ಸಚಿವರಿಂದ ಅಂಭಾದೇವಿ ದೇವಸ್ಥಾನ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ…!!!

ಸಚಿವರಿಂದ ಅಂಭಾದೇವಿ ದೇವಸ್ಥಾನ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ.

ಸಿಂಧನೂರು : ಇಂದು ಸಿಂಧನೂರಿನ ಅಂಬಾದೇವಿ ದೇವಸ್ಥಾನ ಕಟ್ಟಡ ಶಂಕುಸ್ಥಾಪನೆ ನೆರವೇರಿಸಿದ್ದು ಪೂರ್ವಜನ್ಮದ ಪುಣ್ಯ. ಭಾರತದ ಇತಿಹಾಸದಲ್ಲಿ 150 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ಜಗತ್ತಿಗೆ ಭಾರತದ ಪರಂಪರೆ, ಸಂಸ್ಕೃತಿಯನ್ನು ತೋರಿಸಿಕೊಟ್ಟರು. ಹಾಗೆಯೇ ಸ್ವತಂತ್ರ ಬಂದು ಎಪ್ಪತ್ತೈದು ವರ್ಷಗಳ ನಂತರ ಅವರ ಹಾದಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾರತ ದೇಶವನ್ನು ಗುರುವಿನ ರೂಪದಲ್ಲಿ ತಂದು ನಿಲ್ಲಿಸಿದ್ದಾರೆ. ಗಂಗಾ ನದಿ ಶುದ್ಧೀಕರಣ, ಕಾಶಿ ಕ್ಷೇತ್ರ, ಅಯೋಧ್ಯೆ ರಾಮಮಂದಿರ, ಕೃಷಿಕ್ಷೇತ್ರದಲ್ಲಿ ಅನೇಕ ಬದಲಾವಣೆಗಳನ್ನು ತಂದು ದೇಶದ ಕಡೆ ನೋಡುವ ಹಾಗೆ ಮಾಡಿದ್ದಾರೆ.ಬದಲಾವಣೆ ಜಗದ ನಿಯಮ, ” ದೂರವಾಣಿ ಬಂತು ಒಲೆಯಲ್ಲಿ ಹೋಯಿತು, ದೂರದರ್ಶನ ಬಂತು ಆಕಾಶವಾಣಿ ಹೋಯಿತು, ಕಾಲುಗಾಡಿ ಬಂತು ಎತ್ತಿನ ಗಾಡಿ ಹೋಯಿತು, ಪಾಪ್ ಸಂಗೀತ ಬಂತು ಜನಪದ ಹೋಯ್ತು, ಡಿಸ್ಕೋ ಡ್ಯಾನ್ಸ್ ಬಂತು ಭರತನಾಟ್ಯ ಹೋಯಿತು, ಕಂಪ್ಯೂಟರ್ ಬಂತು ಬೆರಳಚ್ಚು ಹೋಯ್ತು, ಯಂತ್ರಮಾನವ ಬಂತು ಸ್ವತಂತ್ರ ಮಾನವ ಹೋಯ್ತು”, ಎಷ್ಟೇ ತಂತ್ರಜ್ಞಾನ ಬದಲಾದರೂ ನಮ್ಮ ಭಾರತೀಯ ಸಂಸ್ಕೃತಿಯನ್ನು ಮರೆಯಬಾರದು. ನಾವು ವಿದೇಶದಲ್ಲಿ ಉದ್ಯೋಗ, ವಿದ್ಯಾಭ್ಯಾಸ ಮಾಡಿದರು ತಂದೆ-ತಾಯಿಗೆ ಗೌರವಿಸುವುದನ್ನು ಮರೆಯಬಾರದು. ರಾಜ್ಯದಲ್ಲಿ 35ಸಾವಿರ ದೇವಾಲಯಗಳ ಅರ್ಚಕರ 4000 ವೇತನವನ್ನು ಹೆಚ್ಚಿಗೆ ಮಾಡುವುದು ಮತ್ತು ಅವರ ಆರೋಗ್ಯದ ವ್ಯಚ್ಛದ ದೃಷ್ಟಿಯಿಂದ ಲೈಫ್ ಇನ್ಸೂರೆನ್ಸ್ ನೀಡಿ, ಆರನೇ ವೇತನವನ್ನು ಕೊಡಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ರಾಜ್ಯದ ಪ್ರತಿಯೊಂದು ದೇವಸ್ಥಾನದ ಸಂಪೂರ್ಣ ಮಾಹಿತಿಯನ್ನು ದೇಶದ ಪ್ರತಿಯೊಬ್ಬ ಪ್ರಜೆಗೂ ಭಕ್ತರಿಗೂ ಮತ್ತು ಪ್ರವಾಸಿಗರಿಗೆ ಒದಗಿಸುತ್ತದೆ 7 ಕೋಟಿ 93 ಲಕ್ಷ ಅನುದಾನದಲ್ಲಿ ದೇವಸ್ಥಾನ ನಿರ್ಮಾಣ ಮಾಡಲು ಸಾಧ್ಯವಾಗದಿದ್ದರೆ ಹೆಚ್ಚಿನ ಹಣ ಬೇಕಾಗಿದ್ದಲ್ಲಿ ನೀಡಲು ಸಿದ್ದ ಎಂದು ಹಜ್ ಮತ್ತು ವಕ್ವ್ ಸಚಿವರಾದ ಶಶಿಕಲಾ ಜೊಲ್ಲೆ ಅವರು ಬರವಸೆ ನೀಡಿದರು.

