;

ಮಕ್ಕಳಿಗೆ ಸೂಕ್ತ ರಕ್ಷಣೆ ಒದಗಿಸಲು ಪೊಲೀಸ್ ಇಲಾಖೆ ಬದ್ದ:- ಕೊಟ್ಟೂರು ಸಿಪಿಐ ಸೋಮಶೇಖರ್ ಕೆಂಚರೆಡ್ಡಿ…!!!

ಜಾಗೃತಿ ಮತ್ತು ರಕ್ಷಣೆ ಕುರಿತು ಹೊಸಹಳ್ಳಿ ಆರಕ್ಷಕ ಇಲಾಖೆ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು. ಬಣವಿಕಲ್ಲು .
ಮಕ್ಕಳಿಗೆ ಸೂಕ್ತ ರಕ್ಷಣೆ ಒದಗಿಸಲು ಪೊಲೀಸ್ ಇಲಾಖೆ ಬದ್ದ:- ಕೊಟ್ಟೂರು ಸಿಪಿಐ ಸೋಮಶೇಖರ್ ಕೆಂಚರೆಡ್ಡಿ ಪೊಲೀಸರ ಕಂಡೊಡನೆ ಭಯ ಬೀಳುವ ಅಗತ್ಯವಿಲ್ಲ ಅಪರಿಚಿತರು ನಿಮ್ಮನ್ನು ಮಾತನಾಡಿಸಲು ಬಂದರೆ ಅಥವಾ ಏನಾದರೂ ನಿಮಗೆ ತಿನ್ನಲು ಕೊಟ್ಟರೆ ಅದನ್ನು ತಿರಸ್ಕರಿಸಿ ಕೂಡಲೇ ನಿಮ್ಮ ಶಿಕ್ಷಕರಿಗೆ ತಿಳಿಸಿರಿ, ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಅಮಾನವೀಯ ಕೃತ್ಯಗಳ ಆಗಿವೆ ಇದರಿಂದ ಮಕ್ಕಳು ಭಯಪಡುವ ಅಗತ್ಯವಿಲ್ಲ ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಾವು ಮಾಹಿತಿ ನೀಡಿದ್ದಲ್ಲಿ ಅವರ ಬಗ್ಗೆ ಕಠಿಣ ಕ್ರಮ ಜರಗಿಸುವುದಲ್ಲದೆ ಮಕ್ಕಳಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಪೊಲೀಸ್ ಇಲಾಖೆ ಬದ್ಧವಾಗಿದೆ ಎಂದು ಕಾನಹೊಸಹಳ್ಳಿ ಆರಕ್ಷಕ ಠಾಣೆ ಯಿಂದಕಸ್ತೂರಿಬಾ ಶಾಲೆಯಲ್ಲಿ ಏರ್ಪಡಿಸಿದ್ದ ಜಾಗೃತಿ ಮತ್ತು ರಕ್ಷಣೆ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಕೊಟ್ಟೂರು ಸಿಪಿಐ ಶ್ರೀ ಸೋಮಶೇಖರ ಕೆಂಚ ರೆಡ್ಡಿಯವರು ಭಾಗವಹಿಸಿ ಮಾತನಾಡಿದರು.

ವರದಕ್ಷಿಣೆ ಬಾಲಕಾರ್ಮಿಕ ಪದ್ಧತಿ ಬಾಲ್ಯವಿವಾಹ ವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ, ಕಾನೂನಿನಡಿಯಲ್ಲಿ ಹೆಣ್ಣು ಮಕ್ಕಳಿಗೆ 18 ವರ್ಷ ಹಾಗೂ ಗಂಡು 21 ವರ್ಷದ ನಂತರ ಮದುವೆಯಾಗಲು ಅವಕಾಶವಿದೆ ಈ ನಿಟ್ಟಿನಲ್ಲಿ ಮದುವೆಯಾಗುವುದನ್ನು ವಿರೋಧಿಸಿಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಮಕ್ಕಳು ಅಪರಿಚಿತರು ಕರೆದಾಗ ಅವರೊಂದಿಗೆ ಹೋಗಬಾರದು ಮತ್ತು ಒಂಟಿಯಾಗಿ ತಿರುಗಬಾರದು, ಶಾಲೆಗೆ ಬರುವಾಗ ಬೆಲೆಬಾಳುವ ಆಭರಣಗಳನ್ನು ಧರಿಸಬಾರದು. ಮಕ್ಕಳು ಶಾಲಾ ಸಮಯದಲ್ಲಿ ಶಾಲೆಯಿಂದ ಹೊರಗುಳಿಯದಂತೆ ಶಿಕ್ಷಕರು ಎಚ್ಚರಿಕೆ ವಹಿಸಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು.ಕಸ್ತೂರಿ ಬಾ ಶಾಲೆಯ ಮುಖ್ಯಶಿಕ್ಷಕಿ ವಾಣಿಯವರು ಮಾತನಾಡಿ ಜನರ ರಕ್ಷಣೆಯಲ್ಲಿ ಪೊಲೀಸ್ ಇಲಾಖೆಯ ಸೇವೆ ಶ್ಲಾಘನೀಯವಾಗಿದೆ, ಮಹಿಳೆ ಮತ್ತು ಮಕ್ಕಳ ಜೊತೆಗೆ ಇಡೀ ಸಮಾಜವನ್ನು ರಕ್ಷಣೆ ಮಾಡುವ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲಿದೆ, ಈ ನಿಟ್ಟಿನಲ್ಲಿ ಅವರಿಗೆ ಅವಶ್ಯಕವಾದ ಸಹಕಾರವನ್ನು ಸಾರ್ವಜನಿಕರು ನೀಡಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು ಕಾರ್ಯಕ್ರಮದಲ್ಲಿ ಕೊಟ್ಟೂರು ಸಿಪಿಐ,ಶ್ರೀ ಸೋಮಶೇಖರ್ ಕೆಂಚರೆಡ್ಡಿ ಯವರು, ಶಾಲೆಯ ಮುಖ್ಯ ಶಿಕ್ಷಕಿ ವಾಣಿಯವರು, ಹಾಗೂ ಸಹ ಶಿಕ್ಷಕರು ಪೊಲೀಸ್ ಇಲಾಖೆ ಸಿಬ್ಬಂದಿ ಶ್ರೀ ಕಲ್ಲೇಶ್, ರಾಜೇಂದ್ರ ಮೂಗಣ್ಣ, ಶಾಲೆ ಶಿಕ್ಷಕರು ಮತ್ತು ಸಿಬ್ಬಂದಿ, ಸೇರಿದಂತೆ ಶಾಲೆಯ ಮಕ್ಕಳು ಉಪಸ್ಥಿತರಿದ್ದರು,..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend