ಮಾನವ ಕಳ್ಳಸಾಗಾಣಿಕೆದಾರರ ಬಗ್ಗೆ ಎಚ್ಚರಿಕೆ ಇರಲಿ. ಅವರು ತೋರಿಸೋ ಆಮಿಷಕ್ಕೆ ಬಲಿಯಾಗಬೇಡಿ. ಮರುಳಾಗಲೂ ಬೇಡಿ. ಮಾನವ ಕಳ್ಳ ಸಾಗಾಣಿಕೆ ಮಾಡುವವರು ವೃತ್ತಿಪರ ಅಪರಾಧಿಗಳಾಗಿರುತ್ತಾರೆ. ಇವರು ಬೇರೆ ಬೇರೆ ರಾಜ್ಯಗಳಲ್ಲಿ ಮತ್ತು ಬೇರೆ ಬೇರೆ ದೇಶಗಳಲ್ಲಿ ತಮ್ಮ ಸಂಪರ್ಕಗಳನ್ನು ಇಟ್ಟುಕೊಂಡಿರುತ್ತಾರೆ.ಇಂತಹ ಅಪರಾಧಿಗಳನ್ನು ಹಿಡಿದು ಮಟ್ಟಹಾಕುವುದು ಪೊಲೀಸರಿಗೆ ಸುಲಭದ ಕೆಲಸವಲ್ಲ. ಆದ್ದರಿಂದ ಜನಸಾಮಾನ್ಯರು ಜಾಗೃತರಾಗಿರಬೇಕು. ಪೊಲೀಸರು ಮಾನವ ಕಳ್ಳಸಾಗಾಣಿಕೆದಾರರನ್ನು ಮಟ್ಟ ಹಾಕುವಲ್ಲಿ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಆಗ್ರಹಿಸಿದರು.
ಜಿಲ್ಲಾ ವಕೀಲರ ಸಂಘ ಚಿತ್ರದುರ್ಗ ಜಿಲ್ಲಾ ಚಿತ್ರದುರ್ಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮಹಿಳಾಮತ್ತುಮಕ್ಕಳಅಭಿವೃದ್ಧಿಇಲಾಖೆ ಜಿಲ್ಲಾ ಪೊಲೀಸ್ ಇಲಾಖೆ ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮಾನವ ಕಳ್ಳ ಸಾಗಾಣಿಕೆ ಬಗ್ಗೆ ಡಾನ್ ಬಾಸ್ಕೋ ಸಂಸ್ಥೆಯಲ್ಲಿ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು.ಈ ಕಾರ್ಯಗಾರವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿಕೆ ಗಿರೀಶ್ ಅವರು ಉದ್ಘಾಟನೆ ಮಾಡಿದರು ನಂತರ ಮಾತನಾಡಿ ಇದೊಂದು ಬಹುದೊಡ್ಡ ಪಿಡುಗು ಪೊಲೀಸ್ ಅಧಿಕಾರಿಗಳು ಸಕ್ರಿಯವಾಗಿ ಸೂಕ್ಷ್ಮವಾಗಿ ಗಮನಿಸಿದಾಗ ಇಂತಹ ಅಪರಾಧಿಗಳನ್ನು ಪತ್ತೆಹಚ್ಚಬಹುದು ಮಾನವ ಕಳ್ಳ ಸಾಗಾಣಿಕೆ ದಾರರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ಕೊಡಿಸಿದರೆ ಇಂತಹ ಅಪರಾಧಗಳು ಸಮಾಜದಲ್ಲಿ ಕಡಿಮೆಯಾಗುತ್ತದೆ ಎಂದರು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಸಿ ಶಿವು ಯಾದವ್ ಮಾತನಾಡಿ ಮಾನವ ಕಳ್ಳಸಾಗಣಿಕೆಯು ಅಭಿವೃದ್ಧಿಶೀಲ ರಾಷ್ಟ್ರಗಳ ಗಂಭೀರ ಸ್ವರೂಪದ ಅಪರಾಧವಾಗಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳ ಮತ್ತು ಮಹಿಳೆಯರ ಕಳ್ಳ ಸಾಗಾಣಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಅಶಕ್ತರು ಅಸಮರ್ಥರು ಮಹಿಳೆಯರು ಮಕ್ಕಳು ವಿಧವೆಯರು ವೇಶ್ಯೆಯರು ಈ ಮಾನವ ಕಳ್ಳ ಸಾಗಾಣಿಕೆಯ ದಂದೆಯ ಬಲಿಪಶುಗಳಾಗುತ್ತಾರೆ ಎಂದರು.