ಸಂವಿಧಾನ ಸಮರ್ಪಣಾ ದಿನದ ಅಂತರಾಳದ ಮಾತುಗಳು
ವಿಜಯನಗರ ಜಿಲ್ಲೆ ಹೊಸಪೇಟೆ ಕೇಂದ್ರದಲ್ಲಿರುವ ಬಾಬಾಸಾಹೇ ಡಾ. ಬಿ ಆರ್ ಅಂಬೇಡ್ಕರ್ ಪುತ್ಥಳಿಯ ಮುಂಭಾಗದಲ್ಲಿ ಸೇರಿದ್ದ ನೂರಾರು ಸಂವಿಧಾನಪರ, ಪ್ರಗತಿಪರ , ಸಮ ಸಂಸ್ಕೃತಿಯ ಪ್ರತಿಪಾದಕ ಚಿಂತಕರ ಸಮ್ಮುಖದಲ್ಲಿ ನಡೆದ 72ನೇ ಸಂವಿಧಾನ ಸಮರ್ಪಣಾ ದಿನ!!
ದಿನಾಂಕ 26 11 2021 ರಂದು ವಿಜಯನಗರ ಜಿಲ್ಲಾ ಕೇಂದ್ರವಾದ ಹೊಸಪೇಟೆ ನಗರದಲ್ಲಿ 72ನೇ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಆಚರಿಸಲಾಯಿತು. ಹಂಪಿ – ವಿಜಯನಗರ ಬುದ್ಧವಿಹಾರ ನಿರ್ಮಾಣ ಟ್ರಸ್ಟ್ , ವಿಜಯನಗರ ಜಿಲ್ಲಾ ಡಾ. ಬಿ ಆರ್ ಅಂಬೇಡ್ಕರ್ ಸಂಘ, ಮಾನವ ಬಂಧುತ್ವ ವೇದಿಕೆ. ವಿಜಯನಗರ ಜಿಲ್ಲೆ ಇವುಗಳ ಸಂಯುಕ್ತಾಶ್ರಯದಲ್ಲಿ ಹೊಸಪೇಟೆಯ ಅಂಬೇಡ್ಕರ್ ವೃತ್ತದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಆರಂಭಗೊಂಡ ಕಾರ್ಯಕ್ರಮವನ್ನು ಹಂಪಿ – ವಿಜಯನಗರ ಬುದ್ಧವಿಹಾರ ನಿರ್ಮಾಣ ಟ್ರಸ್ಟ್ ನ ಅಧ್ಯಕ್ಷರು, ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ಭಾಗದ ಪ್ರಾಧ್ಯಾಪಕರಾದ
ಡಾ. ಎನ್ ಚಿನ್ನಸ್ವಾಮಿ ಸೋಸಲೆ
ಅವರು ಉದ್ಘಾಟಿಸಿ
ಭಾರತಕ್ಕೆ 1947 ಆಗಸ್ಟ್ 15ರಂದು ಸ್ವಾತಂತ್ರ್ಯ ದೊರಕಿತು. ಅದು ಇಂದಿಗೂ ಕವಿ ಸಿದ್ದಲಿಂಗಯ್ಯನವರು ಬರೆದಂತೆ
” ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ”
ಎನ್ನುವ ರೀತಿಯಲ್ಲಿ ಅತಂತ್ರವಾಗಿದೆ. ಏಕೆಂದರೆ ಈ ಸ್ವಾತಂತ್ರ್ಯದಿಂದ ಶತಶತಮಾನಗಳಿಂದ ಸಾಂಸ್ಕೃತಿಕವಾಗಿ ಬಲಿತ ರಾಗಿದ್ದವರು ಇನ್ನೂ ಹೆಚ್ಚೆಚ್ಚು ಬಲಿತ ರಾದರೆ ಹೊರತು, ನಮ್ಮ ಐಕ್ಯತೆಯ ನಲವತ್ತೇಳರ ಸ್ವಾತಂತ್ರ್ಯ ದಿಂದ ದಲಿತರು ಎಂದೆಂದಿಗೂ ಬಲಿತರಾದಂತೆ ಕಾಣುವುದಿಲ್ಲ ಎಂದು ಮನಮುಟ್ಟುವಂತೆ ವಿವರಿಸಿದರು. ಆದರೆ ಈ ರಾಷ್ಟ್ರದ ಮೂಲನಿವಾಸಿಗಳಾದ ದಲಿತ ವರ್ಗದವರು ಬಲಿತರನ್ನಾಗಿ ಮಾಡಲು ಸರ್ವರೀತಿಯಲ್ಲೂ ಮುಂದಾದ ವಿಶ್ವಜ್ಞಾನಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ಎಂಬುದನ್ನು ಎಳೆಎಳೆಯಾಗಿ ಸ್ಪಷ್ಟಪಡಿಸಿದರು.
