ಅಂಬೇಡ್ಕರ್ ಭವನ ವೀಕ್ಷಣೆ ಮಾಡಿದ ಸಮಾಜ ಕಲ್ಯಾಣ ಅಧಿಕಾರಿ.
ಸಿಂಧನೂರು : ನಗರದ ಕರಿಯಪ್ಪ ಲೇಔಟ್ ನಲ್ಲಿ 2016-2017 ನೇ ಸಾಲಿನ ಎಸ್. ಸಿ. ಪಿ. ಯೋಜನೆಯ ಕ್ಯಾಷುಟೇಕ್ ಇಲಾಖೆಯ 100.00 ಲಕ್ಷ ರೂಗಳ ಅನುದಾನದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಟ್ಟಡ ಕಾಮಗಾರಿ ವೀಕ್ಷಣೆ ಮಾಡಿದ ಸಮಾಜ ಕಲ್ಯಾಣ ಅಧಿಕಾರಿಗಳಾದ ಮಹಾಲಿಂಗಪ್ಪ ಇಂಗಳದಾಳ ಒಳ್ಳೆಯ ಗುಣಮಟ್ಟದ ಕಾಮಗಾರಿ ಮಾಡಲು ಸಂಬಂಧಪಟ್ಟ ಅಧಿಕಾರಿ ಕೌಷರ್ ಪಾಷ ಸಹಾಯಕ ಇಂಜಿನಿಯರ ಎಇಗೆತಿಳಿಸಿದರು.

ಅಧಿಕಾರಿಗಳು ಕಟ್ಟಡ ವೀಕ್ಷಣೆ ಮಾಡುವ ಸಂದರ್ಭದಲ್ಲಿ ಛಲವಾದಿ ಸಮಾಜದ ಮುಖಂಡರಾದ ಅಯ್ಯಪ್ಪ ವಕೀಲರು ಮಲ್ಲಾಪೂರು, ಮೌಲಪ್ಪ ವಕೀಲರು ಗೋಡೆ ಹಂತದಲ್ಲಿರುವ ಕಾಮಗಾರಿಯು ಉತ್ತಮ ಗುಣಮಟ್ಟದಲ್ಲಿ ನಡೆಯುತ್ತಿಲ್ಲ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಸರಿಯಾಗಿ ನೀರು ಕೀವರಿಂಗ್ ಮಾಡದಿರುವ ಬಗ್ಗೆ ಮಾಹಿತಿ ನೀಡಿ ಕಟ್ಟಡ ಎತ್ತರ ಹಂತದಲ್ಲಿದ್ದ ಕಾರಣ ಇನ್ನೊಬ್ಬರನ್ನು ನೀರು ಹಾಕಲು ಬಿಡಬೇಕು, ಕಟ್ಟಡ ಗುಣಮಟ್ಟದ ಕಾಮಗಾರಿ ಮಾಡಬೇಕು ಮಾಡದೆ ಇದೇ ರೀತಿ ಮುಂದುವರಿದರೆ ಕಾಮಗಾರಿ ನಿಲ್ಲಿಸಿ ಮೇಲಧಿಕಾರಿಗಳ ಗಮನಕ್ಕೆ ತರಬೇಕಾಗುತ್ತದೆ ಎಂದು ತಾಕೀತು ಮಾಡಿದರು…
ವರದಿ.ದುಗ್ಗಪ್ಪ ಸಿಂದನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
