂತರ ಸುಖಾಸುಮ್ಮನೆ ಕುಳಿತು ಗ್ರಂಥಾಲಯದಲ್ಲಿ ಕಾಲಕಳೆಯುವ ರಿಗೆ ಅವಕಾಶ ಕಲ್ಪಿಸಿ ಕೊಡಬೇಡಿ ಓದುಗರಿಗೆ ಅವಕಾಶ ಕೊಡಿ ಎಂದು ಹೇಳಿದರು.
ಹಾಗೂ ಚಿಕ್ಕಜೋಗಿಹಳ್ಳಿ ಸಮುದಾಯ ಕೇಂದ್ರದ ರೂ 80 ಲಕ್ಷಗಳ ವೆಚ್ಚದಲ್ಲಿ ನಿರ್ಮಾಣವಾದ ಎರಡು ನರ್ಸ್ಗಳ ಕೊಠಡಿ, ಡಿ ಗ್ರೂಪ್ ನೌಕರರ ಕೊಠಡಿಗಳನ್ನು ಉದ್ಘಾಟನೆಮಾಡಿದರು. ನಂತರ ಆಸ್ಪತ್ರೆ ಕೊಠಡಿಗಳನ್ನು ವೀಕ್ಷಣೆ ಮಾಡಿ ಆಸ್ಪತ್ರೆಯ ಮೂಲಭೂತ ಸೌಕರ್ಯಗಳ ಬಗ್ಗೆ, ಇನ್ನು ಹಲವಾರು ಸಮಸ್ಯೆಗಳ ಬಗ್ಗೆ ವೈದ್ಯರೊಂದಿಗೆ ಚರ್ಚೆ ಮಾಡಿ ಇನ್ನು ಕೆಲವು ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸಲಾಗುವುದು ಎಂದು ಮಾನ್ಯ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣ ರವರು ತಾಲೂಕು ವೈದ್ಯಾಧಿಕಾರಿಗಳಿಗೆ ತಿಳಿಸಿದರು,
ಉದ್ಘಾಟನೆ ಕಾರ್ಯಕ್ರಮದಲ್ಲಿ
ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು,eo ರವಿಕುಮಾರ್, tho ಡಾಕ್ಟರ್ ಸಮ್ಮುಖ ನಾಯ್ಕ್,pred Aeeಮಲ್ಲಿಕಾರ್ಜುನ್. Rws aee ಸುದರ್ಶನ್ ರೆಡ್ಡಿ,, Rws, aee ಮರಿಸ್ವಾಮಿ, J E ನಾಗನಗೌಡರು, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೆಟಿ ತಿಪ್ಪೇಸ್ವಾಮಿ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ರೇವಣ್ಣ, ಮಾಜಿ ತಾಲೂಕು ಪಂಚಾಯಿತಿ ಸದಸ್ಯರುಗಳಾದ ಮಂಜುನಾಥ,ಪಾಪ ನಾಯಕ್,ರಾಜು ನಾಯ್ಕ್, ಚಿಕ್ಕಜೋಗಿಹಳ್ಳಿ ತಾಂಡ ಜಯಕುಮಾರ್ ನಾಯ್ಕ್, ಶಾಸಕರ ಆಪ್ತ ಸಹಾಯಕರಾದ ಶ್ರೀಕಾಂತ್, ಹೊಸಹಳ್ಳಿ ಕೊಲುಮೆ ಹಟ್ಟಿ ವೆಂಕಟೇಶ್, ವೀರೇಶ್ ಕಿಟ್ಟಪ್ಪ ನವರ್, ಬೊಮ್ಮಣ್ಣ, ನಾಗೇಶ್, ಹೇಮಂತ್ ಕುಮಾರ್, ಸಿದ್ದಪ್ಪ, ಕಾನಹೊಸಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮಣ್ಣ ಚಾಮನೂರು ಮತ್ತು ಸಿಬ್ಬಂದಿ, ಎಲ್ಲಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಮುಖಂಡರು ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ ಡಿ ಎಂ ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;