ಸಿಂಧನೂರು : ಇಂದು ಕನ್ನಡದ ಕಬೀರ್ ಇಬ್ರಾಹಿಂ ಸುತಾರ ಅವರಿಗೆ ಶ್ರದ್ದಾಂಜಲಿ ಸಭೆಯನ್ನು ಸಿಂಧನೂರು ಎಪಿಎಂಸಿಯ ಶ್ರಮಿಕ ಭವನದಲ್ಲಿ ಆಯೋಜಿಸಲಾಗಿತ್ತು.
ಕನ್ನಡದ ಕಬೀರ್ ಇಬ್ರಾಹಿಂ ಸುತಾರಗೆ ಒಂದು ನಿಮಿಷಗಳ ಕಾಲ ಮೌನಾಚರಣೆಯನ್ನು ಮಾಡಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
ನಂತರ ಇಬ್ರಾಹಿಂ ಸುತಾರ ಕುರಿತು ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆಯಿಂದ “ಇಬ್ರಾಹಿಂ ಸುತಾರ ಕನ್ನಡದ ಕಬೀರ
ಮಾಹಾಲಿಂಗಪುರ ಮಾಣಿಕ್ಯಧಾರಾ ಇಬ್ರಾಹಿಂ ಸುತಾರಾ ಎಂಬ ಹಾಡನ್ನು ಹಾಡಿ ಎಲ್ಲರೂ ಇಬ್ರಾಹಿಂ ಸುತಾರಗೆ ಸಮರ್ಪಿಸಿದರು.
ನಂತರ ಮಾತನಾಡಿದ, ಕರ್ನಾಟಕ ರಾಜ್ಯ ರೈತ ಸಂಘದ ಅಮೀನಪಾಶಾ ದಿದ್ದಗಿಯವರು ಮರೆಯಲಾಗದ ಮಾಣಿಕ್ಯ ಕರ್ನಾಟಕದ ಕಬೀರರಾದಂತಹ ಇಬ್ರಾಹಿಂ ಸುತಾರ ಅವರು ಅಪಾರ ಜನಸ್ತೋಮವನ್ನು ಬಿಟ್ಟು ನಮ್ಮನ್ನಗಲಿದ್ದಾರೆ. ಅವರು ಸಾರಿದ ಸಂದೇಶಗಳನ್ನು ನಾವುಗಳೇಲ್ಲಾ ಅಳವಡಿಸಿಕೊಳ್ಳಬೇಕೆಂದರು.
ಹಾಗೂ ಸಿಪಿಐ(ಎಂಎಲ್)ನ ರಾಜ್ಯ ಸಮಿತಿ ಸದಸ್ಯರಾದ, ಎಂ.ಗಂಗಾಧರ ಮಾತನಾಡಿ, ಸರ್ವ ಧರ್ಮಗಳ ಭಾವೈಕ್ಯ ಸಂಗಮದ ಹರಿಕಾರ ಇಂದು ನಮ್ಮನ್ನಗಲಿದ್ದಾರೆ ಅವರಿಗೆ ನಮ್ಮ ಮನದಾಳದ ಭಾವಪೂರ್ಣ ಶ್ರದ್ದಾಂಜಲಿಯನ್ನು ಸಲ್ಲಿಸುವುದರ ಮೂಲಕ ಅವರು ಸಾರಿದಂತ ಬಸವಾದಿ ಶರಣರ, ಸೂಫಿ ಸಂತರ ಸಂದೇಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹಿಂದೂ-ಮುಸ್ಲಿಂ ಕ್ರೈಸ್ತ ಪಾರಸಿ ಜೈನ್ ಸಮುದಾಯದವರು ಒಂದೇ ಭಾವೈಕ್ಯದೆಡೆಯಲ್ಲಿ ಸಾಗಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ತಿನ ಜಿಲ್ಲಾ ಸಂಚಾಲಕರಾದ ಮೌನೇಶ ಜಾಲವಾಡ್ಗಿ, ಶ್ರಮಜೀವಿ ಹಮಾಲರ ಸಂಘದ ಹೆಚ್.ಆರ್.ಹೊಸಮನಿ, ಅಲೆಮಾರಿ ಬುಡಕಟ್ಟು ಒಕ್ಕೂಟದ ಜಿಲ್ಲಾ ಸಂಚಾಲಕರಾದ ಆಂಜನೇಯ್ಯ ಮೋತಿ, ಜಿಲಾನಿ ಜವಳಗೇರಾ, ಖಾಜಾಸಾಬ ಹೂಲ್ಲೂರು, ಹನುಮಂತ ಹನುಮನಗರ ಕ್ಯಾಂಪ್, ರಮ್ಜಾನ್ ಸಾಬ ಸೇರಿದಂತೆ ಇತರರು ಭಾಗವಹಿಸಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
