;

ಶಿಕ್ಷಕಿಯಾಗಿ ತಾಯಿಯಾಗಿ ನಮ್ಮೆಲ್ಲರ ಮನಸ್ಸಿನಲ್ಲಿರುವ ಗೀತಾ ಮಿಟ್ಟಿಮನಿ – ಚನ್ನ ಬಸಯ್ಯಸ್ವಾಮಿ…!!!

ಶಿಕ್ಷಕಿಯಾಗಿ ತಾಯಿಯಾಗಿ ನಮ್ಮೆಲ್ಲರ ಮನಸ್ಸಿನಲ್ಲಿರುವ ಗೀತಾ ಮಿಟ್ಟಿಮನಿ – ಚನ್ನ ಬಸಯ್ಯಸ್ವಾಮಿ – ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದ ಸಂತ ಅಂತೋನಿಯವರ ಹಿರಿಯ ಪ್ರಾಥಮಿಕ ಅನುದಾನಿತ ಶಾಲೆಯಲ್ಲಿ 36 ವರ್ಷ ಎಂಟು ತಿಂಗಳುಗಳ ಕಾಲ ಸಹ ಶಿಕ್ಷಕಿಯಾಗಿ ಮಕ್ಕಳಿಗೆ ತಾಯಿಯಾಗಿ ತಮ್ಮ ಕರ್ತವ್ಯದ ಸೇವೆಯನ್ನು ಸಲ್ಲಿಸಿರುವ ಗೀತಾ ಮಿಟ್ಟಿ ಮನಿಯವರ ವಯೋನಿವೃತ್ತಿ ಕಾರ್ಯಕ್ರಮ ಶಾಲೆಯಲ್ಲಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ವೇದಿಕೆಯ ಉಪಸ್ಥಿತರಿದ್ದ ಸಿಂಧನೂರು ನಗರದ ಕಾರುಣ್ಯ ಆಶ್ರಮದ ಆಡಳಿತಾಧಿಕಾರಿಗಳಾದ ಚನ್ನಬಸಯ್ಯ ಸ್ವಾಮಿ ಮಾತನಾಡಿ ಇಷ್ಟು ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿರುವ ಶಿಕ್ಷಕರನ್ನು ನಾನು ನೋಡಿದ್ದು ಇದೇ ಮೊದಲ ಬಾರಿಗೆ ಈ ಕಾರ್ಯಕ್ರಮಕ್ಕೆ ಆಗಮಿಸಿದಾಗ ಗೀತಾ ಮಿಟ್ಟಿ ಮನಿ ಅಮ್ಮನವರ ಬಗ್ಗೆ ವಿದ್ಯಾರ್ಥಿಗಳು ಆನಂದಬಾಷ್ಪ ದ ಭಾಷಣದಲ್ಲಿ ನನಗೂ ಕೂಡ ದೊಡ್ಡಮಟ್ಟದ ಭಾವುಕ ಮನಸ್ಸು ತಡೆದುಕೊಳ್ಳಲಾಗದೆ ಆನಂದಭಾಷ್ಪ ಕೆ ಕಾರಣವಾಯಿತು.

ಶಿಕ್ಷಕಿಯಾಗಿ ತಾಯಿಯಾಗಿ ಗೀತಾ ಮಿಟ್ಟಿಮನಿಯವರು ನಮ್ಮೆಲ್ಲರ ಮನಸ್ಸಿನಲ್ಲಿ ಇರುವಂತಹ ಒಬ್ಬ ಶಾರದಾಮಾತೆ ಇಂತಹ ತಾಯಿಯ ಬಿಳ್ಕೊಡುಗೆ ನಮಗೆ ಕಷ್ಟವೆನಿಸಿದರೂ ಸಹ ಇವರು ನಮ್ಮೊಂದಿಗಿರುತ್ತಾರೆ ಎನ್ನುವ ಆತ್ಮವಿಶ್ವಾಸವನ್ನು ನಾವೆಲ್ಲರೂ ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿ ಸಿಂಧನೂರಿನ ಶ್ರೀಮಠ ಸೇವಾ ಟ್ರಸ್ಟ್ ಕಾರುಣ್ಯ ಆಶ್ರಮ ಜೀವ ಸ್ಪಂದನ ಚಾರಿಟೇಬಲ್ ಟ್ರಸ್ಟ್ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಮತ್ತು ಇನ್ನಿತರ ಹಲವಾರು ಸಂಘ-ಸಂಸ್ಥೆಗಳಿಂದ ಗೀತಾ ಮಿಟ್ಟಿ ಮನಿಯವರಿಗೆ ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂತ ಅಂತೋನಿಯವರ ಹಿರಿಯ ಪ್ರಾಥಮಿಕ ಅನುದಾನಿತ ಶಾಲೆಯ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಮೇರಿ. ಜೀವ ಸ್ಪಂದನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಡಾ.ನವೀನ್ ದಂತವೈದ್ಯರು.

ಕಾರ್ಯದರ್ಶಿಗಳಾದ ಅವಿನಾಶ ದೇಶಪಾಂಡೆ. ಸದಸ್ಯರುಗಳಾದ. ಚನ್ನ ವೀರನಗೌಡ. ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ನ ಕಾರ್ಯದರ್ಶಿಗಳಾದ ಅಶೋಕ ನಲ್ಲ. ಹೊಸಳ್ಳಿ ಇ. ಜೆ.ಗ್ರಾ. ಪಂ. ಅಧ್ಯಕ್ಷರುಗಳಾದ ನಾಗಲಿಂಗಪ್ಪ. ಹೊಸಳ್ಳಿ ಕ್ಯಾಂಪಿನ ಹಿರಿಯರಾದ ಸಿದ್ದರಾಮಯ್ಯ ಸ್ವಾಮಿ. ಕಾರುಣ್ಯಆಶ್ರಮದ ಸಿಬ್ಬಂದಿಗಳಾದ ಗೀತಾ ಕುಲಕರ್ಣಿ. ನಾಗೇಶ ಸ್ವಾಮಿ. ಹಾಗೂ ಈ ಶಾಲೆಯ ಹಳೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗ ಶಾಲೆಯ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;