ಕೆ ಕರಿಯಪ್ಪ ಅಭಿಮಾನಿ ಬಳಗದ ವತಿಯಿಂದ ನೀರಿನ ಅರವಟ್ಟಿಗೆ ಉದ್ಘಾಟನೆ.
ಸಿಂಧನೂರು : ಮಾಜಿ ಕೆಪಿಸಿಸಿ ಕಾರ್ಯದರ್ಶಿ ಕೆ.ಕರಿಯಪ್ಪ ಅವರ ತಂದೆಯವರಾದ ದಿ.ಕೆ. ನಾಗಪ್ಪ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ಕೆ. ಕರಿಯಪ್ಪ ಅಭಿಮಾನಿ ಬಳಗದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರಿನ ತೊಂದರೆ ಆಗಬಾರದು. 20ರಿಂದ 30 ರೂ ಹಣ ಕೊಟ್ಟು ನೀರಿನ ಬಾಟಲ್ ಖರೀದಿ ಮಾಡುವಷ್ಟು ಶಕ್ತಿ ಸಾಮಾನ್ಯ ಜನರಿಗೆಇರುವುದಿಲ್ಲ
ಅನೇಕ ರೈತರು ಸಾರ್ವಜನಿಕರು ಮತ್ತು ಪ್ರಯಾಣಿಕರಿಗೆ ಒಂದು ಒಳ್ಳೆಯ ಉಚಿತವಾದ ಶುದ್ಧ ಕುಡಿಯುವ ನೀರು ಬೇಸಿಗೆಯಲ್ಲಿ ಹಳ್ಳಿಯಿಂದ ಪಟ್ಟಣಕ್ಕೆ ಬರುವಂತಹ ಜನರಿಗೆ ಬೇಸಿಗೆಯ ನೀರಿನ ದಾಹವನ್ನ ನೀಗಿಸುವಂತಹ ಕೆಲಸ ಮಾಡಿಕೊಂಡು ಬಂದಿದೆ.ಇನ್ನೂ ಅನೇಕ ಸಮಾಜಮುಖಿ ಕೆಲಸ ಮಾಡಿದೆ ಎಂದರು.
ಸತತ ಐದು ವರ್ಷದಿಂದ ಕೆ ಕರಿಯಪ್ಪ ಅಭಿಮಾನಿಗಳು ಹಾಗೂ ದಿವಂಗತ ಕೆ ನಾಗಪ್ಪ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಿಂಧನೂರ ನಗರದ ಪ್ರಮುಖ ಸ್ಥಳಗಳಲ್ಲಿ ನೀರಿನ ಅರವಟ್ಟಿಗೆ ಮಾಡುವುದರ ಮೂಲಕ ಜನರಿಗೆ ನೀರಿನ ದಾಹ ತೀರಿಸುವಂತಹ ಪುಣ್ಯದ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದರು.
ಇಂದು ನಗರದ ತಹಸೀಲ್ ಕಾರ್ಯಾಲಯದ ಮುಂಭಾಗದಲ್ಲಿ ಅಮರೇಶಪ್ಪ ಮೈಲಾರಿ ಹಾಗೂ ಬಸ್ ನಿಲ್ದಾಣದ ಹತ್ತಿರ ಎಚ್ ಏನ್ ಬಡಿಗೇರ್ ಅವರು ಅರವಟ್ಟಿಗೆ ಉದ್ಘಾಟಿಸಿ ಮಾತನಾಡಿದರು.
ಮುಂದೆ ಬರುವ ಹೋಳಿ ಹಬ್ಬದಲ್ಲಿ ಕೆಟ್ಟ ಬಣ್ಣಗಳನ್ನು ಬಳಸದೆ ಉತ್ತಮವಾದ ಬಣ್ಣಗಳನ್ನು ಬಳಸಿ ಒಳ್ಳೆಯ ರೀತಿಯಲ್ಲಿ ಹೋಳಿ ಹಬ್ಬವನ್ನು ಆಚರಣೆ ಮಾಡಿ, ಬೈಕ್ ಓಡಿಸುವುದು,ಸೌಂಡ್ ಮಾಡುವುದು ತಂತಿ ಹೊಡೆಯುವಂತಹ ಕೆಲಸವನ್ನು ಯಾರು ಮಾಡಬಾರದು,ಬೇಸಿಗೆ ಕಾಲ ಇರುವುದರಿಂದ ನಿಮ್ಮ ಮನೆಯ ಮುಂದೆ ಅಥವಾ ಮಾಳಿಗೆ ಮೇಲೆ ಮಡಿಕೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ಕಾಳು ಮತ್ತು ನೀರಿನ ಸೌಲಭ್ಯ ಸಿಗುವಂತೆ ಮಾಡಬೇಕು.ನಮಗೆ ಬಾಯಿಯಿದೆ ನೀರನ್ನು ಕೇಳಿ ಪಡೆಯುತ್ತೆವೆ, ಆದರೆ ಪ್ರಾಣಿ-ಪಕ್ಷಿಗಳಿಗೆ ಕೇಳುವುದಕ್ಕೆ ಆಗುವುದಿಲ್ಲ ಅದಕ್ಕಾಗಿ ಪ್ರಾಣಿ ಪಕ್ಷಿಗಳಿಗೂ ಬೇಸಿಗೆಯಲ್ಲಿ ನೀರು ಮತ್ತು ಕಾಳುಗಳನ್ನು ನೀಡುವುದರ ಮೂಲಕ ಪ್ರಾಣಿ-ಪಕ್ಷಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಮಾಜಿ ಕೆಪಿಸಿಸಿ ಕಾರ್ಯದರ್ಶಿ ಕೆ. ಕರಿಯಪ್ಪ ಯುವಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿ ರಾಯಪ್ಪ ವಕೀಲರು, ನಾಗರಾಜ ಬೊಮ್ಮನಾಳ,ಹುಸೇನಪ್ಪ ಸೋಲಂಗಿ, ಶ್ರೀನಿವಾಸ ವೈ,
ರಮೇಶ ಯಾದವ,ಕಾಳಪ್ಪ ಮೇಸ್ತ್ರಿ,ರಾಜು ಅಡವಿಭಾವಿ
ಮಲ್ಲಮ್ಮ ಉಟಕನೂರು,
ಮಾರಣ್ಣ ನಾಯಕ,ನಿರುಪಾದಿ ಸೂಲಂಗಿ ಕಟ್ಟಪ್ಪ,ಬಾಷಾ ಇತರರಿದ್ದರು..
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
