ಮಂಗಳೂರಿನಲ್ಲಿ ಇಂದು ಅದ್ದೂರಿ ‘ಸಂವಿಧಾನ ದೀಕ್ಷೆ’ ಕಾರ್ಯಕ್ರಮ
ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ‘ಸಂವಿಧಾನ ದೀಕ್ಷೆ’(Samvidhan Deeksha) ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.’
ಅಕ್ಟೋಬರ್ 25(ಸೋಮವಾರ)ರ ಸಂಜೆ 4 ಗಂಟೆಗೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಎಸ್ ಡಿಪಿಐ(SDPI) ಮುಖಂಡರು ತಿಳಿಸಿದ್ದಾರೆ.
ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಸಂವಿಧಾನ ದೀಕ್ಷೆ ನೀಡಲಿದ್ದಾರೆ. ಈ ಸಂದರ್ಭ ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ, ದಲಿತ ಹೋರಾಟಗಾರ ಭಾಸ್ಕರ್ ಪ್ರಸಾದ್ ಅವರು ಮುಖ್ಯ ಭಾಷಣ ಮಾಡಲಿದ್ದಾರೆ.
ಮಂಗಳೂರಿನಲ್ಲಿ ಬಜರಂಗದಳ, ಬಿಜೆಪಿ ಪರಿವಾರ ‘ತ್ರಿಶೂಲ ದೀಕ್ಷೆ’ ನೀಡಿ ನೀಡಿದ ವಿಚಾರ ತೀವ್ರವಾಗಿ ಚರ್ಚೆಗೀಡಾಗಿತ್ತು. ಇದೇ ಸಂದರ್ಭದಲ್ಲಿ ಎಸ್ ಡಿಪಿಐ ಸಂವಿಧಾನ ದೀಕ್ಷೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ…

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
