ಬೆಂಗಳೂರಿನಲ್ಲಿ ಭೋರ್ಘರೆಯುವ ಭೀಮಸಾಗರ ! ಬೆಂಗಳೂರು ಚಲೋ ಸಂಪೂರ್ಣ ಯಶಸ್ವಿ !

ಬೆಂಗಳೂರಿನಲ್ಲಿ ಭೋರ್ಘರೆಯುವ ಭೀಮಸಾಗರ ! ಬೆಂಗಳೂರು ಚಲೋ ಸಂಪೂರ್ಣ ಯಶಸ್ವಿ !

ಸಿಂಧನೂರು :ನ್ಯಾಯಧೀಶ ಮಲ್ಲಿಕಾರ್ಜುನಗೌಡನನ್ನು ವಜಾಗೊಳಿಸಲು ಆಗ್ರಹಿಸಿ ನಡೆಸಿದಂತ ಬೆಂಗಳೂರು ಚಲೋ ಹೋರಾಟ ಸಂಪೂರ್ಣ ಯಶಸ್ವಿಯಾಗಿದೆ. ಹಾಗೆಯೇ ಈ ಹೋರಾಟದಲ್ಲಿ ಪಾಲ್ಗೊಂಡ ಜಿಲ್ಲೆ ಸೇರಿದಂತೆ ರಾಜ್ಯದ ಮೂಲೆ-ಮೂಲೆಯಿಂದ ಭಾಗವಹಿಸಿದಂತ ಮಹಾ ಜನತೆಗೆ ದಲಿತ, ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟವು ಕ್ರಾಂತಿಕಾರಿ ಜೈಭೀಮ್ ವಂದನೆಗಳನ್ನು ಸಲ್ಲಿಸುತ್ತೇವೆ.ಈಹೋರಾಟದಲ್ಲಿ ಜನರು ಸಮುದ್ರದ ಅಲೆಗಳಂತೆ ರಾಜ್ಯದ ಆಯಾ ಜಿಲ್ಲೆಗಳಿಂದ ನೀಲಿ ದ್ವಜ-ಶ್ಯಾಲುಗಳನ್ನು ಹೊತ್ತು ನ್ಯಾಯಾಧೀಶನ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳದಿರುವ ರಾಜ್ಯ ಸರಕಾರದ ನಡೆಯನ್ನು ತೀವ್ರವಾಗಿ ಖಂಡಿಸಿ, ವಸಂತ ಮೇಘ ಘರ್ಜನೆಯಂತೆ ಕ್ರಾಂತಿಕಾರಿ ಹಾಡುಗಳು, ಘೋಷಣೆಗಳು, ಹಲಗೆ(ತಮಟೆ)ಮೇಳಗಳು, ಜೈಭೀಮ್ ನೀಲಿ ಸಮವಸ್ತದ ವಿದ್ಯಾರ್ಥಿಗಳು, ಮಹಿಳೆಯರು, ಜೈಭೀಮ್ ಸೈನಿಕರು ಸ್ವಯಂ ಪ್ರೇರಣೆಯಿಂದ ಭಾಗವಹಿಸಿದ ದೃಷ್ಯವನ್ನು ಕಣ್ಣಾರೆ ಕಂಡು ಭಾಗವಹಿಸಿದ ನಾವುಗಳು ನದಿಗಳೇಲ್ಲಾ ಒಂದುಕಡೆ ಹರಿದು ಬಂದು ಸಮುದ್ರ ಸೇರಿ, ಜ್ವಾಲಮುಖಿಯಾಗಿ ನ್ಯಾಯಮೂರ್ತಿಯ ಹಾಗೂ ಕ್ರಮಕೈಗೊಳ್ಳದ ಸರಕಾರದ ವಿರುದ್ಧ ಭೋರ್ಗರೆಯುವ ಘಂಟಾಘೋಷಣೆಗಳು ಮೊಳಗಿದವು.

ಸಂಗೋಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಹೊರಟ ಮೆರವಣಿಗೆಯ ‍ಮಹಾರ್ಯಾಲಿ ಸಂಗೋಳ್ಳಿ ರಾಯಣ್ಣ ವೃತ್ತದ ಮಾರ್ಗವಾಗಿ, ಆನಂದ್‌ರಾವ್ ವೃತ್ತದ ಪ್ಲೈ ಒವರ್ ರಸ್ತೆ ಮೂಲಕ ಜೈಭೀಮ್ ಘೋಷಣೆಗಳೊಂದಿಗೆ ಪ್ರವಾಹದಂತೆ ಸಾಗಿಬಂದ ಮಹಾ ಜನತೆ ಸ್ವಾತಂತ್ರ್ಯ ಉದ್ಯಾನವನದ ಹತ್ತಿರ ಬರುತ್ತಿದ್ದಂತೆ ಪೋಲಿಸ್ ಪಡೆ ಮೆರವಣಿಗೆಯನ್ನು ನೋಡಿ ಹೌಹಾರಿ ಅಸಹಾಯಕರಾಗಿ ನಿಂತಿದ್ದರು. ಪೋಲಿಸ್ ನಿರೀಕ್ಷೆಗೂ ಮೀರಿ ಸೇರಿದ ಅಸಂಖ್ಯಾತ ಜನರನ್ನು ಕಂಟ್ರೋಲ್ ಮಾಡುವುದು ಸುಲಭದ ಮಾತಲ್ಲವೆಂದು ಖಚಿತಪಡಿಸಿದಂತಿತ್ತು.

