*ಅಂಜನಾದ್ರಿಗೆ ಭಕ್ತರ ಪಾದಯಾತ್ರೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗಡಿಗ್ರಾಮ ಚಿನ್ನಮನಹಳ್ಳಿ ಗ್ರಾಮದ ನಾಲ್ವರು,ಕಳೆದ ಎರೆಡು ದಿನಗಳಿಂದ ಹಂಪಿ ಹಾಗೂ ಗಂಗಾವತಿ ತಾಲೂಕು ಶ್ರೀ ಅಂಜನಾದ್ರಿ ಬೆಟ್ಟಕ್ಕೆ ಪಾದಯಾತ್ರೆ ಬೆಳೆಸಿದ್ದಾರೆ.ಕಳೆದ ಎರೆಡು ದಿನದಲ್ಲಿ ಸುಮಾರು ಅರವತ್ತೈದು ಕಿಲೋಮೀಟರ್ ಕ್ರಮಿಸಿದ್ದು,ಇನ್ನೂ ಎಪ್ಪತ್ತು ಕಿಮೀ ದೂರದ ಆಂಜನಾದ್ರಿ ಬೆಟ್ಟವನ್ನು ಎರೆಡು ದಿನದಲ್ಲಿ ತಲುಪುವುದಾಗಿ ಅವರು ತಿಳಿಸಿದ್ದಾರೆ. ಮಂಜುನಾಥ,ಈಶ್ವರಪ್ಪ,ರವಿ,ಬೋರಯ್ಯ ರವರು ನಾಲ್ವರು ಒಂದೇ ಗ್ರಾಮದವರಾಗಿದ್ದಾರೆ.ಕಳೆದೆರೆಡು ದಿನಗಳಲ್ಲಿ ಸುಮಾರು ಎಪ್ಪತ್ತಕ್ಕೂ ಹೆಚ್ಚು ಕೀಲೋ ಮೀಟರ್ ನಡೆದಿದ್ದು, ದಿನ ಒಂದಕ್ಕೆ ಸುಮಾರು ಮುವತ್ತಕ್ಕೂ ಹೆಚ್ಚು ಕಿಮೀ ನಷ್ಟು ದೂರ ನಡೆದಿದ್ದಾರೆ.ದೇವರ ದಯೆಯಿಂದ ತಮಗೆ ಯಾವುದೇ ತೊಂದರೆ ತೊಡಕು ಉಂಟಾಗಿಲ್ಲ, ಯಾವುದೇ ಧಣಿವು ಆಯಾಸ ತಮಗೆ ಅನಿಸಿಲ್ಲ ಎಲ್ಲಾ ದೇವರ ಆಶೀರ್ವಾದ.ಹಲವು ಭಕ್ತರು ಪಂಡರಾಪುರ ಹಾಗೂ ನೂರಾರು ಕಿಮೀ ದೂರದ ಶಬರಿಮಲೆಗೂ ಪಾದಾಯಾತ್ರೆ ತೆರಳುತ್ತಾರೆ,ನಾಡಿನ ಮೂಲೆ ಮೂಲೆಯಿಂದ ನೂರಾರು ಭಕ್ತರು ನೂರಾರು ಕಿಲೋ ಮೀಟರ್ ದೂರದಿಂದ ಅಂಜನಾದ್ರಿಗೆ ಬರುತ್ತಾರೆ.ನಾವೋ ಹತ್ತಿರದವರು ಪಾದಯಾತ್ರೆ ಮಾಡೋದು ಸಾಹಸವೇನಲ್ಲ ಎನ್ನುತ್ತಾರೆ ಪಾದಯಾತ್ರಿ ಮಂಜುನಾಥ. ಬೆಳ್ಳಂಬೆಳಗ್ಗೆ ಪ್ರಾರಂಭವಾಗೋ ಪಾದಯಾತ್ರೆ ಕತ್ತಲಾಗೋವರೆಗೂ ನಿಲ್ಲೋದಿಲ್ಲ,ತೀರಾ ಆಯಾಸವಾದಾಗ ಮಾತ್ರ ಕೆಲ ಹೊತ್ತು ನೆರಳಲ್ಲಿ ವಿಶ್ರಾಂತಿ ಅಷ್ಟೇ,ಯಾವುದೇ ಬೇಯಿಸಿದ ಆಹಾರವನ್ನು ಸೇವಿಸುವುದಿಲ್ಲವಂತೆ ಕೇವಲ ಹಣ್ಣು ಹಂಪಲು ಮತ್ತು ಎಳನೀರು ಸೇವನೆ ಮಾಡುತ್ತಾರಂತೆ.