ನಗರದ ಇತಿಹಾಸ ಪ್ರಸಿದ್ಧ ಬೃಹತ್ ಬೃಂದಾವನ.
ಶಿಡ್ಲಘಟ್ಟ ನವೆಂಬರ್ ೧೭
ನಗರದ ಇತಿಹಾಸ ಪ್ರಸಿದ್ಧ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯ ದಲ್ಲಿ ರುವ ೫ ಅಡಿ ಉದ್ದದ ವೃಂದಾವನ ಸುಮಾರು ೨೦೦ ವರ್ಷಗಳ ಹಿಂದೆ ಇಲ್ಲಿ ಪುರೋಹಿತ ರಾಗಿದ್ದ ಕಡ್ಡಿ ರಾಮಾಚಾರ್ಯರ ವಂಶೀಕರು ಸ್ಥಾಪಿಸಿದ ರೆಂದು ದೇವಾಲಯ ದಲ್ಲಿ ಸುಮಾರು ೭೫ ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಂಸ್ಕೃತ ಪಂಡಿತರಾಗಿದ್ದ ಯಗವಕೋಟೆ ನಾರಾಯಣ ಭಟ್ಟಾಚಾರ್ಯ ಅವರು ತಿಳಿಸಿದ್ದರು, ಬೃಂದಾವನ ಸ್ಥಾಪಿಸಿದ ಕಡ್ಡಿ ವಂಶೀಕರಾದ ರಾಮಾಚಾರ್ಯರು ದಂಪತಿಗಳು ತಿರುಪತಿ ತಿಮ್ಮಪ್ಪ ನ ದರ್ಶನಕ್ಕೆ ಹೋದವರು ಮರಳಿ ಬಾರದ ಕಾರಣ ನಾರಾಯಣ ಭಟ್ಟಾಚಾರ್ಯರಿಗೆ ವೇಣುಗೋಪಾಲ ಸ್ವಾಮಿ ದೇವಾಲಯದ ಪುರೋಹಿತ ರಾಗಿ ಕಾರ್ಯ ನಿರ್ವಹಿಸಿದರು ವಂಶಪಾರಂಪರ್ಯವಾಗಿ ದಿವಂಗತ ವರದರಾಜ ಭಟ್ಟಾಚಾರ್ಯರು ಹಾಲಿ ಕನ್ನಡ ಹಾಗೂ ಸಂಸ್ಕೃತ ಪಂಡಿತರಾದ ದಾಶರಥಿ ಭಟ್ಟಾಚಾರ್ಯ ಅವರು ಸೇವೆ ಸಲ್ಲಿಸುತ್ತಿದ್ದಾರೆ.
ಬೃಂದಾವನ ದ ಒಂದು ಭಾಗದಲ್ಲಿ ವೇಣುಗೋಪಾಲ ನ ವೇಣುನಾಧಕ್ಕೆ ಗೋವುಗಳು ಕೃಷ್ಣ ನ ಸುತ್ತಲೂ ಸಮ್ಮಿಲ ವಾಗುತ್ತಿರುವ ಸುಂದರವಾದ ಶಿಲ್ಪ ಸ್ಥಾಪಿಸಿದ್ದಾರೆ.ತಾಲೂಕಿನ ಸುತ್ತಲೂ ಎಲ್ಲೂ ಕಾಣದ ಕಲಾತ್ಮಕ ಬೃಂದಾವನ ನೋಡಲು ಸುಂದರವಾಗಿದೆ. ವೀಕ್ಷಿಸಲು ಮರೆಯದಿರಿ.ಸುಂದರ ವೇಣುಗೋಪಾಲ ನ ಕೆತ್ತನೆ ಅಪರೂಪ…

ವರದಿ. ಎಂ. ಕೆ. ಮೂರ್ತಿ, ಚಿಕ್ಕಬಳ್ಳಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
