ರೈತರ ಮನೆ ಬಾಗಿಲಿಗೆ ಕಂದಾಯ ಇಲಾಖೆ ಅಲ್ಲ!! ಮೋದಿ,ಬಸವರಾಜ ಬೊಮ್ಮಾಯಿ, ಅರ್ ಅಶೋಕ್ ಅವರ ಪೋಟೋಗಳು, ನೆಪಕ್ಕೆ ಒಂದು ಪಹಣೆ!!
ಜನವರಿ 26 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ‘ ಭೂ ದಾಖಲೆಗಳು ರೈತರ ಮನೆ ಬಾಗಿಲಿಗೆ’ ಎಂಬ ಯೋಜನೆಗೆ ಚಾಲನೆ ನೀಡಿದ್ದರು ಜಿಲ್ಲಾಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ತಾಲೂಕುಮಟ್ಟದಲ್ಲಿ ಸ್ಥಳೀಯ ಶಾಸಕರು ಚಾಲನೆ ನೀಡಲಿದ್ದಾರೆ.
ರೈತರು ಪಹಣಿ, ಜಮೀನಿನ ಸರ್ವೆ ನಕ್ಷೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಪಡೆಯಲು ನಾಡಕಚೇರಿ, ತಹಶೀಲ್ ಕಚೇರಿಳಿಗೆ ಅಲೆಯುತ್ತಿದ್ದರು. ರೈತರ ಅಲೆದಾಟವನ್ನು ತಪ್ಪಿಸುವುದಕ್ಕಾಗಿ ಸರ್ಕಾರವು ರೈತರ ಮನೆಬಾಗಿಲಿಗೆ ಉಚಿತವಾಗಿ ಪಹಣಿ, ಜಾತಿ ಮತ್ತು ಆದಾಯಪ್ರಮಾಣಪತ್ರವನ್ನು ನೀಡುವ ಯೋಜನೆಗೆ ಚಾಲನೆ ನೀಡಲಿದೆ. ರಾಜ್ಯ 62.85 ಲಕ್ಷ ರೈತರಿಗೆ ಪಹಣಿ, (ಹಿಸ್ಸಾ ಸ್ಕೆಚ್), ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಅವರವರ ಮನೆಬಾಗಿಲಿಗೆ ಉಚಿತವಾಗಿ ತಲುಪಿಸುವ ಯೋಜನೆ ಇದಾಗಿದೆ. ಪಹಣಿ, ಜಾತಿ ಆದಾಯ ಪ್ರಮಾಣ ಪತ್ರಗಳನ್ನು ಪ್ಲಾಸ್ಟಿಕ್ ಲಕೋಟೆಯಲ್ಲಿರಿಸಿ ಪ್ರತಿ ರೈತ ಕುಟುಂಬದ ಮನೆ ಬಾಗಿಲಿಗೆ ತಲುಪಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದರು
ಇಂದು ಹೇಳಿದಂತೆ ರೈತರ ಮನೆ ಬಾಗಿಲಿಗೆ ಪ್ಲಾಸ್ಟಿಕ್ ಲಕೋಟೆಯಲ್ಲಿ ಇರಿಸಿದ್ದಾರೆ ನಿಜ ಅದರ ಮೇಲೆ ಮೋದಿಜಿ ಅವರ ದೊಡ್ಡ ಭಾವಚಿತ್ರ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವರಾದ ಅರ್ ಅಶೋಕ್ ಅವರ ಭಾವಚಿತ್ರಗಳಿವೆ ಒಳಗಡೆ ಪಹಣೆ ಬಿಟ್ಟರೆ ಏನೂ ಇಲ್ಲ!
ಮೊದಲೇ ಹೇಳಿದಂತೆ ಜಾತಿ ಆದಾಯ ಪ್ರಮಾಣ ಪತ್ರ,ಮತ್ತು ಜಮೀನಿನ ನಕಾಶೆ ಕೊಟ್ಟಿಲ್ಲ . ಈ ಕುರಿತು ಕಂದಾಯ ಇಲಾಖೆಯ ಮಾಹಿತಿ ಕೇಳಿದರೆ ಮುಂದೆ ಬರುವ ಸಾಧ್ಯತೆ ಇದೆ ಈಗ ಸಧ್ಯ ಇಷ್ಟೇ ಎನ್ನುವರು !
ಗ್ರಾಮದ ಜನರು ಚುನಾವಣೆ ಹತ್ತಿರ ಬರುತ್ತಿದೆ! ಜನರು ಇವರ ಮುಖಗಳನ್ನ ಮರೆಯಬಾರದು ಅಂತ ಇದನ್ನ ಕೊಟ್ಟಿದ್ದಾರೆ! ಬುದ್ದಿವಂತ ಮಂದಿ ಅವರವರ ಪೋನಿನಲ್ಲೇ ಪಹಣೆ ತೆಗೆದುಕೊಳ್ಳಬಹುದು ಯಾಕೆ ಬೇಕಿತ್ತು? ಆ ಮೂರು ಜನರ ಮುಖವನ್ನ ಮರೆಯಬಾರದು ಮನೆಲಿ ಹಾರ ಹಾಕಿ ಪೂಜೆ ಮಾಡಬೇಕು ಎಂದು ಮಾತಡಿಕೊಳ್ಳುವರು !
ಇನ್ನೂ ಕೆಲವರು ಅವನ್ನ ಕೇಂದ್ರ ಸರ್ಕಾರದಿಂದ ಮೋದಿ ಅವರೇ ಮನೆಮನೆಗೆ ಕೊಟ್ಟಿದ್ದಾರೆ ಮೋದಿಯವರು ಉಚಿತ ಕೊಡುಗೆ ಅಂತ ಕೈ ಮುಗಿದು ತೆಗೆದು ಕೊಳ್ಳುವರು !
ಅಭಿಪ್ರಾಯ ಏನೇ ಆದರೂ ಸಾರ್ವಜನಿಕ ಹಣದಲ್ಲಿ ಜಾರಿಗೆ ತಂದ ಯೋಜನೆಗಳು ಪೋಲಾಗದಿರಲಿ ಎಂಬುದು ಮಾಧ್ಯಮದ ಆಶಯ…

ವರದಿ.ಅಜಯ್, ಚ, ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