ಮಹಾಜನತೆಯು ವಿಧಾನಸೌಧ ಮತ್ತು ಹೈಕೋರ್ಟ್ ರಸ್ತೆಗೆ ನುಗ್ಗಲು ಯತ್ನಿಸಿದಾಗ ಪೋಲಿಸ್ ಪಡೆ ಬೇಡವೆಂದು ನಿಲ್ಲಿಸಿ, ನಿಮ್ಮ ಹತ್ತಿರ ಮುಖ್ಯಮಂತ್ರಿಯವರನ್ನು ಇಲ್ಲಿಗೆ ಕರೆದುಕೊಂಡು ಬರುತ್ತೇವೆಂದು ಡಿಸಿಪಿಯವರು ಮಾತು ಕೊಟ್ಟರು. ಆಗ ಜನತೆಯನ್ನು ಸಂಘಟಕರು ಸಮಾಧಾನ ಪಡಿಸಿ, ಸ್ಯಾತಂತ್ರ್ಯ ಉದ್ಯಾನವನದ ಮುಂದೆ ರಸ್ತೆಯಲ್ಲಿಯೇ ಭಾರಿ ಬಹಿರಂಗ ಸಭೆಯಾಗಿ ಮಾರ್ಪಟ್ಟಿತು. ನಂತರ ಮೈಸೂರಿನಿಂದ ಜ್ಞಾನಪ್ರಕಾಶ ಸ್ವಾಮಿಯವರ ನೇತೃತ್ವದಲ್ಲಿ ಪಾದಯಾತ್ರೆಯ ಮೂಲಕ ಹರಿದು ಬಂದ ಜನಸಾಗರ ಸೇರಿಕೊಂಡಿತು. ಬಹಿರಂಗ ಸಭೆಯನ್ನು ಉದ್ದೇಶಿಸಿ, ರಾಜ್ಯದ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯಗಳ ರಾಜ್ಯಮಟ್ಟದ ನಾಯಕರು ಹಾಗೂ ಸ್ವಾಮೀಜಿಗಳು ಮಾತನಾಡಿದರು. ಸರಕಾರ ಮುನಿರತ್ನಂ ಅವರನ್ನು ಮನವಿ ಸ್ವೀಕರಿಸಲು ಕಳುಹಿಸಿತ್ತು. ಆದರೆ ಅವರಿಗೆ ಬಹಿರಂಗವಾಗಿಯೇ ಮುಖ್ಯಮಂತ್ರಿಯವರು ಬರಲೇಬೇಕೆಂದು ಪಟ್ಟುಹಿಡಿದು ಹೇಳಿ ಕಳುಹಿಸಲಾಯಿತು. ಮಹಾನ್ ಚಳುವಳಿಗೆ ಮಣಿದ ಸರಕಾರ ಕೊನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಂದು ಮನವಿ ಸ್ವೀಕರಿಸಿ ಮಾತನಾಡಿ, ಮಲ್ಲಿಕಾರ್ಜುನಗೌಡನ ಬಗ್ಗೆ ನಾನು ೩ ದಿನದೊಳಗಾಗಿ, ನ್ಯಾಯಾಂಗದ ಮುಖ್ಯ ರಜಿಸ್ಟಾರ್‌ರೊಂದಿಗೆ ಸಭೆ ನಡೆಸಿ ಕ್ರಮ ತೆಗೆದುಕೊಳ್ಳುವ ಕುರಿತು ಮಾತನಾಡಿ ನಿಮಗೆ ತಿಳಿಸುತ್ತೇನೆಂದು ಭರವಸೆಯನ್ನು ನೀಡಿದರು. ಬೆಂಗಳೂರು ಚಲೋ ಯಶಸ್ವಿಗೊಳಿಸಲು ಸಾಗರದಂತೆ ಸೇರಿದ ದೇಶದ ಮೂಲ ನಿವಾಸಿಗಳಿಗೆ ದಲಿತ, ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟ ಭೀಮ ವಂದನೆಗಳು ತಿಳಿಸಿದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend