;

ವಿವಿಧ ಯೋಜನೆಗಳ ಅಡಿಯಲ್ಲಿ ಕಟ್ಟಿದ ಕಟ್ಟಡಗಳು ಮತ್ತು ಬೀದಿ ದೀಪಗಳ ಉದ್ಘಾಟನೆ…!!!

ವಿವಿಧ ಯೋಜನೆಗಳ ಅಡಿಯಲ್ಲಿ ಕಟ್ಟಿದ ಕಟ್ಟಡಗಳು ಮತ್ತು ಬೀದಿ ದೀಪಗಳ ಉದ್ಘಾಟನೆ.

ಮಹಾಲಿಂಗಪುರ: ನಗರದ ಪ್ರಮುಖ ಬೀದಿಗಳಾದ ಮಹಾಲಿಂಗೇಶ್ವರ ದೇವಸ್ಥಾನ ರಸ್ತೆಗೆ 29 ಲಕ್ಷ ಮತ್ತು ಹಿಂದೂ ರುದ್ರ ಭೂಮಿ ರಸ್ತೆಗೆ 14 ಲಕ್ಷ ವೆಚ್ಚದಲ್ಲಿ ಅಳವಡಿಸಿದ ಅಲಂಕಾರಿಕ ಬೀದಿ ದೀಪಗಳು ಹಾಗೂ 2021-2022ನೇ ಸಾಲಿನ ಉದ್ಯಮ ನಿಧಿ ಯೋಜನೆಯ ಅನುದಾನದ ಅಡಿಯಲ್ಲಿ ಸ್ವಚ್ಛ ಮತ್ತು ನೈರ್ಮಲ್ಯ ಕಾಪಾಡುವ ದೃಷ್ಟಿಕೋನದಿಂದ 49 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಮಹಾಲಿಂಗೆಶ್ವರ ಮಾದರಿ ತಿನಿಸು ಕಟ್ಪೆ ವಾಣಿಜ್ಯ ಮಳಿಗೆಗಳನ್ನು ಲೋಕೋಪಯೋಗಿ ಇಲಾಖೆ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಹಾಗೂ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ತೇರದಾಳ ಮತ ಕ್ಷೇತ್ರದ ಶಾಸಕ ಸನ್ಮಾನ್ಯ ಸಿದ್ದು ಸವದಿಯವರ ಉಪಸ್ಥತಿಯಲ್ಲಿ ಉದ್ಘಾಟಸಿದರು. ನಂತರ ಇದರೊಡನೆ ನಗರದ ಸರಾಕಾರಿ ಪದವಿ ಪೂರ್ವ ಕಾಲೇಜಿನ ಸುಮಾರು 96 ಲಕ್ಷ ಮೌಲ್ಯದಲ್ಲಿ ನಿರ್ಮಾಣವಾದ ನೂತನ ಕಟ್ಟಡದ ಜೋತೆಗೆ ಮಹಾಲಿಂಗಪುರದ ಹೆಸರಾಂತ ಪಾರಿಜಾತ ಕಲಾವಿದೆ ಕೌಜಲಗಿ ನಿಂಗಮ್ಮನವರ ಸ್ಮಾರಕ ರಂಗ ಮಂದಿರವನ್ನು ಸುಮಾರು 3.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಭವನವನ್ನು ರೀಬನ್ ಕಟ್ ಮಾಡಿ ಜೋತಿ ಬೇಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಾವು ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಸಮಯದಲ್ಲಿ ರಂಗ ಕಲಾವಿದರಿಗಾಗಿ ಬಿಡುಗಡೆ ಮಾಡಿದ ಅನುದಾನಗಳನ್ನು ವಿವರಿಸಿ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ್ ಮಾತನಾಡಿ ತೇರದಾಳ ಮತಕ್ಷತ್ರದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಸ್ಥಳಿಯ ಶಾಸಕರು ಯಶಸ್ವಿಯಾಗಿದ್ದಾರೆ ಎಂದು ಹೇಳಿದರು. ನಂತರ ಶಾಸಕರು ಪ್ರಾಸ್ತಾವಿಕವಾಗಿ ಮಾತನಾಡಿ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಇಗಾಗಲೆ ತಮ್ಮ ಅಸ್ತಿತ್ವ ಕಳೆದುಕೊಂಡಿದೆ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು. ಮಹಾಲಿಂಗಪುರ ನಗರದ ಸುತ್ತ ಹತ್ತಾರು ಹಳ್ಳಿಗಳಿಂದ ಬರುವ ವಿಧ್ಯಾರ್ಥಿಗಳಿಗೆ ಪದವಿ ಪೂರ್ವ ಕಾಲೇಜು ಮಾತ್ರ ಇದ್ದು ನಗರಕ್ಕೆ ಪದವಿ ಕಾಲೇಜು ಕೂಡ ಅತ್ಯವಶ್ಯವಾಗಿದ್ದು ಆದಷ್ಟು ಬೇಗ ಮಂಜೂರು ಮಾಡಬೇಕೆಂದು ಸ್ಥಳೀಯರು ಮನವಿ ಸಲ್ಲಿಸಿದರು. ಕಾರ್ಯಕ್ರಮ ಉಪಸ್ಥತಿಯಲ್ಲಿ ಪುರಸಭಾ ಅಧ್ಯಕ್ಷೆ ಸ್ನೇಹಲ್ ಅಂಗಡಿ, ಪುರಸಭಾ ಸದಸ್ಯ ಶೇಖರ್ ಅಂಗಡಿ, ಬಾ.ಜ.ಪ ಹಿರಿಯ ಮುಖಂಡ ಬಸನಗೌಡ ಪಾಟೀಲ,ಶ್ರೀಮಂತ ಹಳ್ಳಿ,ಚನಬಸು ಯರಗಟ್ಟಿ,ಬಸವರಾಜ ಚಮಕೇರಿ,ಜಿ.ಎಸ್.ಗೊಂಬಿ,
ರಾಜು ಚಮಕೇರಿ,ಬಸವರಾಜ ಹಿಟ್ಟಿನಮಠ,ಈರಪ್ಪ ದಿನ್ನಿಮನಿ ಮತ್ತು ರಂಗಭೂಮಿ ಕಲಾವಿದರು ಬಿಜೆಪಿ ಕಾರ್ಯಕರ್ತರು, ಹಿರಿಯ ಮುಖಂಡರು, ರಂಗ ಭೂಮಿ ಕಲಾವಿದರು ಪಾಲ್ಗೊಂಡಿದ್ದರು.

 

ವರದಿ.ಬಸವರಾಜ ನಂದೆಪ್ಪನವರಮ.ಹಾಲಿಂಗಪುರ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;