;

ಸ್ಲಗ್- ಲವ್ ಬಡ್ಸ್ ಗೆ ಜೀವ ಬೆದರಿಕೆ : ಪೋಲೀಸ್ ಮೋರೆ ಹೋದ ನವ ಜೋಡಿ!

ಸ್ಲಗ್- ಲವ್ ಬಡ್ಸ್ ಗೆ ಜೀವ ಬೆದರಿಕೆ : ಪೋಲೀಸ್ ಮೋರೆ ಹೋದ ನವ ಜೋಡಿ!
ಅವರಿಬ್ಬರು ಕಳೆದ ಎರಡು ವರ್ಷದಿಂದ ಒಬ್ಬರಿಗೊಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದಾರೆ. ಒಂದು ಕ್ಷಣ ಕೂಡ ಅವರಿಬ್ಬರು ಒಬ್ಬರೊಬ್ಬರನ್ನ ಬಿಟ್ಟು ಇರಲಾರರು. ಆದರೆ ಈ ಪ್ರೇಮಿಗಳಿಗಳಿಗೆ ಪೋಷಕರೇ ವಿಲನ್ ಆಗಿದ್ದಾರೆ. ಯುವತಿಯ ಪೋಷಕರ ವಿರೋಧದ ನಡುವೆ ಈಗ ಮದುವೆಯನ್ನೂ ಆಗಿದ್ದಾರೆ. ಆದರೆ ಪ್ರೇಮಿಗಳಿಗೆ ಇದೀಗ ಪ್ರಾಣ ಬೆದರಿಕೆಯ ಭಯ ಶುರುವಾಗಿದೆ. ಯುವತಿ ಪೋಷಕರ ವಿರೋಧದ ನಡುವೆಯೂ ಮದುವೆಯಾದ ಪ್ರೇಮಿಗಳು ರಕ್ಷಣೆ ಕೋರಿ ಪೋಲಿಸರ ಮೊರೆ ಹೋಗಿದ್ದಾರೆ.

ಹೀಗೆ ಒಬ್ಬರಿಗೊಬ್ಬರು ಪರಸ್ಪರ ಕೈ ಕೈ ಹಿಡಿದುಕೊಂಡು ನಿಂತಿರುವ ಈ ಪ್ರೇಮಿಗಳ ಹೆಸರು ಮಂಜುನಾಥ ಹಾಗೂ ಶಾಂತವ್ವ. ಪ್ರಿಯಕರ ಮಂಜುನಾಥ ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ನಿವಾಸಿಯಾಗಿದ್ರೆ, ಪ್ರಿಯತಮೆ ಶಾಂತವ್ವ ಕುಂದಗೋಳ ತಾಲೂಕಿನ ಕುಬಿಹಾಳದ ನಿವಾಸಿ. ಶಾಂತವ್ವ ನೂಲ್ವಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುವಾಗ ಮಂಜುನಾಥ ಪರಿಚಯವಾಗುತ್ತೆ. ಪರಿಚಯ ಆರಂಭದಲ್ಲಿದ್ದ ಸ್ನೇಹ ಕೊನೆಗೂ ಇಬ್ಬರ ನಡುವೆ ಪ್ರೀತಿಯಾಗಿ ಮಾರ್ಪಾಟಾಗುತ್ತೆ. ಕಳೆದ ಎರಡು ವರ್ಷದಿಂದಲೂ ಪರಸ್ಪರ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದಾರೆ. ಇವರು ಕಳೆದ ವರ್ಷ ಸೆಪ್ಟೆಂಬರ್ 24 ರಂದು ಮದುವೆಯಾಗಿ ಮನೆಯವರಿಗೆ ಗೊತ್ತಾಗದ ಹಾಗೇ ಅವರವರ ಮನೆಯಲ್ಲಿದ್ದರು. ಆದರೆ ಇದೀಗ ಇವರಿಬ್ಬರ ಪ್ರೀತಿ ವಿಚಾರ ಎರಡು ಕಡೆ ಪೋಷಕರಿಗೂ ಗೊತ್ತಾಗಿದೆ. ಆದ್ರೆ ಇಬ್ಬರ ಜಾತಿ ಬೇರೆ-ಬೇರೆಯಾಗಿದ್ದರಿಂದ ಯುವತಿಯ ಪೋಷಕರು ಇವರ ಪ್ರೀತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಬೈಟ್: ಮಂಜುನಾಥ, ಪ್ರೇಮಿ