ಸಿಂಧನೂರು ತಾಲೂಕಿನ ಸೋಮಲಾಪೂರು ಗ್ರಾಮದ ಶ್ರೀ ಅಂಭಾದೇವಿ ದೇವಸ್ಥಾನದ 793.50 ರೂ. ವೆಚ್ಚದ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

793.50 ರೂ. ಲಕ್ಷ ಹಣದಲ್ಲಿ 4 ಕೋಟಿ ಭಕ್ತರು ನೀಡಿದ ಹಣ 3 ಕೋಟಿ ಸರ್ಕಾರ ನೀಡಿದ ಅನುದಾನದಲ್ಲಿ ಇಂದು ಅಂಬಾದೇವಿ ದೇವಸ್ಥಾನ ನಿರ್ಮಾಣ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಒಂದು ವೇಳೆ ಆದರೆ ಹಣ ಸಾಲದೇ ಹೋದರೆ ವ್ಯಾಪಕ ಪ್ರಚಾರ ಮಾಡಿದರೆ ಭಕ್ತರು ಮತ್ತು ದಾನಿಗಳು ನೀಡುವವರು. ತಾಲೂಕಿನಾದ್ಯಂತ ಅನೇಕ ದೇವಾಲಯಗಳು ಸ್ಥಿತಿಲಾ ವ್ಯವಸ್ಥೆಯಲ್ಲಿವೆ ಅವುಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವೆಂಕಟರಾವ್ ನಾಡಗೌಡ ಸಚಿವರಲ್ಲಿ ಮನವಿ ಮಾಡಿದರು.

