;

ಮೀನು ಹಿಡಿಯಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಸಾವು…!!!

ಮೀನು ಹಿಡಿಯಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಸಾವು.

ಆನೇಕಲ್: ಸ್ನೇಹಿತರೊಂದಿಗೆ ಮೀನು ಹಿಡಿಯಲು ಹೋದ ವೇಳೆ 9 ವರ್ಷದ ಬಾಲಕ ಕಲ್ಲು ಕ್ವಾರೆಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಕೂಡ್ಲು ಬಳಿ ನಡೆದಿದೆ.
ವಿಷ್ಣು(9) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಬಾಲಕ

ನೇಪಾಳ ಮೂಲದ ಬಿಕ್ರಂ ಎಂಬುವವರ ಪುತ್ರ ವಿಷ್ಣು ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ದೈವಿ,ಕೆಲಸ ಹರಸಿಕೊಂಡು ಕೆಲ ವರ್ಷಗಳ ಹಿಂದೆ ಕೂಡ್ಲುಗೆ ಆಗಮಿಸಿದ್ದ ಕುಟುಂಬ ಕೂಡ್ಲು ಸಮೀಪದ ಸಿಂಗಸಂದ್ರ ದಲ್ಲಿ ವಾಸವಾಗಿದ್ದರು ಸಹೋದರರ ಜೊತೆ ನೆನ್ನೇ ಮಧ್ಯಾಹ್ನ 3 ಗಂಟೆಗೆ ಮೀನು ಹಿಡಿಯಲು ಹೋಗಿದ್ದ ಬಾಲಕ ಕಾಲು ಜಾರಿ ಬಿದ್ದ ಪರಿಣಾಮ ಆಳ ಇದ್ದ ನೀರಿನಲ್ಲಿ ಈಜಲು ಬಾರದೆ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಬಾಲಕನ ಜೊತೆಯಲ್ಲಿ ಹೋಗಿದ್ದ ಸಹೋದರರಿಂದ ಕುಟುಂಬಸ್ಥರಿಗೆ ಮಾಹಿತಿ ತಿಳಿಸಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಕಾರ್ಯಾಚರಣೆ ನಡೆಸಿದರೂ ನೆನ್ನೇ ಸಂಜೆ ಕತ್ತಲಾಗುವ ತನಕ ಹುಡುಕಾಡಿದ್ರು ಮೃತದೇಹ ಪತ್ತೆಯಾಗದ ಹಿನ್ನೆಲೆಯಲ್ಲಿ ಬಳಿಕ ಇಂದು ಮುಂಜಾನೆಯಿಂದ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳೀಯ ಈಜುಗಾರರು ಜಂಟಿ ಕಾರ್ಯಾಚರಣೆ ನಡೆಸಿ ಬಾಲಕನ ಮೃತ ದೇಹ ಹೊರತೆಗೆದಿದ್ದಾರೆ. ಸಿದ್ದಸಿದ್ದ ಬಾಲಕನ ಮೃತ ದೇಹವನ್ನು ಬೆಂಗಳೂರಿನ ಸೇಂಟ್ ಜಾನ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ತೆಗೆದುಕೊಂಡು ಹೋಗಿದ್ದು,ಪರಪ್ಪನ ಅಗ್ರಹಾರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವರದಿ. ನ್ಯೂಸ್ ಬ್ಯುರೋ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;