;

ಕರುನಾಡ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿಗೆ ಕು ಕಾರ್ತಿಕ ಆಚಾರ್ಯ ಎಂ ಕಲ್ಲಹಳ್ಳಿ ಆಯ್ಕೆ…!!!

ಕರುನಾಡ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿಗೆ ಕು ಕಾರ್ತಿಕ ಆಚಾರ್ಯ ಎಂ ಕಲ್ಲಹಳ್ಳಿ ಆಯ್ಕೆ.

ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಮುಸುಕಿನ ಕಲ್ಲಹಳ್ಳಿ ಗ್ರಾಮದ ಶ್ರೀಮತಿ ಶೋಭಾ ಬಸವರಾಜ ಆಚಾರ್ಯರವರ ಸುಪುತ್ರರಾದ ಕು.ಕಾರ್ತಿಕ ಆಚಾರ್ಯ ಆಯ್ಕೆಯಾಗಿರುವ ವಿಷಯ ತಿಳಿಸಲು ತುಂಬಾ ಸಂತೋಷವಾಗುತ್ತದೆ.ಕಳೆದ ಐದಾರು ವರ್ಷಗಳಿಂದ ಸಮಾಜದಲ್ಲಿ,ಸಾಹಿತ್ಯವಾಗಿ,ಸಂಘಟನಾತ್ಮವಾಗಿ,ನಿರೂಪಕರಾಗಿ ,ಒರ್ವಯುವಚಿಂತಕರಾಗಿ ಬಹುಮುಖಿಯಾಗಿ ಗುರುತಿಸಿಕೊಂಡು ಸದಾ ಕ್ರಿಯಾತ್ಮಕತೆಯ ಹಾದಿಯಲ್ಲಿಯೇ ಸಾಗುತ್ತಿದ್ದು ಇವರ ಗಣನೀಯ ಕನ್ನಡಮ್ಮನ ಸೇವೆ ಮಾಡುತ್ತಾ ಬಂದಿರುವುದನ್ನು ಗುರುತಿಸಿದ “ರಾಜ್ಯ ಮಹಿಳಾ ಕರುನಾಡ ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿಕ ಕಲಾ ತಂಡ”(ರಿ),ಚಿತ್ರದುರ್ಗ ಇವರು 24/4/2022ರಂದು ಪ್ರಶಸ್ತಿಯನ್ನು ಪ್ರಧಾನ ಮಾಡಲು ನಿರ್ಧರಿಸಿದೆ. ಮೊಬೈಲ್ ಗೀಳಿನಿಂದ ಹೊರಬರದ ಈ ಕಾಲದಲ್ಲಿ ತಮ್ಮ ಚಿಕ್ಕ ವಯಸ್ಸಿನಲ್ಲಿ ವಿಧ್ಯಾಭ್ಯಾಸದ ಜೊತೆ-ಜೊತೆಗೆ ಹಲವಾರು ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಧನೆಯ ಹಾದಿಯಲ್ಲಿ ರಾಜ್ಯ ಪ್ರಶಸ್ತಿಗಳನ್ನು & ಸಂಘ ಸಂಸ್ಥೆಗಳಿಂದಲು ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡು ಕನ್ನಡ ತಾಯಿಯ ಸೇವೆಯಲ್ಲಿ ಸಾಗುತ್ತಿರುವ ಸರಳ ಹಾಗೂ ಸಹೃದಯಿ ಸ್ನೇಹಮಹಿ ಜೀವಿಯಾದ ನಮ್ಮೆಲ್ಲರ ಎಂ.ಕಲ್ಲಹಳ್ಳಿಯ ಕಾರ್ತಿಕ್ ಆಚಾರ್ಯರಿಗೆ ಸ್ನೇಹಬಳಗ, ಸಂಘಸಂಸ್ಥೆಗಳು ಹರ್ಷವ್ಯಕ್ತಪಡಿಸುತ್ತಾ ಶುಭಕೋರಿವೆ,ಇವರ ಈ ಸಾಧನೆಯ ಪಥ ಹೀಗೆ ಸಾಗಲೆಂದು ನಮ್ಮ ಪತ್ರಿಕೆಯ ಆಶಯ .

ವರದಿ: ಪ್ರಕಾಶ್ ಆಚಾರ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;