ಬಸನಗೌಡ ಬಾದರ್ಲಿ ಪೌಂಡೇಶನ್ ವತಿಯಿಂದ ಪೆ.22 ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ…!!!

ಬಸನಗೌಡ ಬಾದರ್ಲಿ ಪೌಂಡೇಶನ್ ವತಿಯಿಂದ ಪೆ.22 ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ.

ಸಿಂಧನೂರು : ನಗರದ ಸರ್ಕಾರಿ ಮಹಾವಿದ್ಯಾಲಯದಲ್ಲಿ ಪೆ.22 ಮಂಗಳವಾರದಂದು ಬೆಳಿಗ್ಗೆ 10 ಗಂಟೆಗೆ ಬಸನಗೌಡ ಬಾದರ್ಲಿ ಫೌಂಡೇಶನ್ ಹಾಗೂ ಅಭಿಮಾನಿಗಳ ಬಳಗದ ವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುವುದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳ ಬೇಕೆಂದು ಕಾಂಗ್ರೆಸ್ ಮುಖಂಡರಾದ ಸೋಮನಗೌಡ ಬಾದರ್ಲಿ ತಿಳಿಸಿದರು.

ನಗರದ ಯುವ ಕಾಂಗ್ರೆಸ್ ಕಛೇರಿಯಲ್ಲಿ ಕರೆದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು ಪೆ.22 ರಂದು ಸರ್ಕಾರಿ ಮಹಾವಿದ್ಯಾಲಯ ಸಿಂಧನೂರಿನಲ್ಲಿ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳ ವಿಶೇಷ ತಜ್ಞ ವೈದ್ಯರು ಆಗಮಿಸಲಿದ್ದು, ತಾಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ಶಿಬಿರದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಕ್ಯಾನ್ಸರ್ ,ಕಣ್ಣು, ಎಲುಬು ಕೀಲು ,ಮಕ್ಕಳ ತಜ್ಞರು,ನರ, ಹೃದಯ ,ಚರ್ಮ, ದಂತ,ಕಿವಿ, ಸ್ತ್ರೀರೋಗ ,ಶ್ವಾಸಕೋಶ ,ಕರುಳ ,ಮೂಗು, ಗಂಟಲು, ಮೂತ್ರ ಪಿಂಡ ,ಕಿಡ್ನಿ, ಸಾಮಾನ್ಯ ಶಸ್ತ್ರ ಚಿಕಿತ್ಸೆ ಗಳಿಗೆ ಸಂಬಂಧಿಸಿದಂತೆ ಬೆಂಗಳೂರು, ಕೊಪ್ಪಳ, ರಾಯಚೂರು ,ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳ ನುರಿತ ವೈದ್ಯರು ಹಾಗೂ ತಾಲೂಕಿನ ವೈದ್ಯರ ಸಹಯೋಗದೊಂದಿಗೆ ಈ ಶಿಬಿರ ನಡೆಸಲಾಗುವದೆಂದು ತಿಳಿಸಿದರು.

ಶಿಬಿರದಲ್ಲಿ ಸ್ಕಾನಿಂಗ್ , ಹೃದಯ ,ತಪಾಸಣೆ ಇಕೋ ,ಇ.ಸಿ.ಜಿ ,ರಕ್ತ ಪರೀಕ್ಷೆ , ಕಣ್ಣಿನ ಪರೀಕ್ಷೆ , ವಿಶೇಷ ಯಂತ್ರೋಪಕರಣಗಳಿಂದ ತಪಾಸಣೆ ಸೌಲಭ್ಯ ಲಭ್ಯವಿದೆ ಹಾಗೂ ಬಸನಗೌಡ ಬಾದರ್ಲಿ ಅಭಿಮಾನ ಬಳಗದವರಿಂದ ನೇತ್ರದಾನ ಮಾಡುವ ಶಿಬಿರ ಕೂಡ ಇರುತ್ತದೆಂದು ವಿಶೇಷವಾಗಿ ತಿಳಿಸಿದರು ಈ‌ ಕಾರ್ಯಕ್ರಮದಲ್ಲಿ ಹೆಚ್ಚು ಹೆಚ್ಚು ಜನರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಿ ಎಂದು ವಿನಂತಿಸಿಕೊಂಡರು.

‌‌ ಇದೇ ಸಂಧರ್ಭದಲ್ಲಿ ಶಿವಕುಮಾರ ಜವಳಿ , ವೆಂಕಟೇಶ ರಾಗಲಪರ್ವಿ, ಖಾಜಾ ಹುಸೇನ್ ರೌಡಕುಂದಾ, ಅಮರೇಶ ಗಿರಿಜಾಲಿ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend