ರಾಷ್ಟ್ರಮಟ್ಟಕ್ಕೆ ಮಕ್ಕಳ ವಿಜ್ಞಾನ ಸಮಾವೇಶ-ನೇಹಾ ಆಯ್ಕೆ
ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ವಿಜ್ಞಾನ
ಮತ್ತು ತಂತ್ರಜ್ಞಾನ ಇಲಾಖೆ. ಸಾರ್ವಜನಿಕ ಶಿಕ್ಷಣ ಇಲಾಖೆ
ಸಹಯೋಗದೊಂದಿಗೆ ರಾಜ್ಯ ವಿಜ್ಞಾನ ಪರಿಷತ್ತು ಹಮ್ಮಿಕೊಂಡ
ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ 2021ರ ರಾಜ್ಯಮಟ್ಟದ
ಸ್ಪರ್ಧೆಯಲ್ಲಿ ಹುಬ್ಬಳ್ಳಿ ಭಾವದೀಪ ಶಿಕ್ಷಣ ಸಂಸ್ಥೆಯ ಶ್ರೀಮತಿ
ವಿಮಲಾಬಾಯಿ ಮೆಮೋರಿಯಲ್ ಶಾಲೆಯ ನೇಹಾ ಎಲ್.ಆರ್ ಮಂಡಿಸಿದ ‘ಬಟ್ಟೆ
ಬ್ಯಾಗ್ ಬಳಸೋಣ-ಪ್ಲಾಸ್ಟಿಕ್ ಚೀಲ ತ್ಯಜಿಸೋಣ’ ಎಂಬ ಸಂಶೋಧನಾ
ಪ್ರಬಂಧ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. ಈ ಸಂಶೋಧನಾ
ಪ್ರಬಂಧಕ್ಕೆ ಶಾಲೆಯ ವಿಜ್ಞಾನ ಶಿಕ್ಷಕಿಯಾದ ಅಕ್ಷತಾ
ಕುರ್ಡೇಕರ ಮಾರ್ಗದರ್ಶನ ಮಾಡಿದ್ದರು.
‘ಸುಸ್ಥಿರ ಜೀವನಕ್ಕಾಗಿ ವಿಜ್ಞಾನ ಎಂಬ ಕೇಂದ್ರ ವಿಷಯದಡಿಯಲ್ಲಿ
ನಡೆದ ರಾಜ್ಯಮಟ್ಟದ ಆನ್ಲೈನ್ ಮಕ್ಕಳ ವಿಜ್ಞಾನ ಸಮಾವೇಶ
ಮಾಲ್ಯಮಾಪನಕ್ಕೆ ಒಳಪಟ್ಟು ಜಿಲ್ಲೆಗಳಿಂದ ಆಯ್ಕೆಯಾದ, ರಾಜ್ಯದ
300 ಯೋಜನೆಗಳಲ್ಲಿ 30 ಯೋಜನೆಗಳನ್ನು ರಾಷ್ಟ್ರಮಟ್ಟಕ್ಕೆ
ಆಯ್ಕೆ ಮಾಡಲಾಗಿದೆ. ಅದರಲ್ಲಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ
ಭಾವದೀಪ ಶಿಕ್ಷಣ ಸಂಸ್ಥೆಯ ಶ್ರೀಮತಿ ವಿಮಲಾಬಾಯಿ ಮೆಮೋರಿಯಲ್
ಶಾಲೆಯ ನೇಹಾಳ ಪ್ರಬಂಧ ಆಯ್ಕೆಯಾಗಿದ್ದು ಜಿಲ್ಲೆಯ ಹೆಮ್ಮೆ.
5ನೇ ವರ್ಗದಲ್ಲಿ ಓದುತ್ತಿರುವ ಕುಮಾರಿ ನೇಹಾ ತನ್ನ ಸಂಗಡಿಗರ
ಸಹಾಯದೊಂದಿಗೆ ಮೂರು ತಿಂಗಳು ಕೇಂದ್ರ ವಿಷಯದ
ಮೇಲೆ ಅಧ್ಯಯನ ನಡೆಸಿದ್ದಳು. 62 ಮನೆಗಳನ್ನು ಸಂದರ್ಶಿಸಿ
ಕಸದ ನಿರ್ವಹಣೆ, ಪ್ಲಾಸ್ಟಿಕ್ ಕಸದ ಸಮಸ್ಯೆಗಳು, ಪ್ಲಾಸ್ಟಿಕ್
ಚೀಲಗಳಿಗೆ ಪರ್ಯಾಯವಾಗಿ ಬಟ್ಟೆ ಚೀಲಗಳ ಬಳಕೆ ಕುರಿತಾಗಿ
ತನ್ನ ಸಂಶೋಧನಾ ವರದಿ ಮಂಡಿಸಿದ್ದಳು. ಈ ಸಾಧನೆಗೆ ಶಾಲೆಯ
ಆಡಳಿತ ಮಂಡಳಿ ಸದಸ್ಯರಾದ ಶ್ರೀರಂಗ ಹನುಮಸಾಗರ,
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಕರೀಕಟ್ಟಿ, ಡಿಡಿಪಿಆಯ್ ಕಚೇರಿ
ವಿಜ್ಞಾನ ವಿಷಯ ಪರಿವೀಕ್ಷಕರಾದ ಸಂಜಯ ಮಾಳಿ,
ಉಪನಿರ್ದೇಶಕರಾದ ಎಸ್.ಎಸ್,ಕೆಳದಿಮಠ ವಿದ್ಯಾರ್ಥಿ ಮತ್ತು ಶಿಕ್ಷಕರನ್ನು ಅಭಿನಂದಿಸಿದ್ದಾರೆ.
ಕಳೆದ ವರ್ಷವೂ ನೇಹಾ ಎಲ್.ಆರ್ ಅವರು ‘ಕಷಾಯ ಕುಡಿಯೋಣ-
ಕರೋನಾ ಓಡಿಸೋಣ’ ಎಂಬ ವಿಷಯದ ಅಡಿ ಮೂರು ತಿಂಗಳು
ಅಧ್ಯಯನ ನಡೆಸಿ ಸಂಶೋಧನಾ ಪ್ರಬಂಧ ಮಂಡಿಸಿದ್ದಳು…
ವರದಿ. ಬಸವರಾಜ್. ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
