ಆರೋಪಿಗಳ ಅಂದರ್
ಅಂಕರ್- ರಿಯಲ್ ಎಸ್ಟೇಟ್ ಉದ್ಯಮಿ
ರಾಜಶೇಖರ್ ರೆಡ್ಡಿ ಕೊಲೆ ಪ್ರಕರಣ ಪ್ರಮುಖ ಅರೋಪಿಗಳಾದ ಜಯರಾಮ್ ಮತ್ತು ಶಶಿ ಎಂಬುವವರನ್ನ ಬಂಧಿಸುವಲ್ಲಿ ಆನೇಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ದ್ವೇಷ ಕಾರಣಕ್ಕೆ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದಾಗಿ ಆರೋಪಿಗಳು ಬಾಯಿಬಿಟ್ಟಿದ್ದಾರೆ ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹೌದು ಇದೇ ತಿಂಗಳು 5ನೇ ತಾರೀಕಿನಂದು ರೀಯಲ್ ಎಸ್ಟೇಟ್ ಉದ್ಯಮಿ ರಾಜಶೇಖರ್ ರೆಡ್ಡಿ ಆನೇಕಲ್ ಸಬ್ ರಿಜಿಸ್ಟ್ರೇಷನ್ ಕೆಲಸಕ್ಕೆ ಹೋಗಿದ್ದರು ಕೆಲಸ ಮುಗಿಸಿ ಮನೆಗೆ ಹೋಗುವಾಗ ಮೂರು ಜನ ದುಷ್ಕರ್ಮಿಗಳು ಬೈಕ್ನಲ್ಲಿ ಬಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಮಾಡಿದರು ಈ ಬಗ್ಗೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಪ್ರಕರಣವಾದ ಕೈಗೆತ್ತಿಕೊಂಡಿದ್ದ ಪೊಲೀಸರು ಆರೋಪಿಗಳ ಪತ್ತೆಗಾಗಿ ಬೆನ್ನತ್ತಿದರು ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ, ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
ವರದಿ. ನ್ಯೂಸ್ ಬ್ಯುರೋ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