ಇದೀಗ ಯುವತಿ ಪೋಷಕರ ವಿರೋಧದ ನಡುವೆಯೂ ಮಂಜುನಾಥ ಮದುವೆಯಾಗಿ ಮತ್ತೆ ಪೋಷಕರನ್ನು ಒಪ್ಪಿಸಿ ಅವರ ಮನೆಯಲ್ಲಿ ವಾಸವಿರುವ ಈ ಪ್ರೇಮಿಗಳಿಗೆ ಯುವತಿಯ ಪೋಷಕರು ಸ್ಥಳೀಯರ ಮೂಲಕ ಜೀವ ಬೆದರಿಕೆ ಹಾಕುತ್ತಿದ್ದರಂತೆ. ಹೀಗಾಗಿ ಯುವತಿ ಪೋಷಕರ ಪ್ರಾಣಭಯದಿಂದ ರಕ್ಷಣೆ ಕೋರಿ ಪ್ರೇಮಿಗಳು ಈಗ ​ಪೋಲಿಸರ ಮೊರೆ ಹೋಗಿದ್ದಾರೆ.ತಮಗೆ ರಕ್ಷಣೆ ಬೇಕು ಎನ್ನುತ್ತಾರೆ ನೊಂದ ಪ್ರೇಮಿಗಳು.

ಬೈಟ್-೨ಶಾಂತಾ,ಪ್ರೇಮ

ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದಲ್ಲಿ ಪ್ರಿಯತಮ ಮಂಜುನಾಥ ನಿವಾಸಕ್ಕೆ ಯುವತಿಯ ಪೋಷಕರ ಸಂಬಂಧಿಕರು ಸ್ಥಳೀಯರೊಂದಿಗೆ ತೆರಳಿ ಜೀವಬೆದರಿಕೆ ಹಾಕಿದ್ದರಂತೆ. ಕಳೆದ ಹತ್ತು ದಿನಗಳಿಂದ ಈ ಪ್ರೇಮಿಗಳಿಗೆ ಆತಂಕ ಶುರುವಾಗಿದೆ. ಈ ಇಬ್ಬರು ಪ್ರೇಮಿಗಳು ವಯಸ್ಕರಾಗಿದ್ದರಿಂದ ನಮಗೆ ಬದುಕಲು ಬಿಡಿ ಎಂದು ಯುವತಿಯ ಪೋಷಕರ ಬಳಿ ಕೇಳಿಕೊಳ್ಳುತ್ತಿದ್ದಾರೆ. ಆದ್ರೆ ಯುವತಿಯ ಪೋಷಕರು ರಾಜಕೀಯವಾಗಿ ಪ್ರಬಲವಾಗಿದ್ದರಿಂದ ಮುಂದೆ ಏನಾದ್ರೂ ಆಗಬಹುದು ಎನ್ನುವ ಭಯ ಪ್ರೇಮಿಗಳನ್ನು ಕಾಡುತ್ತಿದೆ. ಈ ಕಾರಣಕ್ಕಾಗಿಯೇ ಪೋಲಿಸರನ್ನು ಭೇಟಿ ಮಾಡಿ ರಕ್ಷಣೆ ಕೇಳುತ್ತಿದ್ದಾರೆ.

ಒಟ್ಟಿನಲ್ಲಿ ಜಾತಿ ಬೇರೆ-ಬೇರೆಯಾಗಿದ್ದಕ್ಕೆ ಪ್ರೇಮಿಗಳು ಮದುವೆಯಾಗಿ ಸಂಸಾರ ಮಾಡಲು ಕಷ್ಟಪಡುತ್ತಿದ್ದು, ಇದೀಗ ತೊಂದರೆಯಲ್ಲಿ ಸಿಲುಕಿಕೊಂಡಿದ್ದಾರೆ. ಈಗ ಪೊಲೀಸರು ಕೂಡ ಈ ಇಬ್ಬರು ಪ್ರೇಮಿಗಳಿಗೆ ರಕ್ಷಣೆ ನೀಡಲು ಮುಂದಾಗಿದ್ದಾರೆ. ಪೊಲೀಸರು ರಕ್ಷಣೆಗೆ ಬಂದಿದ್ದರಿಂದ ಸದ್ಯಕ್ಕೆ ಪ್ರೇಮಿಗಳು ಈಗ ನಿರಾಳರಾಗಿದ್ದರೂ, ಯುವಕನ ಪೋಷಕರಿಗೆ ಭಯ, ಆತಂಕ ಮಾತ್ರ ಇನ್ನೂ ಕಾಡುತ್ತಿದೆ..

ವರದಿ.ಬಸವರಾಜ್. ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;