;

ರೈತರಿಗೆ ವಿದ್ಯುತ್ ನೀರು ಕೊಟ್ಟಾಗ ಅವರ ಬಾಳು ಹಸನಾಗುತ್ತದೆ- ವೆಂಕಟರಾವ್ ನಾಡಗೌಡ…!!!

ರೈತರಿಗೆ ವಿದ್ಯುತ್ ನೀರು ಕೊಟ್ಟಾಗ ಅವರ ಬಾಳು ಹಸನಾಗುತ್ತದೆ- ವೆಂಕಟರಾವ್ ನಾಡಗೌಡ.

ಸಿಂಧನೂರು : ಲಿಪ್ಟ್ಇರಿಗೇಶನ್ ಪಿಕಪ್ ಡ್ಯಾಮ್ ಗಳನ್ನು ಮಾಡಿ ಕೆಳಭಾಗದ ರೈತರಿಗೆ ಒಂದು ಬೆಳೆಗಾದರೂ ಸಂಪೂರ್ಣವಾಗಿ ನೀರು ಒದಗಿಸುವ ನಿಟ್ಟಿನಲ್ಲಿ
ಅನುಕೂಲಕ್ಕಾಗಿ ಮಾಡಲಾಗಿದೆ ರೈತರಿಗೆ ವಿದ್ಯುತ್ ನೀರು ಕೊಟ್ಟಾಗ ಅವರ ಬಾಳು ಹಸನಾಗುತ್ತದೆಂದು ವೆಂಕಟರಾವ್ ನಾಡಗೌಡ ಹೇಳಿದರು.

ಗ್ರಾಮೀಣ ಭಾಗದ ವಿವಿಧ ಗ್ರಾಮಗಳಲ್ಲಿ,ಚನ್ನಳ್ಳಿ ಗ್ರಾಮದಲ್ಲಿಲೋಕೋಪಯೋಗಿ ಇಲಾಖೆಯಿಂದ 30.00 ಲಕ್ಷ ರೂಗಳ ವೆಚ್ಚದಲ್ಲಿ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆ ಅಡಿಯಲ್ಲಿ ಸಿ ಸಿ ರಸ್ತೆ ,
ಮಾವಿನಮಡುಗು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ 30.00 ಲಕ್ಷ ರೂಗಳ ವೆಚ್ಚದಲ್ಲಿ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆ ಅಡಿಯಲ್ಲಿ ಸಿ ಸಿ ರಸ್ತೆ, ಸಿಂಗಾಪುರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ 25.00 ಲಕ್ಷ ರೂಗಳ ವೆಚ್ಚದಲ್ಲಿ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆ ಅಡಿಯಲ್ಲಿ ಸಿ ಸಿ ರಸ್ತೆ, ಮುಕ್ಕುಂದಾ ಗ್ರಾಮದಲ್ಲಿ ಮುಕ್ಕುಂದಾ ದಿಂದ ಹುಡಾ ವರೆಗೆ ಲೋಕೋಪಯೋಗಿ ಇಲಾಖೆಯಿಂದ 500.00 ಲಕ್ಷ ರೂಗಳ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ,ಹುಡಾ ಗ್ರಾಮದಲ್ಲಿ ಹುಡಾ ದಿಂದ ಮುಕ್ಕುಂದಾ ವರೆಗೆ ಲೋಕೋಪಯೋಗಿ ಇಲಾಖೆಯಿಂದ 500.00 ಲಕ್ಷ ರೂಗಳ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ, ಸಣ್ಣ ನೀರಾವರಿ ಇಲಾಖೆಯಿಂದ 950.00 ಲಕ್ಷ ರೂಗಳ ವೆಚ್ಚದಲ್ಲಿ ಗೊಬ್ಬರಕಲ್ ಮತ್ತು ರೌಡಕುಂದ ಗ್ರಾಮದ ರೈತರಿಗೆ ಏತ ನೀರಾವರಿ ಸೌಲಭ್ಯ ಕಲ್ಪಿಸಿಕೊಡುವ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಿದ ಅವರು ಎಲ್ಲೇಲ್ಲಿ ಕೆಳಭಾಗದಲ್ಲಿ ರೈತರು ಇದ್ದಾರೆ ಲಿಪ್ಟ್ ಇರಿಗೇಶನ್ ಪಿಕಪ್ ಡ್ಯಾಮ್ ಗಳನ್ನು ಮಾಡಿ ಕೆಳಭಾಗದ ರೈತರಿಗೆ ಒಂದು ಬೆಳೆಗಾದರೂ ಸಂಪೂರ್ಣವಾಗಿ ನೀರು ಒದಗಿಸುವ ನಿಟ್ಟಿನಲ್ಲಿ
ಅನುಕೂಲ ಮಾಡಲಾಗಿದೆ,
ರೈತರು ಸ್ವಾವಲಂಬಿಯಾಗಿ ಜೀವನ ಸಾಗಿಸಬೇಕಾದರೆ ನೀರು ಮುಖ್ಯ ,ಈ ಯೋಜನೆ ಸುಮಾರು 6000 ಎಕರೆ ಭೂಮಿ ಪ್ರದೇಶಕ್ಕೆ ನೀರಿನ ಅನುಕೂಲವಾಗಲಿದೆ. ಕಾಮಗಾರಿಯನ್ನು ಕಾಲ ಮಿತಿಯಲ್ಲಿ ಗುಣಮಟ್ಟದ ಕೆಲಸವನ್ನು ಮಾಡಬೇಕೆಂದು ಗುತ್ತೆದಾರರಿಗೆ ,ಅಧಿಕಾರಿಗಳಿಗೆ ತಿಳಿಸಿದರು.ಗ್ರಾಮಸ್ಥರು ಸರಿಯಾದ ರೀತಿಯಲ್ಲಿ ಕೆಲಸವನ್ನು ಮುಂದೆ ನಿಂತು ಮಾಡಿಸಿಕೊಳ್ಳಿ ಎಂದು‌ ಶಾಸಕರು ಹೇಳಿದರು.

ಇದೇ ಸಂಧರ್ಭದಲ್ಲಿ ಜೆಡಿಎಸ್ ತಾಲೂಕು ಅದ್ಯಕ್ಷರಾದ ಬಸವರಾಜ ನಾಡಗೌಡ , ಜಿ.ಸತ್ಯನಾರಾಯಣ ,ವೆಂಕಟೇಶ ನಂಜಲದಿನ್ನಿ ,ಮಲ್ಲನಗೌಡ ಮಾವಿನಮಡಗು ,ತಿಮ್ಮಾರಡ್ಡಿ ಹಚ್ಚೊಳ್ಳಿ ,ಶ್ರೀನಿವಾಸರಡ್ಡಿ , ಶೇಖ್ ಅಹ್ಮದ್ ಹುಲ್ಲೇಶ , ಮೌಲಸಾಬ,ಕಾಳಿಂಗಪ್ಪ ಸೇರಿದಂತೆ ಗ್ರಾ.ಪಂ.ಸದಸ್ಯರು ಗ್ರಾಮಸ್ಥರು ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;