ಬೆಂಗಳೂರು: ಬೆಳ್ಳಂಬೆಳಿಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶಾಕ್ ಕೊಟ್ಟಿದೆ.
ಹೌದು, ಏಕಕಾಲಕಕ್ಕೆ ಬೆಂಗಳೂರಿನ 9 ಕಡೆಗಳಲ್ಲಿ 100 ಅಧಿಕಾರಿಗಳಿಂದ ದಾಳಿ ನಡೆಸಲಾಗಿದೆ.
ಇಂದು ಬೆಳಿಗ್ಗೆ ಎಸ್ ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಹಾಗೂ ಇನ್ನಿತರ ಜಾಗಗಳ ಮೇಲೆ ದಾಳಿ ನಡೆಸಿದ್ದು, ಕಡತಗಳ ಪರಿಶೀಲನೆಯನ್ನು ನಡೆಸಲಾಗುತ್ತಿದೆ.
ಕೇವಲ ಸರ್ಕಾರಿ ಅಧಿಕಾರಿಗಳಷ್ಟೇ ಅಲ್ಲದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದ ಮದ್ಯವರ್ತಿಗಳ ನಿವಾಸದ ಮೇಲೆಯೂ ಎಸಿಬಿ ದಾಳಿ ಮಾಡಿದೆ.
ಯಾವ ಅಧಿಕಾರಿ ಮೇಲೆ, ಎಲ್ಲೆಲ್ಲಿ ಎಸಿಬಿ ದಾಳಿ ನಡೆದಿದೆ?
1) ರಾಘು ಬಿ.ಎನ್, ಚಾಮರಾಜಪೇಟೆ
2) ಮೋಹನ್, ಮನೋರಾಯನಪಾಳ್ಯ, ಆರ್ ಟಿ ನಗರ
3) ಮನೋಜ್, ದೊಮ್ಮಲೂರು
4) ಮುನಿರತ್ನ, ಮಲ್ಲತಹಳ್ಳಿ
5) ತೇಜು ಅಲಿಯಾಸ್ ತೇಜಸ್ವಿ, ಆರ್ ಆರ್ ನಗರ
6) ಅಶ್ವಥ್, ಮುದ್ದಿನಪಾಳ್ಯ, ಮಲ್ಲತಹಳ್ಳಿ
7) ರಾಮ, ಚಾಮುಂಡೇಶ್ವರಿನಗರ ಬಿಡಿಎ ಲೇಔಟ್
8) ಲಕ್ಷ್ಮಣ, ಚಾಮುಂಡೇಶ್ವರಿನಗರ ಬಿಡಿಎ ಲೇಔಟ್
9) ಚಿಕ್ಕಹನುಮಯ್ಯ, ಮುದ್ದಿನಪಾಳ್ಯ.

ವರದಿ.ಮಂಜುನಾಥ್, ಎನ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
