;

ದಿನೇದಿನೇ ಹೆಚ್ಚಾಗುತ್ತಿದ್ದು ,ಆಡಳಿತ ನಡೆಸುವ ಸರಕಾರ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ…!!!

ಸಿಂಧನೂರು : ರಾಜ್ಯದಲ್ಲಿ ದಿನನಿತ್ಯ ದಲಿತರ ಮೇಲೆ ದೌರ್ಜನ್ಯ ಕೊಲೆ ಮಹಿಳೆಯರ ಮೇಲೆ ಅತ್ಯಾಚಾರ ದಿನೇದಿನೇ ಹೆಚ್ಚಾಗುತ್ತಿದ್ದು ,ಆಡಳಿತ ನಡೆಸುವ ಸರಕಾರ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ. ಪೋಲಿಸ್, ಸಮಾಜಕಲ್ಯಾಣ, ತಾಲೂಕು ಆಡಳಿತ ಕೂಡಾ ದೌರ್ಜನ್ಯಕ್ಕೊಳಗಾದ ಸಮಾಜದ ಪರವಾಗಿ ನಿಲ್ಲಾ ಬೇಕಾದವರೇ ಉಳ್ಳವರಿಗೆ ರಕ್ಷಣೆ ನೀಡುತ್ತಿದೆ.ಸುರಪುರ ತಾಲೂಕಿನ ಚೌಡೇಶ್ವರಿ ಹಳ್ಳಿಯ ಪಾಲಮ್ಮ ಘಟನೆ, ಕಾರಟಗಿ ತಾಲೂಕಿನ ಬರಗೂರು ಗ್ರಾಮದ ಅನ್ಯಕೋಮಿನ ಯುವತಿಯನ್ನು ಪ್ರೀತಿಸಿ ದಕ್ಕಾಗಿ ದಾನಪ್ಪ ಎನ್ನುವ ಯುವಕನ ಕೊಲೆ, ಸಿಂಧನೂರು ತಾಲೂಕಿನ ಕುನ್ನಟಗಿ ಗ್ರಾಮದಲ್ಲಿ ದಲಿತರ ಮೇಲೆ ಸೆಕ್ಷನ್ 307 ಕೇಸಿನ ಪ್ರತಿದೂರು ಮಾಡಿ ಜೈಲಿಗೆ ಕಳುಹಿಸಿದ ಪಿಎಸ್ಐ ಯನ್ನು ಅಮಾನತುಗೊಳಿಸಬೇಕು,ಸಮಾಜ ಕಲ್ಯಾಣ ಅಧಿಕಾರಿಗಳು ಕುನ್ನಟಗಿ ಗ್ರಾಮದ ದಲಿತರ ಮೇಲಿನ ಕೇಸನ್ನು ವಾಪಸು ಪಡೆಯಬೇಕು, ಎಂದು ಪ್ರತಿಭಟನೆ ಉದ್ದೇಶಿಸಿ ಗುಲ್ಬರ್ಗಾ ವಿಭಾಗೀಯ ಅಧ್ಯಕ್ಷ ಬಸವರಾಜ ಸಾಸಲಮರಿ ಮಾತನಾಡಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಾಸಾಹೇಬ್ ಡಾ. ಎನ್. ಮೂರ್ತಿ ಸ್ಥಾಪಿತ ) ಜಿಲ್ಲಾ ಸಮಿತಿ ರಾಯಚೂರು ವತಿಯಿಂದ ಇಂದು ಸಿಂಧನೂರಿನಲ್ಲಿ ದಲಿತರ ಮೇಲೆ ದೌರ್ಜನ್ಯ, ಕೊಲೆ,ಬಹಿಷ್ಕಾರ ಕಂಡಿಸಿ ನಗರದ ಬಾಬು ಜಗಜೀವನರಾವ್ ವ್ರತ್ತದಿಂದ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಜಾಗಟೆ ಬಡಿದು, ಕ್ರಾಂತಿಗೀತೆ ಹಾಡುತ್ತ ಮಿನಿ ವಿಧಾನಸೌಧದ ವರೆಗೆ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಯಿತು. ನಂತರ ತಹಸಿಲ್ದಾರ ಮುಖಾಂತರ ಮಾನ್ಯ ರಾಜ್ಯಪಾಲರಿಗೆ, ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಶೋಕ್ ನಂಜಲದಿನ್ನಿ ಮಾತನಾಡಿ ಸುರಪುರ ತಾಲೂಕಿನ ಪಾಲಮ್ಮಳ ಕೊಲೆ, ಬಿಜಾಪುರದಲ್ಲಿ ಮಗು ದೇವಸ್ಥಾನ ಪ್ರವೇಶ ಮಾಡಿದ್ದೆಂದು ದಂಡ ವಿದಿಸಿರುವುದು ದುರದೃಷ್ಟಕರ ಘಟನೆ, ಸ್ವತಂತ್ರ ಬಂದು 75 ವರ್ಷಗಳ ಗತಿಸಿದರು ಇನ್ನೂ ದಲಿತರ ಮೇಲಿನ ದೌರ್ಜನ್ಯ ಕೊಲೆ ಮಹಿಳೆಯರ ಮೇಲೆ ಅತ್ಯಾಚಾರ ಘಟನೆಗಳು ಮಿತಿಮೀರಿದೆ ಎಂದು ಮಾತನಾಡಿದರು.
ತಾಲೂಕಿನ ಎಲೆಕೂಡ್ಲಿಗಿ ದಲಿತರ 83 ಜನರ ಮೇಲೆ ಸುಳ್ಳು ಕೇಸು ಹಾಕಿರುವ ಕೇಸನ್ನು ವಜಾಗೊಳಿಸಬೇಕು, ದೌರ್ಜನ್ಯ ಮತ್ತು ಬಹಿಸ್ಕಾರ ಒಳಗಾದ ಎಲೆಕೂಡ್ಲಗಿ ಗ್ರಾಮವನ್ನು ಸಮಾಜ ಕಲ್ಯಾಣ ಇಲಾಖೆ ದತ್ತು ತೆಗೆದುಕೊಂಡು ದಲಿತರ ಕೇರಿಯನ್ನು ಯೋಗ್ಯ ಗುಣಮಟ್ಟದ ಮನೆಗಳನ್ನು ನಿರ್ಮಿಸಿಕೊಡಬೇಕು, ಎರಡು ಕೊಳವೆಬಾವಿ ,ಅಂಗನವಾಡಿ, ಸಮುದಾಯಭವನ, ಶಾಲೆ, ಹಾಲಿನ ಡೈರಿ,ಮಂಜೂರು ಮಾಡಿ ಕುರಿ, ಕೋಳಿ ಸಾಕಾಣಿಕೆ ಸಾಲ ನೀಡಿ ಸಮಾಜ ಕಲ್ಯಾಣ ಇಲಾಖೆಯ ದಲಿತರಿಗೆ ಸ್ವಯಂ ಉದ್ಯೋಗ ಹಾಗೂ ನಾಗರಿಕ ಸೌಲಭ್ಯ ಕಲ್ಪಿಸಿಕೊಡಬೇಕು, ಎಲೆಕೂಡ್ಲಿಗಿ ಸುಮಾರು 45 ವರ್ಷದಿಂದ ಸರ್ಕಾರಿ ಜಮೀನನ್ನು ಸಾಗುವಳಿ ಮಾಡುತ್ತಿದ್ದೆ ಜಮೀನಿನ ಹಕ್ಕುಪತ್ರ ನೀಡಬೇಕು ಎಂದು ಇನ್ನೂ ಅನೇಕ ಹಕ್ಕೊತ್ತಾಯಗಳನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಯರಾಜ್ ಟೈಗರ್ ಕಾರ್ಯಧ್ಯಕ್ಷರು, ರಂಗಪ್ಪ ಕೋತಿಗುಡ್ಡ ಜಿಲ್ಲಾ ಉಪಾಧ್ಯಕ್ಷರು, ಬಸವರಾಜ್ ನಾಡಂಗ ಉಪಾಧ್ಯಕ್ಷರು, ಚಿನ್ನಪ್ಪ ಹಂಪನಾಳ ವಿಕಲಚೇತನರ ಜಿಲ್ಲಾಧ್ಯಕ್ಷರು, ರಾಜು ಬೊಮ್ಮನಾಳ ಪ್ರಧಾನ ಕಾರ್ಯದರ್ಶಿ,ಮೂಕಪ್ಪ ಯತ್ಗಲ್ ವಿಭಾಗೀಯ ಕಾರ್ಯದರ್ಶಿ, ನಿರುಪಾದಿ ಎಲೆಕೂಡ್ಲಿಗಿ ಜಿಲ್ಲಾ ಕಾರ್ಯದರ್ಶಿ, ಮುಕೇಶ್ ತಿಮ್ಮಾಪುರ್ ತಾಲೂಕ ಅಧ್ಯಕ್ಷರು ರಾಯಚೂರು, ಹುಸೇನಪ್ಪ ಶ್ರೀಪುರಂ ಜಂಕ್ಷನ್ ತಾಲೂಕ ಅಧ್ಯಕ್ಷರು ಸಿಂಧನೂರ್, ಮೌನೇಶ್ ಗಾಣದಾಳ ತಾಲೂಕ ಅಧ್ಯಕ್ಷರು ದೇವದುರ್ಗ ,ಮನೋಹರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಬಸವರಾಜ್ ಕುಣಿಕೆಲ್ಲೂರ್ ತಾಲೂಕ ಅಧ್ಯಕ್ಷರು ಲಿಂಗಸೂರ್, ಅಂಬಣ್ಣ ಬೆನಕನಾಳ, ಹುಲಗಪ್ಪ, ಎಲ್ಲಪ್ಪ ಕುಣಿಕೆಲ್ಲೂರ್, ಜಮದಗ್ನಿ ಗೋನಾಳ್ ಕಾರ್ಯಧ್ಯಕ್ಷರು ಮಸ್ಕಿ, ಅಂಬರೀಷ್ ಗುಡಿಹಾಳ ಗೌರವಧ್ಯಕ್ಷರು ಮಸ್ಕಿ, ರಮೇಶ್ ನೀರ್ ಮಾನ್ವಿ ತಾಲೂಕ ಅಧ್ಯಕ್ಷರು, ಹುಲಗಪ್ಪ ಸೈದಾಪುರ್, ನಾಗರಾಜ್ ಸಾಸಲಮರಿ, ಹನುಮೇಶ್ ಪೋತ್ನಾಳ, ಛತ್ರಪ್ಪ ವಿರುಪಾಪುರ, ಸಣ್ಣ ನಿರುಪಾದೆಪ್ಪ ಎಲೆಕೂಡ್ಲಿಗಿ, ಇನ್ನೂ ಅನೇಕ ಮುಖಂಡರು ಮಹಿಳೆಯರು ಭಾಗವಹಿಸಿದ್ದರು….

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;