ಮಾನವ ಕಳ್ಳಸಾಗಾಣಿಕೆದಾರರ ಬಗ್ಗೆ ಎಚ್ಚರಿಕೆ ಇರಲಿ. ಅವರು ತೋರಿಸೋ ಆಮಿಷಕ್ಕೆ ಬಲಿಯಾಗಬೇಡಿ. ಮರುಳಾಗಲೂ ಬೇಡಿ. ಮಾನವ ಕಳ್ಳ ಸಾಗಾಣಿಕೆ ಮಾಡುವವರು ವೃತ್ತಿಪರ ಅಪರಾಧಿಗಳಾಗಿರುತ್ತಾರೆ. ಇವರು ಬೇರೆ ಬೇರೆ ರಾಜ್ಯಗಳಲ್ಲಿ ಮತ್ತು ಬೇರೆ ಬೇರೆ ದೇಶಗಳಲ್ಲಿ ತಮ್ಮ ಸಂಪರ್ಕಗಳನ್ನು ಇಟ್ಟುಕೊಂಡಿರುತ್ತಾರೆ. ಇಂತಹ ಅಪರಾಧಿಗಳನ್ನು ಹಿಡಿದು ಮಟ್ಟಹಾಕುವುದು ಪೊಲೀಸರಿಗೆ ಸುಲಭದ ಕೆಲಸವಲ್ಲ. ಆದ್ದರಿಂದ ಜನಸಾಮಾನ್ಯರು ಜಾಗೃತರಾಗಿರಬೇಕು. ಪೊಲೀಸರು ಮಾನವ ಕಳ್ಳಸಾಗಾಣಿಕೆದಾರರನ್ನು ಮಟ್ಟ ಹಾಕುವಲ್ಲಿ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಆಗ್ರಹಿಸಿದರು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಮಾತನಾಡಿ ಪ್ರಸ್ತುತ ಸಂದರ್ಭದಲ್ಲಿ ಎಲ್ಲಾ ಜನಸಾಮಾನ್ಯರು ಕಾನೂನುಗಳನ್ನು ಗೌರವಿಸಬೇಕು. ಅವಶ್ಯಕತೆ ಬಿದ್ದಾಗ ಪೋಲಿಸ್ ಇಲಾಖೆಗೆ ಸಹಕಾರ ನೀಡಬೇಕು. ಪೋಷಕರು ಮಕ್ಕಳಿಗೆ ಹೆಚ್ಚುಹೆಚ್ಚಾಗಿ ಮೊಬೈಲ್ ಗಳನ್ನು ಕೊಡಬಾರದು. ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚೆಚ್ಚು ನಡೆಯುತ್ತಿವೆ. ಮೊಬೈಲಿಂದ ಮಕ್ಕಳು ಗೀಳು ಚಟಕ್ಕೆ ಬೀಳುತ್ತಾರೆ. ಅದರಿಂದ ಅವರ ವಿದ್ಯಾಭ್ಯಾಸ ಕುಂಠಿತವಾಗುತ್ತದೆ ಎಂದು ತಿಳಿಸಿದರುಉಪನ್ಯಾಸ ನೀಡಿದ ಎಲ್ಲಪ್ಪ ಜಲಗಾರ ಅವರು ಮಾನವ ಕಳ್ಳಸಾಗಣಿಕೆ ಬಗ್ಗೆ ಅಮೂಲಾಗ್ರವಾಗಿ ಸುದೀರ್ಘವಾಗಿ ಐಪಿಸಿ 370 ಮತ್ತು ಐಟಿಪಿ ಆಕ್ಟ್ ಬಗ್ಗೆ ಹಾಗೂ ಪೋಲೀಸಿನವರು ದೂರು ದಾಖಲಿಸುವ ಬಗೆ, ದೂರನ್ನು ತನಿಖೆ ಮಾಡುವ ಬಗೆ, ಅಪರಾಧಿಗಳನ್ನು ಹಿಡಿದು ಜೈಲಿಗೆ ಕಳುಹಿಸುವ ಬಗೆ, ಅವರಿಗೆ ನ್ಯಾಯಾಲಯದಿಂದ ಕಠಿಣ ಶಿಕ್ಷೆ ಕೊಡಿಸುವ ಬಗ್ಗೆ ಹಾಗೂ ನ್ಯಾಯಾಲಯಕ್ಕೆ ದೋಷಾರೋಪಣ ಸಲ್ಲಿಸುವ ಬಗ್ಗೆ ಸುದೀರ್ಘವಾಗಿ ಉಪನ್ಯಾಸ ನೀಡಿದರು.
ಈ ಸಭೆಯ ಅಧ್ಯಕ್ಷತೆಯನ್ನು ಫಾದರ್ ರೆವರೆಂಡ್ ವಹಿಸಿದ್ದರು, ವಕೀಲರ ಸಂಘದ ಉಪಾಧ್ಯಕ್ಷರಾದ ದಯಾನಂದ್ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳಾದ ಲೋಕೇಶ್ವರಪ್ಪ ಜಿಲ್ಲೆಯ ಎಲ್ಲಾ ತಾಲೂಕುಗಳ ಸಿಡಿಪಿಓ ಅಧಿಕಾರಿಗಳು ಅನೇಕ ಪೊಲೀಸ್ ತನಿಖಾಧಿಕಾರಿಗಳು ಭಾಗವಹಿಸಿದ್ದರು..

ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
