;

ಸಿಂಧನೂರು :ರೈತರ ಪರವಾಗಿ ಮಾತನಾಡುವ ತಾಕತ್ತು ಶಾಸಕರಿಗಿಲ್ಲ -ಬಸನಗೌಡ ಬಾರ್ಲಿ…!!!

ಸಿಂಧನೂರು :ರೈತರ ಪರವಾಗಿ ಮಾತನಾಡುವ ತಾಕತ್ತು ಶಾಸಕರಿಗಿಲ್ಲ -ಬಸನಗೌಡ ಬಾರ್ಲಿ.

ಇಂದು ನಗರದ ಕಾಂಗ್ರೆಸ್ ಕಚೇರಿಯಿಂದ ಮಿನಿ ವಿಧಾನಸೌಧದ ವರೆಗೆ ಪಾದಯಾತ್ರೆ ಮೂಲಕ ಕಳೆದ 15 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಬೆಳೆದ ಸಾವಿರಾರು ಎಕರೆ ಜೋಳ, ಹತ್ತಿ,ತೊಗರಿ, ಇನ್ನಿತರ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಹಾನಿಗೊಳಗಾದ ರೈತರಿಗೆ ಭತ್ತಕ್ಕೆ ಪ್ರತಿ ಎಕರೆಗೆ 35000, ಒಣಬೇಸಾಯದ ಬೆಳೆಗಳಿಗೆ 25000 ಪರಿಹಾರ ನೀಡಬೇಕೆಂದು ತಾಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ಒಂದು ದಿನದ ಸಾಂಕೇತಿಕವಾಗಿ ಉಪವಾಸ ಸತ್ಯಾಗ್ರಹವನ್ನು ಮಿನಿ ವಿಧಾನಸೌಧದ ಮುಂಭಾಗದ ಗಾಂಧಿ ಸರ್ಕಲ್ನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಬಸನಗೌಡ ಬಾದರ್ಲಿ ಮಾತನಾಡಿ ರೈತರು ಅಕಾಲಿಕ ಮಳೆಯಿಂದಾಗಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ರೈತರಿಗೆ ತಾರತಮ್ಯ ಮಾಡದೆ ಸರ್ವೆ ಮಾಡಿ ಸರ್ಕಾರಕ್ಕೆ ವರದಿ ಕಳುಹಿಸಬೇಕು, ಇಲ್ಲದಿದ್ದರೆ ತಾಲೂಕು ಕಚೇರಿ ಬೀಗ ಜಡಿದು ಮುತ್ತಿಗೆ ಹಾಕಲಾಗುವುದು. ತಾಲೂಕು ದಂಡಾಧಿಕಾರಿಗಳು ನಮ್ಮ ಹೋರಾಟವನ್ನು ಹತ್ತಿಕಲು ಬಂದರೆ ಹೆದರುವುದಿಲ್ಲ. ನಮ್ಮ ಮೇಲೆ ಯಾವುದೇ ಕೇಸ ಹಾಕಿಕೊಳ್ಳಿ ಅಥವಾ ಜೈಲಿ ಗಾದರೂ ಕಳಿಸಿ ನಾವು ಯಾವುದಕ್ಕೂ ಹೆದರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು, ರಾಯಚೂರು ಕೊಪ್ಪಳ ಜಿಲ್ಲೆಗಳ ಬಿಜೆಪಿಯ ನಾಯಕರಿಗೆ ಸ್ವಲ್ಪವಾದರೂ ನಾಚಿಕೆ ಇಲ್ಲ. ಮುಖ್ಯಮಂತ್ರಿಗಳು ಬೆಳೆ ಪರಿಹಾರ ಘೋಷಣೆ ಮಾಡಿದ್ದಾರೆ ಆದರೆ ರಾಯಚೂರು ಕೊಪ್ಪಳ ಜಿಲ್ಲೆಯನ್ನು ಕಡೆಗಣಿಸಿದ್ದಾರೆ ಇದನ್ನು ಕೇಳುವ ಯೋಗ್ಯತೆ ಬಿಜೆಪಿಯ ನಾಯಕರಿಗಿಲ್ಲ. ಸ್ಥಳೀಯ ಶಾಸಕ ನಾಡಗೌಡ್ರು ಹಳ್ಳಿಗಳಿಗೆ ಬೇಕಾಬಿಟ್ಟಿ ಭೇಟಿ ನೀಡಿ ರಸ್ತೆ ಪಕ್ಕದಲ್ಲಿರುವ ಜಮೀನುಗಳಿಗೆ ತೆರಳಿ ವಾಪಸ್ಸಾಗುತ್ತಿದ್ದಾರೆ. ಆದರೆ ಸರಕಾರದ ಮಂತ್ರಿಗಳ, ಮುಖ್ಯಮಂತ್ರಿಗಳ,ಬಳಿ ಹೋಗಿ ರೈತರ ಪರವಾಗಿ ಮಾತನಾಡುವ ತಾಕತ್ತು ನಾಡಗೌಡ ಅವರಿಗಿಲ್ಲ. ಮುಂದಿನ ದಿನಗಳಲ್ಲಿ ಜನರು ನಿನಗೆ ತಕ್ಕ ಪಾಠ ಕಲಿಸುತ್ತಾರೆ. ಮುಖ್ಯಮಂತ್ರಿಗಳು ರೈತಪರ ಎಂದು ಹೇಳಿಕೊಳ್ಳುತ್ತಾರೆ,ನೀವು ನಿಜವಾಗಿ ರೈತರ ಪರವಾಗಿದ್ದರೆ ಸಿಂಧನೂರು ತಾಲ್ಲೂಕಿನಲ್ಲಿ 1ಲಕ್ಷ 20ಸಾವಿರ ಎಕರೆ ಭತ್ತ, ತೊಗರಿ, ಹತ್ತಿ,ಕಡಲೆ, ಇನ್ನಿತರ ಬೆಳೆಗಳು ನಾಶವಾಗಿವೆ. ಒಂದು ವಾರದೊಳಗೆ ಬೆಳೆ ಪರಿಹಾರ ಘೋಷಣೆ ಮಾಡಿ,ಇಲ್ಲದಿದ್ದರೆ ಅಪಾರ ಸಂಖ್ಯೆಯಲ್ಲಿ ನೊಂದ ರೈತರಿಂದ ತಹಸಿಲ್ ಕಾರ್ಯಲಯಕ್ಕೆ ಬೀಗ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
“ಮುಖ್ಯಮಂತ್ರಿ ಹೆಗಲಮೇಲೆ ಹಸಿರು ಟವೆಲ್ ,ರೈತರ ಕೈಯಲ್ಲಿ ವಿಷದ ಬಾಟಲ್ ” “ಉದ್ಯಮಿಗಳ ಆದಾಯ ದುಪ್ಪಟ್ಟು, ರೈತರ ಬವಣೆ ಇಕ್ಕಟ್ಟು” ಎಂಬ ಭಿತ್ತಿಪತ್ರಗಳನ್ನು ಹಿಡಿದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವೆಂಕಟೇಶರಾಗಲಪರ್ವಿ, ಹೆಚ್.ಎನ್ ಬಡಿಗೇರ್, ಶರಣಪ್ಪ ಟೆಂಗಿನಕಾಯಿ, ಚನ್ನಬಸವ ಉಪ್ಪಳ, ಸುಜಾತಾ ಚನ್ನಬಸವ, ದ್ರಾಕ್ಷಾಯಿಣಿ ಬಸನಗೌಡ ಅಂಬರೀಶ್ ಹತ್ತಿಗುಡ್ಡ, ವೀರರಾಜು, ಅಮರೇಶ ಬಾಗೋಡಿ,ಇನ್ನೂ ನೂರಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮಹಿಳೆಯರು,ವಿವಿಧ ಘಟಕಗಳ ಅಧ್ಯಕ್ಷರು ಭಾಗವಹಿಸಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;