;

ಸಿಂಧನೂರು :ಮಧುಮೇಹ ಹಾಗೂ ಕ್ಷಯರೋಗದ ಬಗ್ಗೆ ನಾವೆಲ್ಲ ವೈದ್ಯರ ಸಲಹೆ ಪಡೆಯುತ್ತಿರಬೇಕು- ಶರಣು.ಪಾ.ಹಿರೇಮಠ…!!!

ಸಿಂಧನೂರು :ಮಧುಮೇಹ ಹಾಗೂ ಕ್ಷಯರೋಗದ ಬಗ್ಗೆ ನಾವೆಲ್ಲ ವೈದ್ಯರ ಸಲಹೆ ಪಡೆಯುತ್ತಿರಬೇಕು- ಶರಣು.ಪಾ.ಹಿರೇಮಠ.

ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್( ರಿ) ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಜಿಲ್ಲಾ ಎನ್.ಸಿ.ಡಿ.ವಿಭಾಗ ಮತ್ತು ಕ್ಷಯರೋಗ ವಿಭಾಗ ಹಾಗೂ ತಾಲೂಕ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಸಿಂಧನೂರು. ಅಸಾಂಕ್ರಾಮಿಕ ರೋಗ ನಿಯಂತ್ರಣ ವಿಭಾಗ, ಸಾರ್ವಜನಿಕ ಆಸ್ಪತ್ರೆ ಸಿಂಧನೂರು, ಇವರುಗಳ ಸಂಯುಕ್ತಾಶ್ರಯದಲ್ಲಿ ಕಾರುಣ್ಯ ಆಶ್ರಮದಲ್ಲಿನ ವೃದ್ಧರು ಹಾಗೂ ವಯಸ್ಕರ ಬುದ್ಧಿಮಾಂದ್ಯರಿಗೆ ಮಧುಮೇಹ ತಪಾಸಣಾ ಕ್ಷಯ ರೋಗ ತಪಾಸಣಾ ಮಾಡಿ ಉಚಿತ ಔಷಧಿಗಳನ್ನು ವಿತರಿಸುವ ಮೂಲಕ “ವಿಶ್ವ ಮಧುಮೇಹ ದಿನಾಚರಣೆ” ಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಅಮರೇಶ ಕುಮಾರ ಜಿಲ್ಲಾಸಂಯೋಜಕರು ಟಿ. ಬಿ. ವಿಭಾಗ ರಾಯಚೂರು ಇವರುಗಳು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕಾರುಣ್ಯ ಆಶ್ರಮದ ಗೌರವಾಧ್ಯಕ್ಷರಾದ ಶರಣು.ಪಾ. ಹಿರೇಮಠ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವೀರೇಶ ಯಡಿಯೂರ ಮಠ ಕಾರ್ಯಾಧ್ಯಕ್ಷರು ಕಾರುಣ್ಯ ಆಶ್ರಮ, ಅವಿನಾಶ ದೇಶಪಾಂಡೆ ಕಾರ್ಯದರ್ಶಿಗಳು ಜೀವ ಸ್ಪಂದನ ಸೇವಾ ಸಂಸ್ಥೆ, ಅಶೋಕ ನಲ್ಲ ಕಾರ್ಯದರ್ಶಿಗಳು ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್,ಚನ್ನಬಸವಸ್ವಾಮಿ ಆಡಳಿತಾಧಿಕಾರಿಗಳು ಕಾರುಣ್ಯ ಆಶ್ರಮ, ಇವರುಗಳ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಸಂಗನಗೌಡ ಮಾ.ಪಾ. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಫಜವುಲ್ಲಾ ರಹಿಮಾನ್ ಹಣಗಿ ಮೇಲ್ವಿಚಾರಕರು ಮಲೇರಿಯಾ ವಿಭಾಗ,ಯಮನೂರ ಕ್ಷಯರೋಗದ ಮೇಲ್ವಿಚಾರಕರು,ಸುವರ್ಣ ಎನ್.ಸಿ.ಡಿ ಕೌನ್ಸಿಲರ್, ಹಮೀರ್ ಕ್ಷಯರೋಗದ ಮೇಲ್ವಿಚಾರಕರು, ರಾಮಾಂಜನೇಯ ಆರ್.ಕೆ.ಎಸ್.ಕೆ.ಕೌನ್ಸಿಲರ್, ನವೀನ್ ಕುಮಾರ್ ಟಿ.ಬಿ.ಎಚ್. ವಿ.ವಿಭಾಗ, ಮುತ್ತಮ್ಮ ಹಿರೇಮಠ ಡಿ.ಇ.ಒ, ಗಾಯತ್ರಿ ಹಿರೇಮಠ ಎನ್.ಸಿ.ಡಿ. ವಿಭಾಗ,ಸುಮಾ ಸುಶ್ರುಕೀಯರು,ಹಾಗೂ ಇನ್ನಿತರ ಸಿಬ್ಬಂದಿಗಳು ಮಧುಮೇಹ ಹಾಗೂ ಕ್ಷಯರೋಗ ತಪಾಸಣೆ ಮಾಡಿ ಔಷಧಿಗಳನ್ನು ವಿತರಿಸಿದರು.

