ಚಳ್ಳಕೆರೆ ತಾಲ್ಲೂಕು ಪರಶುರಾಂಪುರ ಹೋಬಳಿ ಕ್ಯಾದಿಕುಂಟೆ ಗ್ರಾಮದಲ್ಲಿ ಒತ್ತುವರಿಯಾಗಿದ ಸರ್ಕಾರಿ ಜಮೀನು ತೆರವು ಗೊಳಿಸಲಾಗಿದೆ ಈ ಗ್ರಾಮದ ಸರ್ವೆ ನಂಬರ್ 157 ರಲ್ಲಿ ಸರ್ಕಾರಿ ಜಮೀನು 20 ಎಕರೆ 16 ಗುಂಟೆ ಇತ್ತು ಈ ಜಮೀನಿನಲ್ಲಿ ಅನಧಿಕೃತವಾಗಿ ಗುಡಿಸಲುಗಳು ಮತ್ತು ಹಲವಾರು ರಾತ್ರೋರಾತ್ರಿ ಅತಿಕ್ರಮಿಸಿ ಕೊಂಡಿದ್ದು ವಿಷಯ ತಿಳಿದು ಬೆಳ್ಳಂಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳ ಸಮಕ್ಷಮದಲ್ಲಿ ಒತ್ತುವರಿಯಾಗಿದ್ದು ಸರ್ಕಾರಿ ಜಮೀನನ್ನು ಮರುವಶಕ್ಕೆ ಪಡೆಯಲಾಯಿತು ಒತ್ತುವರಿಗೆ ಪ್ರಯತ್ನಿಸಿದ ವ್ಯಕ್ತಿಗಳಿಗೆ ಮೊಕದ್ದಮೆ ದೂರು ದಾಖಲಿಸುವುದಾಗಿ ಬೆದರಿಸಿ ಎಚ್ಚರಿಕೆ ನೀಡಿ ಹಾಗೆಯೇ ಗುಡಿಸಿಲುಗಳನ್ನು ಕೂಡ ತೆರವುಗೊಳಿಸಲಾಗಿದೆ ಮುಂಬರುವ ದಿನಗಳಲ್ಲಿ ಚಳ್ಳಕೆರೆ ತಾಲೂಕಿನ ಯಾವುದೇ ಸರ್ಕಾರಿ ಜಮೀನು ಕೆರೆ ಕುಂಟೆ ಹಳ್ಳ-ಕೊಳ್ಳ ಅರಣ್ಯಭೂಮಿಯನ್ನು ಯಾವುದೇ ಕಾರಣಕ್ಕೂ ಒತ್ತುವರಿ ಮಾಡುವುದಕ್ಕೆ ಮುಂದಾಗಬಾರದು ಎಂದು ಒತ್ತುವರಿಗೆ ಪ್ರಯತ್ನಿಸಿದಲ್ಲಿ ಗೂಂಡಾ ಕಾಯ್ದೆ ಮತ್ತು ಭೂ ಕಂದಾಯ ಕಾಯ್ದೆಯ ನಿಯಮದಡಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು
ಈ ಸಂದರ್ಭದಲ್ಲಿ ಪರಶುರಾಂಪುರ ಪಿಎಸ್ಐ ಶ್ರೀಮತಿ ಸ್ವಾತಿ ಕಂದಾಯ ಇಲಾಖೆಯ ನಿರೀಕ್ಷಕ ಮೋಹನ್ ಮತ್ತು ಪೊಲೀಸ್ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು…

ವರದಿ. ಶಶಿಕುಮಾರ್, ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
