;

ಬದುಕಿನ ಪಯಣ ಅಂತಿಮಗೊಳಿಸಿದ ಪದ್ಮಶ್ರೀ ಕನ್ನಡದ ಕಬೀರ್…!!!

ಬದುಕಿನ ಪಯಣ ಅಂತಿಮಗೊಳಿಸಿದ ಪದ್ಮಶ್ರೀ ಕನ್ನಡದ ಕಬೀರ್

ಸರ್ವ ಧರ್ಮ ಸಮನ್ವಯ ಪ್ರವಚನಕಾರರು ಮತ್ತು ಭಾವೈಕ್ಯ ಹರಿಕಾರ ಇಬ್ರಾಹಿಂ ಸುತಾರ ಅವರು ಜೀವನದ ಅಂತಿಮ ಯಾತ್ರೆ ಮುಗಿಸಿ ಇಹಲೋಕವನ್ನು ತ್ಯಜಿಸಿದ್ದು ಮಹಾಲಿಂಗಪುರ ನಗರದಲ್ಲಿ ಕಾರ್ಮೋಡ ಕವಿದು ಮೌನ ಆವರಿಸಿತ್ತು
ಸೂಫಿ ಸಂತನೆಂದೆ ಖ್ಯಾತಿ ಪಡೆದು ಕರ್ನಾಟಕದ ರಾಜ್ಯದ ತುಂಬೆಲ್ಲ ಬಾವೈಕ್ಯ ಸರ್ವಧರ್ಮ ಸಾಮರಸ್ಯದ ಸಂಗಮಗೊಳಿಸುತ ಸಮಾಜದ ಎಲ್ಲ ಧರ್ಮ ಆಧ್ಯಾತ್ಮಿಕವಾಗಿ ಅನುರಾಗ ಪಸರಿಸುತ್ತಿದ್ದ ಕಬೀರ್. ಪ್ರಚಂಡ ಜ್ಞಾನಸುಧೆ, ಸಮಾನತೆ,ಸಾತ್ವಿಕತೆ ಆಧ್ಯಾತ್ಮ ಸಂಗಮಗೊಳಿ ಪ್ರವಚನ ನೀಡುತ್ತಾ ಸಮಾಜ ಸರ್ವತೊಮುಖವಾಗಿ ಶಿಕ್ಷಣ ಪ್ರೇಮಿಯಾಗಿ ಹೆಸರುವಾಸಿಯಾಗಿದ್ದರು.
ಕೆಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು, ಚೇತರಿಕೆ ಕಂಡ ನಂತರ ಮರಳಿದ ಸಂತ ಶನಿವಾರ ಮುಂಜಾನೆ ಮತ್ತೆ ಎದೆನೋವು ಕಂಡು ಆಸ್ಪತ್ರಗೆ ಕರೆತಂದರು ಸಾವು ಬದುಕಿನ ನಡುವೆ ಹೋರಾಟ ನಡಸಿ ಆಸ್ಪತ್ರೆಯಲ್ಲಿಯೆ ಕೊನೆಯುಸುರೆಳೆದರು.
ಈ ಸಾವಿನ ಸುದ್ದಿ ಕೇಳಿದ ತಕ್ಷಣ ಜನ ಸಾಗರ ಹರಿದು ಬಂದಿತ್ತು ಸಾವಿನಲ್ಲು ಭಾವೈಕ್ಯ ಮೆರೆದ ಇಬ್ರಾಹಿಂ ಸುತಾರರು ಇನ್ನು ಇಸ್ಲಾಂ ಧರ್ಮದಂತೆ ವಿಧಾನಗಳನ್ನು ಮುಗಿಸಿ ಮಂಜಾನೆ ಹತ್ತು ಗಂಟೆ ಸುಮಾರಿಗೆ ಪಾರ್ಥಿವ ಶರೀರವನ್ನು ಸಾರ್ವಜನಿಕ ವೀಕ್ಷಣೆಗೆ ತರಲಾಯಿತು.
ಸಾಯಂಕಾಲ ನಾಲ್ಕು ಗಂಟೆ ಸಮಯದ ಹೊತ್ತಿಗೆ ಸಮೀಪದ ಎಲ್ಲ ಮಠಾಧಿಶರು, ಗಣ್ಯವ್ಯಕ್ತಿಗಳು,ಸ್ನೇಹವೃಂದ ಮತ್ತು ಮಹಾಲಿಂಗಪುರ ನಗರದ ಎಲ್ಲ ಅಭಿಮಾನಿಗಳು ಅನುಯಾಯಿಗಳು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ ಬಗೆ ಕಂಡು ಬಂತು, ಪೋಲೀಸ ಇಲಾಖೆ ಗಾಳಿ ಗುಂಡು ಹಾರಿಸಿ ಸರ್ಕಾರದ ಸಕಲ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಿದರು.
ಸಂಜೆ ಐದು ಸುಮಾರು ಹೊತ್ತಿಗೆ ಇಸ್ಲಾಂ ಧರ್ಮದಂತೆ ವಿಧಿ ವಿಧಾನದ ನಮಾಜ ಮಾಡಿ
ಪಾರ್ಥಿವ ಶರೀರವನ್ನು ಕಾಲ್ನಡಿಗೆಯಲ್ಲೇ ರಥಯಾತ್ರೆ ಮೂಲಕ ಮಹಾಲಿಂಗಪುರದ ಪ್ರಮುಖ ಬೀದಿಗಳಲ್ಲಿ ಹಾದು ನಗರದ ಹೊರವಲಯದ ತಮ್ಮ ತೋಟದಲ್ಲಿ ಅಂತಿಮ ಸಂಸ್ಕಾರ ನೆರವೆರಿಸಲಾಯಿತು.
ಇಬ್ರಾಹಿಂ ಸುತಾರರು ರಾಜ್ಯ ಸರ್ಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾಗಿ ಇನ್ನು ಹಲವಾರು ಪ್ರಶಸ್ತಿ ಹಾಗೂ ಭಾರತ ಸರ್ಕಾರ ಕೊಡಮಾಡುವ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗದ್ದರು,
ಇಬ್ರಾಹಿಂ ಸುತಾರರು ಇಹಲೋಕ ತ್ಯಜಿಸಿದ್ದು ಆಧ್ಯಾತ್ಮದ ಕೊಂಡಿ ಕಳಚಿದಂತಾಗಿದೆ ..

 

ವರದಿ. ಬಸವರಾಜ ನಂದೆಪ್ಪನವರ
ರಬಕವಿ ಬನಹಟ್ಟಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;