ಕರ್ತವ್ಯಲೋಪವೆಸಗಿದ ಪಿಡಿಓರವರನ್ನ ಕೂಡಲೇ ವರ್ಗಾಯಿಸಿ : ತಾಲೂಕು ದಲಿತ ಸಂರಕ್ಷ ಸಮಿತಿ ಆಗ್ರಹ.
ಸಿಂಧನೂರು : ತಾಲೂಕಿನ ರಾಗಲಪರ್ವಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕರ್ತವ್ಯ ಲೋಪ ದುರ್ನಡತೆ , ಮಾಹಿತಿ ನೀಡದೇ ಇರುವುದು, ಕಾಮಗಾರಿಗಳಲ್ಲಿ ಶಾಮೀಲಾಗಿ ಅವ್ಯವಹಾರ ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯನ್ನು ನಿಯೋಜನೆ ಮಾಡಬೇಕೆಂದು ಆಗ್ರಹಿಸಿ ದಲಿತ ಸಂರಕ್ಷ ತಾಲೂಕು ಸಮಿತಿ ವತಿಯಿಂದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ದಸಂಸ ಜಿಲ್ಲಾ ಉಪಾಧ್ಯಕ್ಷ ಮರಿಯಪ್ಪ ಮಾತನಾಡಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದು ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಬರುವುದಿಲ್ಲ ವಾರದಲ್ಲಿ ಒಂದೆರಡು ದಿನ ಬಂದು ಹಾಜರಿಗೆ ಸಹಿ ಮಾಡಿ ನನಗೆ ಬೇರೆ ಕೆಲಸ ಇರುತ್ತೆ ಎಂದು ಬೇಜವಾಬ್ದಾರಿ ಹೇಳಿಕೆ ಕೊಡುತ್ತಾರೆ. ಮಾಹಿತಿ ಕೇಳಿದರೆ ನನಗೆ ಕೊಡಲು ಆಗುವದಿಲ್ಲ. ನೀವುಗಳು ಯಾರಿಗೆ ಬೇಕಾದರೂ ದೂರು ಕೊಡಬಹುದು,ಇಂತಿಷ್ಟು ಮೊತ್ತ ಹಣ ಕೊಡಿ ಆಗ ನೋಡೋಣ ಎಂದು ಉತ್ತರ ನೀಡುತ್ತಾರೆ. ಅಲ್ಲದೆ ಗ್ರಾಮ ಪಂಚಾಯತಿಗೆ ಬಂದಿರುವ ಸರಕಾರದ ಅನುದಾನಕ್ಕೆ ಅನುಗುಣವಾಗಿ ಸಂಬಂಧಿಸಿದವರೊಂದಿಗೆ ಶಾಮೀಲಾಗಿ ಮಾಮೂಲು ಪಡೆಯುವದು, ಇದನ್ನಾ ಕೇಳಿದರೆ ನನ್ನ ಮೇಲಾಧಿಕಾರಿಗಳಿಗೆ ಹಣ ಮುಟ್ಟಿಸಬೇಕು ಎಂದು ಹೇಳುತ್ತಾರೆ. ಸಾರ್ವಜನಿಕರು ತಮ್ಮ ಅಗತ್ಯ ಕೆಲಸಕ್ಕಾಗಿ ಬಂದರೆ ವಿನಾ ಕಾರಣ ಅವರನ್ನು ಅಲೆದಾಡಿಸುವದು, ಮತ್ತು ಗ್ರಾಮ ಪಂಚಾಯತಿ ನಿಯಮಗಳನ್ನು ಸರಿಯಾಗಿ ಪಾಲಿಸದೆ, ಗ್ರಾಮ ಸಭೆ ಕರೆಯುವದಿಲ್ಲ. ಸಾರ್ವಜನಿಕರ ಅಭಿಪ್ರಾಯಕ್ಕೆ ಬೆಲೆ ಇರುವದಿಲ್ಲ. ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸರಿಯಾದ ರೀತಿಯಲ್ಲಿ ಹಾಜರಾತಿ ಇರುವುದಿಲ್ಲ , ಕೂಲಿ ಮೊತ್ತ ಪಾವತಿಸಲು ತಾರತಮ್ಯ ಮಾಡುವುದು, ಸಮಯಕ್ಕೆ ಸರಿಯಾಗಿ ಕೂಲಿ ಮೊತ್ತ ಪಾವತಿಸದೆ ಇರುವುದು, ಮತ್ತು ಇವರೊಬ್ಬ ಪ್ರಭಾವಿ ವ್ಯಕ್ತಿಯಾಗಿದ್ದು, ರಾಜಕೀಯ ಮುಖಂಡರು ನನ್ನ ಜೊತೆಯಲ್ಲಿ ಇದ್ದಾರೆ ನನಗೆ ಯಾರು ಏನು ಮಾಡುವದಿಲ್ಲ, ಯಾರಿಗೆ ಬೇಕಾದರೂ ದೂರು ಕೊಡಬಹುದು ಎಂಬ ದುರ್ನಡತೆಯನ್ನು ಪ್ರದರ್ಶನ ಮಾಡುವ ಈ ಅಧಿಕಾರಿ ಈ ಹುದ್ದೆಯನ್ನು ಬಿಟ್ಟು ರಾಜಕೀಯ ಮಾಡಲು ತೆರಳಲಿ ಎಂದು ಹೇಳಿದರು.
ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ಯಾರಾದರೂ ಮಾಹಿತಿ ಕೇಳಿದರೆ, ಅವರಿಗೆ ಸರಿಯಾಗಿ ಮಾಹಿತಿ ನಿಡುವದಿಲ್ಲ, ಗೊಂದಲದ ರೂಪದಲ್ಲಿ ಮಾಹಿತಿ ನಿಡುವದನ್ನು ಪರಿಪಾಠ ಮಾಡಿಕೊಂಡಿದ್ದಾರೆ. ಇಂತಹ ವರ್ತನೆಯಿಂದ ಸಾರ್ವಜನಿಕರು ಬೇಸತ್ತು ಹೋಗಿದ್ದು, ಇಂತಹ ದುರಹಂಕಾರ ಪಿಡಿಓ ನಮ್ಮ ಗ್ರಾಮ ಪಂಚಾಯತಿಗೆ ಬೇಡವೆ ಬೇಡ, ಇವರ ವಿರುದ್ಧ ಮೇಲಿನ ಆಪಾದನೆಗಳ ಮೇರೆಗೆ ಹತ್ತು ದಿನಗಳ ಒಳಗಾಗಿ ಕಾನೂನು ಕ್ರಮ ಜರುಗಿಸಬೇಕು,ಗ್ರಾಮ ಪಂಚಾಯತಿಗೆ ದಕ್ಷ ಮತ್ತು ಪ್ರಮಾಣಿಕ ಅಧಿಕಾರಿಯನ್ನು ನಿಯೋಜನೆ ಮಾಡಬೇಕು ಅಷ್ಟರೊಳಗಾಗಿ ಕ್ರಮ ಜರುಗಿಸದೇ ಹೋದಲ್ಲಿ ಸಿಂಧನೂರು ತಾಲೂಕ ಪಂಚಾಯತಿ ಕಾರ್ಯಾಲಯದ ಮುಂದೆ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವದು ತಾಲೂಕು ದಲಿತ ಸಂರಕ್ಷ ಸಮಿತಿಯ ಸಂಘಟಕರು ಮನವಿ ಪತ್ರದ ಮೂಲಕ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹೆಚ್. ಬಸವರಾಜ ಯಾಪಲಪರ್ವಿ ಉಪಾಧ್ಯಕ್ಷರ ಮೌಲಪ್ಪ ಯಾಪಲಪರ್ವಿ ಪ್ರಧಾನ ಕಾರ್ಯದರ್ಶಿ,ನಾಗೇಶ ಎಸ್.ಹೆಚ್.ಉಪಾಧ್ಯಕ್ಷರು, ಮೌಲಪ್ಪ ಐಹೊಳೆ ಅಧ್ಯಕ್ಷರು , ಮಲ್ಲಿಕಾರ್ಜುನಯಾಪಲಪರ್ವಿ, ವಲ್ಕಂದಿನ್ನಿ ಹೊ.ಅಧ್ಯಕ್ಷರು ಬಸವರಾಜ ಜಿ.ವಲ್ಕಂದಿನ್ನಿ ಸಹ ಸಂಚಾಲಕರು, ದೇವರಾಜ ರೈತನಗರಕ್ಯಾಂಪ ಸಹ ಕಾರ್ಯದರ್ಶಿ ,ಉಮೇಶ ಜವಳಗೇರಾ ಜಿಲ್ಲಾ.ಪ್ರ, ಕಾರ್ಯದರ್ಶಿ, ಹನುಮಂತ ರೈತನರಕ್ಯಾಂಪ ಸಂ, ಕಾರ್ಯದರ್ಶಿ,ಎಸ್.ಐ. ನಾಯಕ ಯಾಪಲಪರ್ವಿ
ವಾಲ್ಮೀಕಿ ಸಮಾಜ ಮುಖಂಡರು, ನಾಗರಾಜ್ ಗೋಮರ್ಸಿ ಇತರರಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
