;

ಪೊಲೀಸ್ ಇಲಾಖೆ ಕರೆದಿದ್ದ ಸಂಧಾನ ಸಭೆ ಯಶಸ್ವಿ…!!!

ಪೊಲೀಸ್ ಇಲಾಖೆ ಕರೆದಿದ್ದ ಸಂಧಾನ ಸಭೆ ಯಶಸ್ವಿ.

ಸಿಂಧನೂರು : ನಿನ್ನೆ ದಲಿತ ಸಮುದಾಯದ ಹುಡುಗ ವೀರಶೈವ ಸಮುದಾಯಕ್ಕೆ ಮತ್ತು ವೀರಶೈವ ಸಮಾಜದ ಮುಖಂಡ ದಲಿತ ಸಮುದಾಯಕ್ಕೆ ಕೆಟ್ಟದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದನ್ನು ಖಂಡಿಸಿ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಮತ್ತು ವೀರಶೈವ ಸಮಾಜದ ಮುಖಂಡರ ಸಭೆಯನ್ನು ಪೋಲಿಸ್ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸರ್ಕಿಟ್ ಹೌಸ್ ನಲ್ಲಿ ಸಂಧಾನ ಸಭೆ ಯಶಸ್ವಿಯಾಯಿತು.

ನಂತರ ಮಾತನಾಡಿದ ಅಮರೇಗೌಡ ಗದ್ರಟಗಿ ಹಿಂದುಳಿದ ಮತ್ತು ಮುಂದುವರಿದ ಎಲ್ಲಾ ಜನಾಂಗದ ನಾಯಕರ ಸಂಧಾನ ಸಭೆ ಕುಳಿತುಕೊಂಡು ಸಿಂಧನೂರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ನಿನ್ನೆ ನಡೆದ ಘಟನೆಯನ್ನು ಮರೆತು ಎಲ್ಲರೂ ಶಾಂತಿಯುತವಾಗಿರಬೇಕು. ಯಾವುದೇ ಪ್ರಚೋದನೆಗೆ ಒಳಗಾಗದೆ ಕೆಟ್ಟ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಬಾರದು.ಬೇರೆ ಸಮುದಾಯಕ್ಕೆ ನೋವಾಗುವಂತ ಕೆಲಸ ಯಾರು ಮಾಡಬಾರದು.ಎಲ್ಲಾ ಸಮಾಜದ ಮುಖಂಡರು ಎಲ್ಲಾದನ್ನು ಮರೆತುನಾವೆಲ್ಲರೂ ಒಂದು ಎಂದು ನಡೆಯೋಣ ಎಂದು ಹೇಳಿದರು.

