ವಿಜಯನಗರ ಜಿಲ್ಲೆ,ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮ ಪಂಚಾಯತಿ ಸಂಜೀವಿನಿ ಮಹಿಳಾ ಒಕ್ಕೂಟ ದವತಿಯಿಂದ ಗ್ರಾಮದ 6ನೇ ವಾರ್ಡ್ ನಲ್ಲಿ ಬರುವ 5 ಮಹಿಳಾ ಸ್ವ ಸಹಾಯ ಸಂಘ ಗಳನ್ನು ಒಗ್ಗೂಡಿಸಿ ವಾರ್ಡ್ ಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟ ವನ್ನು ರಚಿಸಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞೆ ಮಾಡಿಸಿದರು. ಹೂವಿನಹಡಗಲಿ ತಾಲೂಕು ಪಂಚಾಯತಿಯ NRLM ಸಂಯೋಜನಾಧಿಕಾರಿಗಳಾದ ಶ್ರೀ ಬಸವರಾಜ್ ಸರ್ ರವರು ಭೋದಿಸಿ ಸ್ತ್ರೀ ಯರು ಆರ್ಥಿಕಾಭಿವೃದ್ಧಿಯನ್ನು ಹೊಂದಲು ಸ್ವಾವಲಂಭಿಗಳಾಗಿ ಸರ್ಕಾರದಿಂದ ಬರುವ ಸಾಲ ಸೌಲಭ್ಯದ ಹಣದಿಂದ ಮುಂದೆ ಬರಬೇಕಾಗಿದೆ ಮತ್ತು ಕುಟುಂಬದ ಸಮಸ್ಯೆಗಳನ್ನು ಸುಧಾರಿಸಿ ಕೊಳ್ಳಲು ಸಂಘದ ಆಂತರಿಕ ಸಾಲ ಸೌಲಭ್ಯ &ಸರ್ಕಾರದಿಂದ ಕಡಿಮೆ ಬಡ್ಡಿದರದಲ್ಲಿ ಸಿಗುವ ಸಾಲ ಸೌಲಭ್ಯವನ್ನು ಪಡೆದು ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಮಹಿಳೆಯರು ಸ್ವ ಉದ್ಯೋಗಗಳಿಂದ ಮೇಲೆ ಬರುವಂತೆ ಕರೆ ನೀಡಿದರು ಈ ಸಂದರ್ಭದಲ್ಲಿ ಎಂ ಬಿ ಕೆ ಯಾದ ಶ್ರೀಮತಿ ಲಕ್ಷ್ಮಿ ಯು, ಎಲ್ ಸಿ ಆರ್ ಪಿ ಗಳಾದ ಯು ಶ್ರುತಿ, ಹೆಚ್ ಶಕುಂತಲಮ್ಮ, & ಭಾಗ್ಯಮ್ಮ ಎ ಹಾಗೂ 5 ಮಹಿಳಾ ಸಂಘಟನೆಗಳ ಎಲ್ಲಾ ಸದಸ್ಯರುಗಳು ಇಟ್ಟಿಗಿ ಗ್ರಾಮದ ತವನಿಧಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಾಲ್ಗೊಂಡಿದ್ದರು.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
