ವಿವಿಧ ಅಭಿವೃದ್ದಿ ಕಾಮಗಾರಿ ಉದ್ಘಾಟನೆ ಹಾಗೂ ಭೂಮಿ ಪೂಜೆ ನೆರವೇರಿಸಿದ ಶಾಸಕ ವೆಂಕಟರಾವ್ ನಾಡಗೌಡ.
ಸಿಂಧನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2021-22ನೇ ಸಾಲಿನಲ್ಲಿ ಕೆ.ಕೆ. ಆರ್.ಡಿ.ಬಿ.(ಎಸ್. ಸಿ.ಪಿ.)(ಮೈಕ್ರೋ) ಅನುದಾನದಲ್ಲಿ ವಿವಿಧಅಭಿವೃದ್ದಿ ಕಾಮಗಾರಿಗಳಿಗೆ ಸಿಂಧನೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ವೆಂಕಟರಾವ್ ನಾಡಗೌಡ ಅವರು ಉದ್ಘಾಟನೆ ಹಾಗೂ ಭೂಮಿ ಪೂಜೆಯನ್ನು ನೆರವೇರಿಸಿದರು.
ಕಾಮಗಾರಿಗಳು ಅಚ್ಚುಕಟ್ಟಾಗಿ ನಡೆಯಬೇಕಾದರೆ ಗ್ರಾಮೀಣ ಪ್ರದೇಶಗಳಲ್ಲಿ ಜನರ ಸಹಕಾರ ಬಹಳ ಮುಖ್ಯ. ಕಾಮಗಾರಿ ಮಾಡುವ ಸಮಯದಲ್ಲಿ ನೀವೇ ಮುಂದೆ ನಿಂತು ಗುಣಮಟ್ಟದ ಕೆಲಸ ಮಾಡಲು ಸಹಕಾರ ನೀಡಬೇಕು. ಕಾಮಗಾರಿಗಳು 5 ರಿಂದ 6 ತಿಂಗಳೊಳಗಾಗಿ ಕಾಲಮಿತಿಯೊಳಗೆ ಗುಣಮಟ್ಟದ ಕೆಲಸ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಮತ್ತು ಗುತ್ತೆದಾರರಿಗೆ ಖಡಕ್ಕಾಗಿ ಹೇಳಿದರು.
ಪಗಡದಿನ್ನಿ ಕ್ಯಾಂಪಿನ್ ರಸ್ತೆ ಬದಿಗಳಲ್ಲಿ ಅನಧಿಕೃತವಾಗಿ ಇಟ್ಟುಕೊಂಡಿರುವ ಅಂಗಡಿಗಳಿಂದ ರಸ್ತೆ ಬದಿಯಲ್ಲಿ ಕಸಕಡ್ಡಿ ಹಾಕುವುದರಿಂದ ದುರ್ವಾಸನೆ ಕೂಡಿದ್ದು ಜನಸಾಮಾನ್ಯರಿಗೆ ಓಡಾಡಲು ತೊಂದರೆಯಾಗಿದೆ ಎಂದು ಗ್ರಾಮದ ಜನತೆ ಶಾಸಕರಿಗೆ ತಿಳಿಸಿದಾಗ,ಅಲ್ಲೇ ಇದ್ದಗ್ರಾ.ಪಂ.
ಪಿಡಿಓಗಳಿಗೆ ಕೊರೋನಾದಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ತರ ಕಸಕಡ್ಡಿ ಎಲ್ಲೆದ್ದರಲ್ಲಿ ಬಿಸಾಡುವುದರಿಂದ ಸಾಂಕ್ರಾಮಿಕ ರೋಗಕ್ಕೆ ಜನ ತುತ್ತಾಗಬೇಕಾಗುತ್ತದೆ.ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಇಟ್ಟುಕೊಂಡಿರುವ ಅಂಗಡಿಗಳನ್ನು ತೆರವುಗೊಳಿಸಲು ತಿಳಿಸಿದರು.
ಮಾಜಿ ಸಚಿವರು ಹಾಗೂ ಶಾಸಕರಾದ ವೆಂಕಟರಾವ್ ನಾಡಗೌಡ ಅವರು ಇಂದು ವಿವಿಧ ಅಭಿವೃದ್ದಿ ಕಾಮಗಾರಿ ಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಪಗಡದಿನ್ನಿ ಗ್ರಾಮದಲ್ಲಿ 25.00 ಲಕ್ಷ ರೂ.ಗಳ ವೆಚ್ಚದ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, ಪಗಡದಿನ್ನಿ ಕ್ಯಾಂಪ್ ನಲ್ಲಿ 25.00 ಲಕ್ಷ ರೂ.ಗಳ ವೆಚ್ಚದ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ,ಕುನ್ನಟಗಿ ಕ್ಯಾಂಪ್ ನಲ್ಲಿ 20.00 ಲಕ್ಷ ರೂ.ಗಳ ವೆಚ್ಚದ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, ಹಾರಾಪೂರ ಗ್ರಾಮದಲ್ಲಿ 25.00 ಲಕ್ಷ ರೂ.ಗಳ ವೆಚ್ಚದ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಹಾಗೂ 64.00 ಲಕ್ಷರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ 4 ಶಾಲಾ ಕೊಠಡಿಗಳ ಉದ್ಘಾಟನೆ,
ಮುದ್ದಾಪೂರ ಕ್ರಾಸ್ ನಲ್ಲಿ 32.00 ಲಕ್ಷ ರೂ.ಗಳ ವೆಚ್ಚದ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, ಹಾಗೂ 25.00 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ 2 ಶಾಲಾ ಕೊಠಡಿಗಳ ಉದ್ಘಾಟನೆ,
ಮಲ್ಲಾಪೂರ ಗ್ರಾಮದಲ್ಲಿ 35.00 ಲಕ್ಷ ರೂ.ಗಳ ವೆಚ್ಚದ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ,ಗೀತಾ ಕ್ಯಾಂಪಿನಲ್ಲಿ 25.00 ಲಕ್ಷ ರೂ.ಗಳ ವೆಚ್ಚದ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಉದ್ಘಾಟನೆ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಜಕ್ಕರಾಯ ಪ್ರಥಮ ದರ್ಜೆ ಗುತ್ತೆದಾರ, ವೆಂಕಟರಾಜು, ಶ್ರೀಹರಿ, ಈರಣ್ಣ, ರಾಮರಡ್ಡಿ, ಅಮರೇಶಗೌಡ, ಸುರೇಶ, ಬಸವರಾಜ, ಯಂಕನಗೌಡ, ಗ್ರಾ.ಪಂ.ಅಧ್ಯಕ್ಷರು ಮತ್ತು ಸದಸ್ಯರು, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಓಂಕಾರಿ, ಸಂಭಂದ ಪಟ್ಟ ಇಲಾಖೆಯ ಅಧಿಕಾರಿಗಳು, ಜೆಡಿಎಸ್ ಪಕ್ಷದ ಹಿರಿಯ ಮತ್ತು ಯುವ ಮುಖಂಡರು ಹಾಗೂ ಕಾರ್ಯಕರ್ತರು, ಗ್ರಾಮದ ಅಭಿವೃದ್ದಿ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೋಳಿಸದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