ಶ್ರಿಕ್ಷೇತ್ರ ಕೊಟ್ಟೂರು ಶ್ರೀಕೊಟೂರೇಶ್ವರ ಹಾಗೂ ಶ್ರೀಕ್ಷೇತ್ರ ಗಾಣಗಟ್ಟೆ ಶ್ರೀಮಾಯಮ್ಮ ದೇವಿ,ಶ್ರೀಕ್ಷೇತ್ರ ಶ್ರೀಉಜ್ಜಿನಿಮರುಳಸಿದ್ದೇಶ್ವರ ಸ್ವಾಮಿ,ಶ್ರೀಕ್ಷೇತ್ರ ಬೊಮ್ಮಗಟ್ಟ ಶ್ರೀಹುಲಿಕುಂಟೇಶ್ವರ ಸ್ವಾಮಿ ದರ್ಶನಕ್ಕೆ. ನೂರಾರು ಕಿಲೋಮೀಟೆರ್ ದೂರದಿಂದ ಭಕ್ತರು ಪಾದಯಾತ್ರೆ ಮಾಡುತ್ತಾರೆ. ಅಂತೆಯೇ ತಾವೂ ಕೂಡ ಶ್ರೀಕ್ಷೇತ್ರ ಶ್ರೀಅಂಜನಾದ್ರಿ ಬೆಟ್ಟದ ಶ್ರೀಆಂಜನೇಯನ ದರ್ಶನಕ್ಕಾಗಿ ತೆರಳಿದ್ದು,ತಮ್ಮ ಸಂಕಷ್ಟಗಳ ಪರಿಹಾರ ಹಾಗೂ ಲೋಕಕ್ಕೆ ಕಂಟಕಪ್ರಾಯವಾಗಿರುವ ಕೊರೋನಾ ಮಹಾಮಾರಿಯನ್ನು ಖಾಯಂ ಆಗಿ ಹೊಡೆದೋಡಿಸುವಂತೆ ಬೇಡಿಕೊಂಡಿದ್ದು,ಇರವಿ ತೊಂಬತ್ತು ಕೋಟಿ ಸಕಲ ಜೀವರಾಶಿಗಳಿಗೆ ಲೇಸನ್ನುಂಟು ಮಾಡೆಂದು ಆಂಜನೇಯನಲ್ಲಿ ಕೋರಲಿದ್ದು. ಕಾಲ ಕಾಲಕ್ಕೆ ಮಳೆ ಬೆಳೆ ನೀಡಿ ಜಗತ್ತಿಗೆ ಸಕಲ ಸಂಮೃದ್ಧಿಯನ್ನ ನೀಡೆಂದು ಶ್ರೀಅಂಜನಾದ್ರಿ ಸ್ವಾಮಿಯಲ್ಲಿ ತಾವು ಬೇಡಲಿದ್ದು.ಅದಕ್ಕಾಗಿ ತಮ್ಮೂರಿಂದ ಪಾದಯಾತ್ರೆ ತೆರಳಿರುವುದಾಗಿ ಪಾದಯಾತ್ರಿಗಳು ತಿಳಿಸಿದ್ದಾರೆ. ಪಾದಯಾತ್ರಿಗಳನ್ನು ಕೂಡ್ಲಿಗಿ ತಾಲೂಕು ಕೈವಲ್ಯಾಪುರ ಗ್ರಾಮದ ಹೊರವಲಯದಲ್ಲಿ,ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಗ್ರಾಮದ ಮುಖಂಡರಾದ ಉಪ್ಪಾರ ಕೃಷ್ಣಪ್ಪ,ರೈತ ಸಂಘದ ನಾಗರಾಜ ಹಾಗೂ ಹೋಟೆಲ್ ಮುರುಗೇಶಪ್ಪ ಹಾಗೂ ಗ್ರಾಮಸ್ಥರು ಪಾದಯಾತ್ರಿಗಳನ್ನು ಬೆಟ್ಟಿಯಾಗಿ ಯೋಗಕ್ಷೇಮ ವಿಚಾರಿಸಿ ಅವರಿಗೆ ಶುಭಕೋರಿದರು…

ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
