;

ನೂತನ ಕಾರ್ಮಿಕ ಘಟಕ ಪಧಾದಿಕಾರಿಗಳ ಆಯ್ಕೆ…!!!

ನೂತನ ಕಾರ್ಮಿಕ ಘಟಕ ಪಧಾದಿಕಾರಿಗಳ ಆಯ್ಕೆ.

ಸಿಂಧನೂರು : ಇಂದು ಮಾಜಿ ಶಾಸಕರಾದ ಹಂಪನಗೌಡ ಅವರ ನಿವಾಸದಲ್ಲಿ ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಾರ್ಮಿಕ ಘಟಕದ ಪಧಾದಿಕಾರಿಗಳನ್ನು ನೇಮಕ ಮಾಡಿ ಆದೇಶ ಪತ್ರ ನೀಡುವ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಯಿತು. ಸದರಿ ನೇಮಕ ಆದೇಶವನ್ನು ಹಂಪನಗೌಡ ಬಾದರ್ಲಿ ಮಾಜಿ ಶಾಸಕರು ಇವರ ಶಿಫಾರಸ್ಸಿನ ಮೇರಿಗೆ ಉರುಕುಂದಪ್ಪ ಜಿಲ್ಲಾಧ್ಯಕ್ಷರು ಕಾರ್ಮಿಕ ಘಟಕ ವಿಭಾಗ ರಾಯಚೂರು ಹಾಗೂ ಪಂಪನಗೌಡ ಬಾದರ್ಲಿ ಅಧ್ಯಕ್ಷರು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಇವರು ಆದೇಶ ಪತ್ರ ನೀಡಿದರು.
ನನ್ನ ಸಾಬ್ ಮೇಸ್ತ್ರಿ ತಂದೆ ಸತ್ತರ್ ಸಾಬ್ ಇವರನ್ನು ಕಾರ್ಮಿಕ ಘಟಕದ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಹಾಗೂ ಮೋಹನ್ ಕುಮಾರ್ ತಂದೆ ಹನುಮಂತಪ್ಪ ಇವರನ್ನು ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿಯನ್ನಾಗಿ. ಮುಕ್ತರ್ ಅಹಮದ್ ತಂದೆ ಮೊಹಮ್ಮದ್ ನವಾಜ್ ಇವರನ್ನು ಕಾರ್ಮಿಕ ಘಟಕದ ಅಧ್ಯಕ್ಷರನ್ನಾಗಿ, ವಿವೇಕ್ ಮಂಡಲ್ ತಂದೆ ಸತ್ಯಚರಣ ಇವರನ್ನು ಕಾರ್ಮಿಕ ಘಟಕದ ಗ್ರಾಮೀಣ ಅಧ್ಯಕ್ಷರನ್ನಾಗಿ, ಹಾಜಿ ಸಾಬ್ ತಂದೆ ಹುಸೇನ್ ಸಾಬ್ ಇವರನ್ನು ಕಾರ್ಮಿಕ ಘಟಕದ ನಗರ ಕಾರ್ಯದರ್ಶಿ ಯನ್ನಾಗಿ ಮಾಡಿ ಇವರೆಲ್ಲರಿಗೂ ನೇಮಕಾತಿ ಆದೇಶ ಪ್ರತಿಯನ್ನು ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ರಾಜುಗೌಡ ಬಾದರ್ಲಿ,ಖಾಜಿ ಮಲ್ಲಿಕ್ ಅಧ್ಯಕ್ಷರು ನಗರ ಬ್ಲಾಕ್ ಕಾಂಗ್ರೆಸ್, ಅನಿಲ್ ಕುಮಾರ್ ವೈ ಪ್ರಧಾನ ಕಾರ್ಯದರ್ಶಿ ಬ್ಲಾಕ್ ಕಾಂಗ್ರೆಸ್, ಸಿದ್ದು, ಆಸಿಫ್, ಕಾಸಿಂ, ಕಾಳಪ್ಪ, ಖಾದರ್ ಮೇಸ್ತ್ರಿ, ಶಾಮಿದ, ವಾಹಿದ್,ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಇನ್ನು ಮುಂತಾದವರು ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;