ನಂತರ ಮಾತನಾಡಿದ ಹೆಚ್. ಎನ್. ಬಡಿಗೇರ ವೀರಶೈವ ಸಮಾಜದ ವತಿಯಿಂದ ಒಂದು ರ್ಯಾಲಿ ಮಾಡುವದರ ಮೂಲಕ ತಮ್ಮದೇ ಆದಂತಹ ಹಕ್ಕನ್ನು ಕೇಳಲು ಹೊರಟಿದ್ದರು.
ಅಂತಹ ಸಂದರ್ಭದಲ್ಲಿ ನಮ್ಮ ಜನಾಂಗದ ಹುಡುಗ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಮೆಸೇಜ್ ನಿಂದ ಸಮುದಾಯಕ್ಕೆ ನೋವಾಗಿದೆ ಎಂದು ಗಲಾಟೆ ನಡೆಯಿತು.ಆ ಮೆಸೇಜನ್ನು ಸ್ಟೇಟಸ್ ನಲ್ಲಿ ಹಾಕಲು ಕಾರಣ ವೀರಶೈವ ಸಮಾಜದ ಮುಖಂಡತ್ವ ವಹಿಸಿಕೊಂಡಂತಹ ಕೆಲವು ಕಿಡಿಗೇಡಿಗಳು ಜಾತಿನಿಂದನೆ ಮಾಡಿ ಮಾತನಾಡಿದರು ಎಂಬ ಕಾರಣಕ್ಕಾಗಿ ಆ ಹುಡುಗ ಸ್ಟೇಟಸ್ ನಲ್ಲಿ ಹಾಕಿದ್ದಾನೆ ಎಂದು ವೀರಶೈವ ಸಮಾಜದವರು ಆ ಹುಡುಗನ ಮೇಲೆ ಕೇಸ್ ದಾಖಲು ಮಾಡಿದ್ದರು.ದಲಿತ ಸಮುದಾಯಕ್ಕೆ ನೋವಾಗುವಂತಹ ಮಾತನಾಡಿದ್ದರು. ದಲಿತ, ಅಲ್ಪಸಂಖ್ಯಾತ, ಮತ್ತು ಹಿಂದುಳಿದವರು ಸೇರಿ ವೀರಶೈವ ಮುಖಂಡರ ಮೇಲೆ ಕೇಸು ಮಾಡಲು ಪ್ರಯತ್ನ ನಡೆದಿತ್ತು.ಆದರೆ ಇಂದು ವೀರಶೈವ ಮತ್ತು ಅಹಿಂದ ನಾಯಕರ ಒಗ್ಗೂಡಿ ಪ್ರಕರಣ ದಾಖಲು ಮಾಡೊದು ಬೇಡಾ ಎಂದು ವಾಪಸ್ ತೆಗೆದು ಕೊಳ್ಳುತ್ತೇವೆ ಎಂದರು.
ಎಲ್ಲಾ ಸಮಾಜದ ಮುಖಂಡರು ಕೋಮು ಗಲಭೆ ಅವಕಾಶ ಮಾಡಿಕೊಡಬಾರದು.ಇದು ಒಳ್ಳೆಯದಲ್ಲ. ನಿರ್ಣಯ ತೆಗೆದುಕೊಂಡ ನಮ್ಮ ತಾಲೂಕಿನ ಎಲ್ಲಾ ಯುವಕರಿಗೆ ಹೇಳೋದ್ ಒಂದೇ ಮಾತು ಪೇಸ್ಬುಕ್ಕು ವಾಟ್ಸಪ್ಪು ನಲ್ಲಿ ಯಾವುದೇ ಅವಾಚ್ಯ ಶಬ್ದವನ್ನು ಯಾರು ಮಾತನಾಡಬಾರದು. ಪ್ರಚೋದನಾಕಾರಿ ಹೇಳಿಕೆಗಳನ್ನು ಕೊಡಬಾರದು ಅದು ಏನೇ ಇದ್ದರೂ ಕೂಡ ಪೊಲೀಸ್ ಇಲಾಖೆಯ ಮತ್ತು ಹಿರಿಯರ ಗಮನಕ್ಕೆ ತರಬೇಕು ಶಾಂತಿಯುತವಾದ ಹಕ್ಕುಗಳನ್ನು ಸಂವಿಧಾನದ ಮೂಲಕ ಪಡೆದುಕೊಳ್ಳುವ ಹಕ್ಕು ಎಲ್ಲರಿಗಿದೆ.ವೀರಶೈವ ಸಮಾಜದವರಾಗಿರಲಿ ಬೇರೆ ಯಾವ ಸಮಾಜದವರಾಗಿರಲಿ ತಮ್ಮ ತಮ್ಮ ಹಕ್ಕುಗಳನ್ನು ಕೇಳಲು ಯಾವುದೇ ಒಂದು ಜಾತಿಯ ಬಗ್ಗೆ ಟೀಕೆಗಳನ್ನು ಮಾಡುವುದಾಗಲಿ ನಿಂದಿಸುವ ದಾಗಲಿ ಮಾಡುವುದು ತಪ್ಪು. ದೇಶದಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ ಅದನ್ನು ದೇಶದಲ್ಲಿ ಸಂಪೂರ್ಣವಾಗಿ ನಾಶವಾಗಲು ವೀರಶೈವ ಗುರುಗಳು ಮತ್ತು ಮುಖಂಡರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ನಂತರ ಕೆ.ಕರಿಯಪ್ಪ ಮಾತನಾಡಿ ತಾಲೂಕಿನ ಎಲ್ಲಾ ಸಮಾಜದ ಮುಖಂಡರು ಸಭೆಯನ್ನು ಕರೆದು ಈ ಸಭೆಯನ್ನು ನಡೆಸಿರುವ ಡಿವೈಎಸ್ಪಿ ಸಿಪಿಐ ಪಿಎಸ್ಐ ಯವರಿಗೆ ಎಲ್ಲಾ ಸಮಾಜದ ಮುಖಂಡರ ಪರವಾಗಿ ಧನ್ಯವಾದ ತಿಳಿಸಿದರು.ಗಣೇಶ ಹಬ್ಬ ಆಗಿರಲಿ, ಯಾವುದೇ ಸಮಾರಂಭವಾಗಿರಲಿ ಶಾಂತಿಯುತವಾಗಿ ಎಲ್ಲರೂ ಅಣ್ಣತಮ್ಮಂದಿರಾಗಿ ನಡೆಯುವಂತಹ ವಾತಾವರಣ ಆಗಿದೆ ನಾಡಿನ ಜನತೆಗೆ ಸಿಂಧನೂರಿನಿಂದ ಒಳ್ಳೆಯ ಸಂದೇಶ ಹೋಗುವಂತಾಗಲಿ ಎಂದು ಹೇಳಿದರು

ಈ ಸಂದರ್ಭದಲ್ಲಿ ವೀರಶೈವ ಸಮಾಜದ ಮುಖಂಡರಾದ ಅಮರೇಗೌಡ ಗದ್ರಟಗಿ, ಬಸನಗೌಡ ಬಾದರ್ಲಿ, ಬಸವರಾಜ್ ನಾಡಗೌಡ, ಪಂಪನಗೌಡ ಬಾದರ್ಲಿ, ಮಲ್ಲಿಕಾರ್ಜುನ ಪಾಟೀಲ, ಶಿವಕುಮಾರ್ ಜವಳಿ, ಶರಣಯ್ಯಸ್ವಾಮಿ ಕೋಟೆ, ಅಹಿಂದ ವರ್ಗದ ಹಿರಿಯ ಮುಖಂಡರಾದ ಕೆ.ಕರಿಯಪ್ಪ,
ಎಚ್.ಎನ್.ಬಡಿಗೇರ,ರಾಮಣ್ಣ ಗೊನ್ವಾರ,ನರಸಪ್ಪ ಕಟ್ಟಿಮನಿ, ವೆಂಕೋಬ ನಾಯಕ ರಾಮಾತ್ನಾಳ,ಸುಭಾಷ ಫ್ರಾಂಕ್ಲಿನ,ಆರ್. ಅಂಬ್ರುಸ,
ಅಶೋಕ್ ನಂಜಲದಿನ್ನಿ,
ಶೇಖರಪ್ಪ ದುಮತಿ,ಎಂ. ಗಂಗಾಧರ, ಅಯ್ಯಪ್ಪ ಮಲ್ಲಾಪೂರು, ಜಿಲಾನಿ ಪಾಷಾ, ಬಾಬರ್ ಪಾಷಾ,ವಾಷಿಮ್ ಖಾದ್ರಿ ಇತರರು ಭಾಗಿಯಾಗಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;