ನಿಜಾರ್ಥದಲ್ಲಿ ಈ ರಾಷ್ಟ್ರದ ಮೂಲನಿವಾಸಿಗಳಿಗೆ ನಿಜವಾದ ಸ್ವಾತಂತ್ರ್ಯ ದೊರಕಿದ್ದು ನವಂಬರ್ 26 – 1949 ರಂದು ಎಂದು ತಿಳಿಸಿದರು. ಈ ದಿನ ಈ ರಾಷ್ಟ್ರದ ದಲಿತ ವರ್ಗದವರನ್ನು ಬಲಿತರನ್ನಾಗಿ ಮಾಡಿದ್ದಕ್ಕಾಗಿ ಇದು ವಿಜೃಂಭಣೆ ಆಗಲಿಲ್ಲ. ಆದರೆ ದಲಿತರನ್ನು ಇನ್ನೂ ಹೆಚ್ಚೆಚ್ಚು ಅಸ್ಪೃಶ್ಯ ರನ್ನಾಗಿ ಮಾಡಿದ್ದಕ್ಕಾಗಿ ಸ್ವಾತಂತ್ರ್ಯದಿನಾಚರಣೆ ಅತ್ಯಂತ ವೈಭವದ ವಿಜೃಂಭಣೆಯ ಮತ್ತು ಪರಾಕ್ರಮದ ಸಂಕೇತವಾಗಿ ಈ ರಾಷ್ಟ್ರದಲ್ಲಿ ವಿಜೃಂಭಿಸುತ್ತಿದೆ.
ಸಮ ಸಂಸ್ಕೃತಿಯನ್ನು ಪ್ರತಿಪಾದನೆ ಮಾಡಿದ ನಮ್ಮ ಸಂವಿಧಾನ ಸಮರ್ಪಣಾಯ ಈ ದಿನ ನಿಜವಾಗಲೂ ಭಾರತದಲ್ಲಿ ವಿಜೃಂಭಣೆಯಿಂದ ನಮ್ಮೆಲ್ಲರ ಮುಂದೆ ಇರಬೇಕಾಗಿತ್ತು. ಆದರೆ ಅವರ ಪಾರಂಪರಿಕ ಅಮಾನವೀಯ ಹಕ್ಕುಗಳನ್ನು ಕಿತ್ತುಕೊಂಡ ಬಾಬಾಸಾಹೇಬರ ಈ ಸಂವಿಧಾನ ಅವರಿಗೆ ವಿಜೃಂಭಣೆಯಿಂದ ಆಚರಿಸಲು ಆಗಲೇ ಇಲ್ಲ ಎಂಬ ಆಶಯ ವ್ಯಕ್ತಪಡಿಸಿದರು.
ಇಂತಹ ಅಸಂಪ್ರದಾಯಿಕ ಮೂಲಭೂತವಾದಿಗಳ ಧಾರ್ಮಿಕ ಕೇಂದ್ರೀಕೃತ ರಾಷ್ಟ್ರದ
ಅಸಂಸ್ಕ್ರುತಿಯನ್ನು ಪ್ರತಿಪಾದನೆ ಮಾಡುವ ಮೂಲಭೂತವಾದವೇ ಮೂಲಕಾರಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಾಹಿತಿ ಹಂಸಲೇಖ ಅವರು ಆಡಿದರೂ ಎನ್ನುವ ಆಹಾರ ಪದ್ಧತಿಯ ಕುರಿತು ಮಾತಿನ ಆಧಾರದ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಿರುವುದು ದುರಾದೃಷ್ಟಕರ ಹಾಗೂ ಖಂಡನೀಯ ಎಂದರು.
