;

ಸಂವಿಧಾನ ಓದೊಣ ಸಂವಿಧಾನಾತ್ಮಕವಾಗಿ ಮನುಷ್ಯರಾಗೊಣ!!

ಈ ದೇಶದ ಮೂಲ ಸಮಸ್ಯೆಗಳಿಗೆ ಸಂವಿಧಾನದ ಬಗೆಗಿನ ಅಜ್ಞಾನವೇ ಮೂಲ ಕಾರಣ. ಸಂವಿಧಾನವನ್ನು ಓದುವ ಮೂಲಕ ನಮ್ಮ ಹಕ್ಕುಗಳ ಬಗೆಗೆ ತಿಳಿಯಲು, ಈ ದೇಶವನ್ನು ಸುಸ್ಥಿರವಾಗಿ ರೂಪಿಸಲು ಸಾಧ್ಯ. ಆದರೆ, ಸಂವಿಧಾನ ಓದಿದವರ, ಓದಬೇಕು ಅಂದುಕೊಂಡವರ ಸಂಖ್ಯೆ ಬಹಳ ಕಡಿಮೆ. ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನ ಅನುಷ್ಠಾನಕ್ಕೆ ಬಂದು ಇಷ್ಟು ವರ್ಷಗಳಾದವು. ಆದರೆ, ಸಂವಿಧಾನದ ಬಗೆಗೆ ಅರಿವು ಮೂಡಿಸುವ ಕೆಲಸ ನಮ್ಮಲ್ಲಿ ಆಗಿಲ್ಲ. ಬದಲಿಗೆ ಅಜ್ಞಾನ, ಅವಿವೇಕಗಳನ್ನೇ ವ್ಯವಸ್ಥಿತವಾಗಿ ಬೆಳೆಸಲಾಗುತ್ತಿದೆ. ಸಮ ಬಾಳು, ಸಮಪಾಲಿನ ಆಶಯ ಹೊಂದಿರುವ ಸಂವಿಧಾನದ ಮೇಲೆ ಗದಾಪ್ರಹಾರ ಮಾಡುವಂಥ ಪ್ರಯತ್ನಗಳು ನಡೆಯುತ್ತಿವೆ. ಇಂಥ ಹೊತ್ತಿನಲ್ಲಿ ನಾಳೆಯ ಪ್ರಜೆಗಳಾದ ವಿದ್ಯಾರ್ಥಿಗಳಿಗೆ ಸಂವಿಧಾನವನ್ನು ಮುಟ್ಟಿಸುವ ನಿಟ್ಟಿನಲ್ಲಿ ಈ ಕಿರುಪುಸ್ತಕ ಹೊರಬಂದಿದೆ. ವಿದ್ಯಾರ್ಥಿ ಮತ್ತು ಯುವಜನರನ್ನು ಗಮನದಲ್ಲಿಟ್ಟುಕೊಂಡೇ ‘ಸಂವಿಧಾನ ಓದು’ ಎನ್ನುವ ಕೈಪಿಡಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ ದಾಸ್‌ ಬರೆದಿದ್ದಾರೆ. ಹನ್ನೊಂದು ಅಧ್ಯಾಯಗಳ ಮೂಲಕ ಸಂವಿಧಾನದ ಉಗಮ, ಮೊದಲಿನ ಪರಿಸ್ಥಿತಿ, ಭಾರತದ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಚಾರಿತ್ರಿಕ ಹಿನ್ನೆಲೆ, ಸಂವಿಧಾನ ರೂಪುಗೊಂಡ ಬಗೆ, ಸಂವಿಧಾನದ ಹೂರಣ, ಸಂವಿಧಾನದ ಮೂಲತತ್ವಗಳನ್ನು ಸರಳವಾಗಿ ಆದರೆ, ಜವಾಬ್ದಾರಿಯುತವಾಗಿ ದಾಸ್‌ ವಿವರಿಸಿದ್ದಾರೆ. ಜತೆಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಗಂಡಾಂತರಗಳ ಬಗೆಗೂ ಪ್ರಸ್ತಾಪಿಸಿದ್ದಾರೆ. ‘ಸಂವಿಧಾನವನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿ ಅದರಂತೆ ನಡೆದುಕೊಂಡರೆ ಕೆಲವೇ ವರ್ಷಗಳಲ್ಲಿ ದೇಶದ ಸಮಸ್ಯೆ, ಸವಾಲುಗಳನ್ನು ಹಿಮ್ಮೆಟ್ಟಿಸಬಹುದು,’ ಎಂಬುದು ಲೇಖಕರ ಅಭಿಪ್ರಾಯ. ‘ಈ ಕಿರುಕೃತಿಯನ್ನು ಮತ್ತೆಮತ್ತೆ ಓದೋಣ. ಸಂವಿಧಾನಾತ್ಮಕವಾಗಿ ಮನುಷ್ಯರಾಗೋಣ’ ಎಂದು ಮುನ್ನುಡಿಯಲ್ಲಿ ಬರಗೂರು ರಾಮಚಂದ್ರಪ್ಪ ಆಶಿಸಿದ್ದಾರೆ.

ವಿದ್ಯಾರ್ಥಿಗಳು ಮತ್ತು ಯುವ ಜನತೆಗೆ ಸರಳವಾಗಿ ಸಂವಿಧಾನ ಅರಿಯಲು ತುಂಬಾ ಸಹಕಾರಿ ಇಂದಿನ ಅತೀ ಅಗತ್ಯದಲ್ಲಿ ಒಂದು

ವಿದ್ಯಾರ್ಥಿಗಳು ಮತ್ತು ಯುವ ಜನತೆಗೆ ಸರಳವಾಗಿ ಸಂವಿಧಾನ ಅರಿಯಲು ತುಂಬಾ ಸಹಕಾರಿ ಇಂದಿನ ಅತೀ ಅಗತ್ಯದಲ್ಲಿ ಒಂದು.

ವರದಿ: ಅಜಯ.ಚ
ಹೂವಿನ ಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;