ಈ ಕಾರ್ಯಕ್ರಮದಲ್ಲಿ ಮಧುಮೇಹ ಹಾಗೂ ಕ್ಷಯರೋಗದ ಬಗ್ಗೆ ನಾವೆಲ್ಲ ಎಚ್ಚೆತ್ತುಕೊಳ್ಳಬೇಕು ಈ ರೋಗಗಳ ಲಕ್ಷಣಗಳು ಹಸಿವು ಆಗದೆ ಇರುವುದು ಬಾಯಾರಿಕೆ ಯಾಗುವುದು ತೂಕ ಕಡಿಮೆಯಾಗುವುದು ಆಯಾಸ ಬರುವುದು ಇವುಗಳೆಲ್ಲ ಈ ರೋಗದ ಲಕ್ಷಣಗಳು. ನಾವೆಲ್ಲ ದಿನಾಲೂ ವ್ಯಾಯಾಮ ಮತ್ತು ದೇಹದ ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಕು. ಆಶ್ರಮದಲ್ಲಿನ ವೃದ್ಧರಲ್ಲಿ ಮಧುಮೇಹ ಹಾಗೂ ಕ್ಷಯ ರೋಗವನ್ನು ಪತ್ತೆ ಹಚ್ಚಿ ನಿತ್ಯ ಚಿಕಿತ್ಸೆ ಕೊಡುವ ಕಾರ್ಯ ನಿರಂತರವಾಗಿ ಮಾಡಲಾಗುವುದು. ಕೊರೋನ ಎನ್ನುವ ಸುಳಿಗೆ ಸಿಲುಕದೆ ಎಲ್ಲಾ ವೃದ್ಧ ಜೀವಿಗಳನ್ನು ಕಾಪಾಡಿದ ಆಡಳಿತ ಮಂಡಳಿಗೆ ಆರೋಗ್ಯ ಇಲಾಖೆಯಿಂದ ಧನ್ಯವಾದಗಳು ಎಂದು ಅಮರೇಶ ಕುಮಾರ ಮಾತನಾಡಿದರು.

ನಂತರ ಫಜವುಲ್ಲಾ ರಹಿಮಾನ್ ಹಣಗಿ ಸಮಾಜದಲ್ಲಿನ ನಾವೆಲ್ಲಾ ಅತಿವೇಗದ ಬೆಳವಣಿಗೆಯಲ್ಲಿ ತೊಡಗಿದ್ದೇವೆ ನಿಜ ಆದರೆ ಆರೋಗ್ಯದ ವಿಚಾರದಲ್ಲಿ ಹಿಂದುಳಿದಿದ್ದೇವೆ. ಆದುದರಿಂದ ತಾವುಗಳು ಎಲ್ಲಾ ಪ್ರತಿಯೊಬ್ಬರು ಅರ್ಥಮಾಡಿಕೊಂಡು ನಮ್ಮ ಇಲಾಖೆಗೆ ಸ್ಪಂದಿಸಿ ಮಧು ಮೇಹ ಹಾಗೂ ಕ್ಷಯರೋಗದ ತಪಾಸಣೆಯನ್ನು 30 ವರ್ಷದ ಮೇಲೆ ಇರುವ ಎಲ್ಲರೂ ತಪಾಸಣೆ ಮಾಡಿಸಿ ಕೊಳ್ಳಬೇಕು. ಇಂದು ಆಶ್ರಮದಲ್ಲಿ ಎಲ್ಲರಿಗೂ ತಪಾಸಣೆ ಮಾಡಿದ್ದೇವೆ ಅದೇ ರೀತಿ ಅವರಿಗೆ ಬೇಕಾಗುವ ಔಷಧಿಗಳನ್ನು ಸಹಿತ ವಿತರಿಸುತ್ತೇವೆ.ಈ ಕಾರ್ಯಕ್ರಮಕ್ಕೆ ಸ್ಪಂದಿಸಿದ ಈ ಟ್ರಸ್ಟ್ ಗೆ ನಮ್ಮ ಇಲಾಖೆಯ ವತಿಯಿಂದ ಕೃತಜ್ಞತೆಗಳು ಎಂದು ಭಾವುಕರಾಗಿ ಮಾತನಾಡಿದರು. ಆಶ್ರಮದ ಗೌರವಾಧ್ಯಕ್ಷರಾದ ಶರಣು. ಪಾ.ಹಿರೇಮಠ ಈಗಾಗಲೇ ಆರೋಗ್ಯ ಇಲಾಖೆ ನಮಗೆ ನೀಡಿರುವಂತಹ ಸಲಹೆ-ಸೂಚನೆಗಳನ್ನು ನಾವುಗಳೆಲ್ಲ ಪಾಲಿಸಬೇಕು ಮಧುಮೇಹ ಹಾಗೂ ಕ್ಷಯರೋಗದ ಬಗ್ಗೆ ಆಗಾಗ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಮಾತನಾಡಿ ಮಧುಮೇಹ ಹಾಗೂ ಕ್ಷಯರೋಗದ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿದರು..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;