ಅವರ ಮಾತಿನಿಂದ ನಿಮಗೆ ಬೇಸರವಾಗಿದ್ದರೆ ಶತಶತಮಾನಗಳಿಂದ ನಿಮ್ಮ ಅಸಂವಿಧಾನಾತ್ಮಕ ಮನುಸ್ಮೃತಿಯ ಅಲಿಖಿತ ಸಂವಿಧಾನದ ಅಡಿಯಲ್ಲಿ
” ಈ ರಾಷ್ಟ್ರದ ಮೂಲನಿವಾಸಿಗಳು ಅಪಾರ ಜ್ಞಾನಿಗಳಾದರೂ, ಶ್ರಮದ ಮೂಲಕ ರಾಷ್ಟ್ರ ಕಟ್ಟಿದವರ , ಕೆರೆ – ಡ್ಯಾಮ್ – ಸೇತು – ಮಹಲು- ಅರಮನೆ ಕಟ್ಟಿದವರನ್ನು, ಕೃಷಿ ಮಾಡಿ- ಬೆವರ ಬಸಿದು ತನ್ನ ಹೊಟ್ಟೆಯನ್ನು ಬರಿದು ಮಾಡಿಕೊಂಡು ನಿಮ್ಮ ಹೊಟ್ಟೆಯನ್ನು ತುಂಬಿದ ಅಂದರೆ ಅನ್ನ ನೀಡಿದವರನ್ನು, , ದೇವಾಲಯವನ್ನು ಕಟ್ಟಿದವರನ್ನು , ಜಾನುವಾರುಗಳನ್ನು ಸಮೃದ್ಧವಾಗಿ ಸಾಕಿದವರನ್ನು, ವೇದ ಉಪನಿಷತ್ತು ಮತ್ತು ದೇವರ ಹೆಸರಿನಲ್ಲಿ ಶಿಕ್ಷಣವನ್ನು ನೀಡದೆ ನಿಮ್ಮ ಸ್ವಾರ್ಥದ ಪ್ರಕಾರ ಅಜ್ಞಾನಿಗಳನಾಗಿಸಿ ಇಂದಿಗೂ ಅದನ್ನು ಪಾಲಿಸುತ್ತಿರುವುವ ಕೆಲವು ಮೂಲಭೂತವಾದಿಗಳಿಗೆ ಯಾವ ಶಿಕ್ಷೆಯು ಆಗದಿರುವುದು ದುರಂತವೇ ಸರಿ.
ಭಾರತೀಯ ಸಾಮಾಜಕ ಶ್ರೇಣೀಕೃತ ವ್ಯವಸ್ಥೆಯ ಸ್ವಘೋಷಿತ “ಮೊದಲಿನವರು” ತಮ್ಮ ಮೇಲಾಗುವ ಸಣ್ಣ ಪ್ರಮಾಣದ ಕಠೋರ ಸತ್ಯದ ಮಾತಿನ ದಾಳಿಯನ್ನು (ಅಭಿಪ್ರಾಯವನ್ನು) ಸಹಿಸಿಕೊಳ್ಳದ ಅವರು ನಮ್ಮ ಮೇಲೆ ಶತಶತಮಾನಗಳಿಂದ ಆಗುತ್ತಿರುವ ಸಾಂಸ್ಕೃತಿಕ ಗದಾ ಪ್ರಹಾರವನ್ನು ಭಾರತ ಮೂಲನಿವಾಸಿಗಳು ಏಕೆ ಸಹಿಸಿಕೊಂಡಿದ್ದಾರೆ ಎಂದರೆ ಅವರು ಈ ರಾಷ್ಟ್ರವನ್ನು ಪ್ರೀತಿಸುವ ಕಾರಣಕ್ಕಾಗಿ. ಈ ರಾಷ್ಟ್ರದ ವಾರಸುದಾರರು ಎಂಬುದಕ್ಕಾಗಿ. ಈ ರಾಷ್ಟ್ರ ನನ್ನದು ಅನ್ನುವುದಕ್ಕಾಗಿ.