ಸಂಸದರಾದ ಕರಡಿ ಸಂಗಣ್ಣ ಮಾತನಾಡಿ ಭಾರತದ ಇತಿಹಾಸವನ್ನು ಪ್ರಪಂಚಕ್ಕೆ ಪರಿಚಯ ವಾಗಬೇಕಾದರೆ 2014ರಲ್ಲಿ ನೀವು ಮಾಡಿದ ಆಶೀರ್ವಾದದಿಂದ ಭಾರತೀಯ ಜನತಾ ಪಕ್ಷದ ಸಾಧ್ಯವಾಯಿತು. ರಾಷ್ಟ್ರಮಟ್ಟದಲ್ಲಿ ಭಾರತದಲ್ಲಿರುವ ದೇವಸ್ಥಾನಗಳು ಪುನಚೇತನ, ಸಂಸ್ಕೃತಿ, ಇತಿಹಾಸ ಪ್ರಧಾನಿ ನರೇಂದ್ರ ಮೋದಿಯವರು ಸಮಾಜಕ್ಕೆ ಮತ್ತು ದೇಶಕ್ಕೆ ವಿಶ್ವಕ್ಕೆ ಪರಿಚಯ ಮಾಡಿಕೊಟ್ಟಿದ್ದಾರೆ. ದೇವಸ್ಥಾನ ಕಟ್ಟಡ ಮುಗಿಯುವವರೆಗೆ ಹಣಕಾಸಿನ ನೆರವು ಅವಶ್ಯಕತೆ ಬಂದರೆ ತಮ್ಮ ಸಹಕಾರವಿರಲಿ ಅಧಿಕಾರ ಶಾಶ್ವತವಲ್ಲ ಕೆಲಸ ಮಾಡಿರುವುದು ಬಹಳ ದಿನ ಉಳಿಯುತ್ತದೆ ಆ ಕೆಲಸ ಸಚಿವರು ಮಾಡುತ್ತಾರೆ ಎಂಬ ನಂಬಿಕೆ ವಿಶ್ವಾಸವಿದೆ. ಸಿಂಧನೂರು ಕ್ಷೇತ್ರ ಮೊದಲ ಬಾರಿಗೆ ಸಂಸದನಾಗಬೇಕಾದರೆ ಹೆಚ್ಚು ಮತಗಳಿಂದ ನನ್ನನ್ನು ಆಯ್ಕೆ ಮಾಡಿ ರಾಜಕೀಯ ಪುನರ್ಜನ್ಮ ಕೊಟ್ಟಿದೆ. ಮುನಿರಾಬಾದ ದಿಂದ ರಾಯಚೂರು ರೈಲು ಮಾರ್ಗ ವೇಗವಾಗಿ ಕೆಲಸ ಪ್ರಾರಂಭವಾಗಿದೆ, ಜೂನ್ ತಿಂಗಳ ಒಳಗಾಗಿ ನಗರಕ್ಕೆ ಪ್ರಾರಂಭ ಮಾಡಲಾಗುವುದು. ಅತಿ ವೇಗವಾಗಿಬೆಳೆಯುತ್ತಿರುವ ಸಿಂಧನೂರು ನಗರಕ್ಕೆ ಬೈಪಾಸ್ ಅವಶ್ಯಕತೆ ಇದ್ದು ಮಾಜಿ ಮತ್ತು ಹಾಲಿ ಶಾಸಕರ, ಸಂಸದರ ಜೊತೆಗೂಡಿ ರಾಜ್ಯ ಸರ್ಕಾರದಿಂದ ಒಪ್ಪಿಗೆ ಪಡೆಯಲಾಗಿದ್ದು ಅದನ್ನು ಕೇಂದ್ರ ಸರ್ಕಾರದಿಂದ ಒಪ್ಪಿಗೆ ನೀಡಿದ ನಂತರ ಕೆಲಸಪ್ರಾರಂಭ ಮಾಡಲಾಗುವುದು. ತಾಲೂಕಿಗೆ ಕೇಂದ್ರೀಯ ವಿಶ್ವವಿದ್ಯಾಲಯ ಮಾಡುವುದರ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಅದಕ್ಕೆ ಜಾಗವನ್ನು ಏಳುರಾಗಿಕ್ಯಾಂಪಿನಲ್ಲಿ ಇರುವುದರಿಂದ ಅಲ್ಲಿಗೆ ಮೂಲಭೂತ ಸೌಕರ್ಯಗಳಾದ ರಸ್ತೆ , ವಿದ್ಯುತ್, ಇನ್ನಿತರ ಸೌಕರ್ಯಗಳು ಮುಗಿದ ನಂತರ ಕೆಲಸ ನೆರವೇರಿಸಲಾಗುವುದು ಎಂದರು.

ಸೋಮನಾಥ ಶಿವಾಚಾರ್ಯ ಶ್ರೀಗಳು ಚನ್ನಬಸವನಗರ ವೆಂಕಟಗಿರಿ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿದ್ದರು

ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಕೆ. ವಿರುಪಾಕ್ಷಪ್ಪ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮದ್ವಚಾರ್ಯ ಅಚಾರ್ಯ, ಮಾಜಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮರೇಗೌಡ ವಿರುಪಾಪುರ, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಸನಗೌಡ ಬಾದರ್ಲಿ, ಶಿವನಗೌಡ ಗೊರೆಬಾಳ, ಬಸವರಾಜ ಹಿರೇಗೌಡ ,ರಾಜಶೇಖರ್ ಪಾಟೀಲ್, ದೇವಸ್ಥಾನದ ಸಮಿತಿ ಅಧ್ಯಕ್ಷರಾದ ರಾಜಶೇಖರಸ್ವಾಮಿಹಿರೇಮಠ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಂ. ಸೀತಾರಾಮಯ್ಯ, ಹಾದಿಮನಿ ವೀರಲಕ್ಷ್ಮಿ ,ಅಪರಜಿಲ್ಲಾಧಿಕಾರಿಗಳಾದ ದುರ್ಗೇಶ್, ಸಹಾಯಕ ಆಯುಕ್ತರಾದ ರಾಹುಲ್ ಸಂಕನೂರ, ತಹಸೀಲ್ದಾರ ಮಂಜುನಾಥ ಭೋಗವತಿ, ಹನುಮೇಶ್ ಸಾಲಗುಂದ, ಎಚ್.ಎಮ್ ಬಡಿಗೇರ, ಸಿದ್ದು ಹೂಗಾರ, ಸೋಮಲಾಪುರ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು, ದೇವಸ್ಥಾನ ಸಮಿತಿಯ ಸರ್ವ ಸದಸ್ಯರು, ಗ್ರಾಮಸ್ಥರು, ಭಕ್ತಾದಿಗಳು ಭಾಗವಹಿಸಿದ್ದರು..

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend