;

ಸುಕಾಲಪೇಟೆಯಲ್ಲಿ ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು…!!!

ಸಿಂಧನೂರು :ಜೈ ಭೀಮ ಘರ್ಜನೆ ಸಂಘಟನೆ ವತಿಯಿಂದ ಇಂದು ಡಾ. ಬಿ.ಆರ್. ಅಂಬೇಡ್ಕರ್ ನಗರ ಸುಕಾಲಪೇಟೆಯಲ್ಲಿ ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು.
ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಮಣ್ಣ ಗೋನವಾರ ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷರು ವೀರವನಿತೆ ಒನಕೆ ಓಬವ್ವ ತನ್ನ ಪ್ರಾಣವನ್ನು ಲೆಕ್ಕಿಸದೆ ಶತ್ರುಗಳನ್ನು ಒನಕೆಯಿಂದ ರಾಶಿ ರಾಶಿ ಬ್ರಿಟಿಷರ ಸೈನ್ಯವನ್ನು ಸದೆಬಡೆದು ಹೋರಾಡಿದಳು ಎಂದರು.
ಪೂಜಾ ಕಟ್ಟಿಮನಿ ಮುಖ್ಯ ಭಾಷಣಕಾರರಾಗಿ ಮಾತನಾಡಿ
ಒನಕೆ ಓಬವ್ವನ ಜೀವನ ಚರಿತ್ರೆ ಅವರ ನಡೆದು ಬಂದ ಹಾದಿ ಬಗ್ಗೆ ವಿವರವಾಗಿ ಹೇಳಿದರು.

ಹನುಮಂತಪ್ಪ ಬೂದಿಹಾಳ ವಕೀಲರು ಮಾತನಾಡಿ ಒನಕೆ ಓಬವ್ವ 18ನೇ ಶತಮಾನದಲ್ಲಿ ರಾಣಿ ಅಬ್ಬಕ್ಕ ,ಕಿತ್ತೂರಾಣಿ ಚೆನ್ನಮ್ಮ, ಸಾಲಿನಲ್ಲಿ ಒನಕೆ ಓಬವ್ವ ಚಿತ್ರದುರ್ಗ ಕೋಟೆ ಒಳಗೆ ಹೈದರಾಲಿ ಸೈನ್ಯ ಕಿಂಡಿಯಿಂದ ಒಳ ನುಗ್ಗು ತಿರುವಾಗ ಶತ್ರುಗಳನ್ನು ಒನಕೆಯಿಂದ ಹೊಡೆದು ಕೊಂದಳು.ಇಂತಹ ವೀರವನಿತೆಯರು ಸಮಾಜದಲ್ಲಿ ಹುಟ್ಟಲಿ ಎಂದರು.

ನಂತರ ಮಾತನಾಡಿದ ಹನುಮಂತ ಕರ್ನೆ ವೀರವನಿತೆ ಓಬವ್ವ ಜಯಂತಿಯನ್ನು ಸರ್ಕಾರ ಮಟ್ಟದಲ್ಲಿ ಆಚರಣೆಗೆ ಅವಕಾಶ ಕೊಟ್ಟಿರುವುದು ಸ್ವಾಗತಾರ್ಹ. ಚಿತ್ರದುರ್ಗದ ಕೊಟೆಯ ಓಬವ್ವ ವೀರಮರಣ ಹೊಂದಿರುವ ಸ್ಥಳವನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ನಿರುಪಾದಿ ಸಾಸಲಮರಿ ಜೈ ಭೀಮ ಘರ್ಜನೆ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರು,
ಅಯ್ಯಪ್ಪ ವಕೀಲರು ಮಲ್ಲಾಪೂರು, ಶರಣಬಸವ ಮಲ್ಲಾಪುರು ಚಲವಾದಿ ಮಹಾಸಭಾ ಪ್ರಧಾನ ಕಾರ್ಯದರ್ಶಿ,
ನಾಗಲಿಂಗ ಜವಳಗೇರಾ, ಪಂಪಾಪತಿ ಬೂದಿವಾಳ, ನಿರುಪಾದಿ ನಾಗಲಾಪುರ ನಗರಸಭೆ ಸದಸ್ಯರು, ಮೌಲಪ್ಪಕಟ್ಟಿಮನಿ, ನರಸಪ್ಪ ಕಟ್ಟೆಮನೆ, ಮುದುಕಪ್ಪ ಮಲ್ಲಾಪುರು,ವಿರುಪಣ್ಣ ಬೂದಿಹಾಳ್,ಮುಂತಾದವರು ಭಾಗವಹಿಸಿದ್ದರು.ಪೂಜಾ ಕಟ್ಟಿಮನಿ ಮುಖ್ಯ ಭಾಷಣಕಾರರಿಗೆ ಬೀಮ್ ಘರ್ಜನೆ ಸಂಘಟನೆಯಿಂದ ಬಾಬಾ ಸಾಹೇಬ್ ರ ಭಾವಚಿತ್ರ ನೀಡಿ ಸನ್ಮಾನಿಸಲಾಯಿತು.
ವಂದನಾರ್ಪಣೆಯನ್ನು ಶರಣಬಸವ ಕಟ್ಟಿಮನಿ ನೆರವೇರಿಸಿಕೊಟ್ಟರು….

 

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;