ಮುಂದುವರೆದು ಈ ಭಾರತದ ಮೂಲನಿವಾಸಿಗಳು ಮಾಂಸಾಹಾರ ಹಾಗೂ ಸಸ್ಯಹಾರಾಗಳೆರಡನ್ನು ಪ್ರೀತಿ ಮತ್ತು ಭಕ್ತಿಯಿಂದ ಸೇವಿಸಿ ಕಾಯಕವೇ ಕೈಲಾಸ ಎಂಬ ತತ್ವ ಸಿದ್ಧಾಂತದಡಿ ಯಲ್ಲಿ ದುಡಿದು ಬೆವರಿನ ಮೂಲಕ ರಾಷ್ಟ್ರಕ್ಕೆ “ಹಾಲ”ನ್ನು ಧಾರೆಯೆರೆದರು. ಇವರ ಬೆವರಿನ ಈ ಹಾಲನ್ನು ದೇವರ ಹೆಸರಿನಲ್ಲಿ ಬಿಟ್ಟಿಯಾಗಿ ಪಡೆದು ಕುಡಿದ ಜನರು ವಿಷವನ್ನು ಕಕ್ಕಿದರು ಎಂದು ಅಭಿಪ್ರಾಯಪಟ್ಟರು.
ಅಂದರೆ ಮೂಲನಿವಾಸಿಗಳಾದ ಈ ನೆಲದ ದಲಿತ ವರ್ಗದವರು ಹಾಗೂ ಶೂದ್ರಾತಿಶೂದ್ರರು – ಶ್ರಮಜೀವಿಗಳು ಕಟ್ಟಿದ ದೇವಾಲಯದೊಳಗೆ ಇವರನ್ನೇ ಪ್ರವೇಶ ಮಾಡಿಸಲಿಲ್ಲ, ಇವರು ಶ್ರಮಪಟ್ಟು ನಿರ್ಮಿಸಿದೆ ಕೆರೆ – ಕಟ್ಟೆ – ಬಾವಿ- ಕಲ್ಯಾಣಿ ಗಳ ನೀರನ್ನು ಇವರಿಗೆ ಮುಟ್ಟಲು ಬಿಟ್ಟುಕೊಡಲಿಲ್ಲ, ಶಿಕ್ಷಣ ಎಂಬ ಮಹತ್ವದ ಶಕ್ತಿಯನ್ನು ಇವರಿಗೆ ಕೊಡಲಿಲ್ಲ
ಇದು ಸಾಲದೆಂಬಂತೆ
ದೇವರ ಹೆಸರಿನಲ್ಲಿ ಅಮಾನವೀಯ ಪದ್ಧತಿಗಳನ್ನು ಜಾರಿ ಗೊಳಿಸಿ ಮೂಲನಿವಾಸಿಗಳನ್ನು ಅಜ್ಞಾನದ ಗುಂಪಿಗೆ ದೂಡಿ, ಅ ಅಜ್ಞಾನದ ಮೇಲೆ ತಮ್ಮ ಬೂಟಾಟಿಕೆಯ ಸುಜ್ಞಾನವೆಂಬ ಮಹಲನ್ನು ಕಟ್ಟಿಕೊಳ್ಳಲು ಮುಂದಾದರು.
ಈ ಮೂಲಭೂತವಾದಿಗಳ ಅಸಂಪ್ರದಾಯಿಕ ನೀತಿ-ನಿಯಮಗಳ ವಿರುದ್ಧವಾಗಿ ಬಾಬಾಸಾಹೇಬರ ಸಂವಿಧಾನ ಭಾರತದಲ್ಲಿ ಸಮರ್ಪಣೆ ಯಾದ ಈ ದಿನವನ್ನು ನಾವು-ನೀವೆಲ್ಲರೂ ವಿಜೃಂಭಣೆಯಿಂದ ಆಚರಣೆ ಮಾಡಬೇಕಾಗಿದೆ . 20 ಸಾವಿರ ವರ್ಷಗಳಿಂದ ತಲೆ ಬಗ್ಗಿಸಿದವರ ತಲೆಯನ್ನು ಮೇಲೆತ್ತಿ ನೋಡುವಂತೆ ಮಾಡಿದ್ದು ಈ ದಿನ. ಇಂತಹ ಸುದಿನದ ಸಂವಿಧಾನದ ಮಹತ್ವವನ್ನು ಜನರ ಮನೆ- ಮನಗಳಿಗೆ ತಿಳಿಸಬೇಕಾಗಿದೆ.
ಇದಕ್ಕೆ ಬೇಕಾಗಿರುವುದು ಶಿಕ್ಷಣ – ಸಂಘಟನೆ- ಹೋರಾಟ- ಎಂಬ ಬಾಬಾಸಾಹೇಬರ ಮೂರು ಮೂಲಭೂತ ತತ್ವಗಳನ್ನು ಪಾಲಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಸಂವಿಧಾನ ಎಷ್ಟೇ ಜನಪರವಾಗಿದ್ದರೂ ಅದನ್ನು ಜಾರಿಗೆ ತರುವವರು ಮೂರ್ಖರಾಗಿದ್ದರೆ ಸಂವಿಧಾನವು ನಿಷ್ಕ್ರಿಯೆ ಗೊಳ್ಳುವುದರಲ್ಲಿ ಎರಡು ಮಾತಿಲ್ಲ, ಅದೇ ನಿಷ್ಕ್ರಿಯವಾಗಿರುವ ಸಂವಿಧಾನವನ್ನು ಜನಮುಖಿಯಾಗಿ ಜಾರಿಗೊಳಿಸಲು ಸಮ ಸಂಸ್ಕೃತಿಯ ಹರಿಕಾರರು ಮನಸ್ಸು ಇಚ್ಛೆಯಿಂದ ಮುಂದಾದರೆ ಸಂವಿಧಾನವೇ ಮಾತನಾಡುತ್ತದೆ. ಅ ಮೂಲಕ ಜನರನ್ನು ಮಾತನಾಡಿಸುತ್ತದೆ ಎಂದು ಚಿನ್ನಸ್ವಾಮಿ ಸೋಸಲೆ ಅವರು ಹೇಳಿದರು.
ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು, ನಮ್ಮ ನಮ್ಮ ನಡುವೆ ಇರುವ ಅಮಾನವೀಯ ಪದ್ಧತಿಗಳನ್ನು ದೂರ ತಳ್ಳಬೇಕೆಂದು ಕಿವಿಮಾತು ಹೇಳಿದರು. ಬಾಲ್ಯ ವಿವಾಹ – ದೇವದಾಸಿ ಪದ್ಧತಿ ಗಳಂತಹ ಅಮಾನವೀಯ ಪದ್ಧತಿಗಳಿಗೆ ಬಲಿಯಾಗದೆ ಮಹಿಳೆಯರು ಶಿಕ್ಷಣವಂತರಾಗಬೇಕೆಂದು ಸಲಹೆ ನೀಡಿದರು.
ಪ್ರಗತಿಪರ ಹೋರಾಟಗಾರರು ಹಾಗೂ ಬುದ್ಧವಿಹಾರ ನಿರ್ಮಾಣ ಟ್ರಸ್ಟ್ನ ಕಾರ್ಯದರ್ಶಿಗಳಾದ ಶ್ರೀ ಸೋಮಶೇಖರ್ ಬಣ್ಣದಮನೆ ಅವರು ಸ್ವಾಗತ ಕೋರಿ ನಿರೂಪಿಸಿದರು.
ಅನೇಕ ಸಂಘಟನೆಯ ಮುಖಂಡರು ಮಾತನಾಡಿದರು…

ವರದಿ. ಅಜಯ್, ಚ. ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
