ಕಾನಮಡುಗು ದಾಸೋಹ ಮಠಕ್ಕೆ ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಭೇಟಿ
ವಿಜಯ ನಗರ ಜಿಲ್ಲೇ ಕೂಡ್ಲಿಗಿ ತಾಲೂಕಿನ ಕಾನಮಡುಗು ಶ್ರೀ ಶರಣ ಬಸವೇಶ್ವರ ದಾಸೋಹ ಮಠಕ್ಕೆ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಶನಿವಾರ ಭೇಟಿ ನೀಡಿ ಶ್ರೀ ಶರಣ ಬಸವೇಶ್ವರ ಸ್ವಾಮಿಯ ದರ್ಶನ ಪಡೆದರು.
ನಂತರ, ಶ್ರೀ ಶರಣ ಬಸವೇಶ್ವರ ದಾಸೋಹ ಮಠದ ಧರ್ಮಾಧಿಕಾರಿಗಳಾದ ಶ್ರೀ ದಾ.ಮ.ಐಮಡಿ ಶರಣಾರ್ಯರ ಆಶೀರ್ವಾದ ಪಡೆದರು.
ನಂತರ ರವಿ ಡಿ ಚನ್ನಣ್ಣನವರ್, ಮಾತನಾಡಿ ಕಾನಮಡುಗು ದಾಸೋಹ ಮಠವು ಅನೇಕ ವಿದ್ಯಾರ್ಥಿಗಳಿಗೆ ಅಕ್ಷರ .ಅನ್ನ ಆಶ್ರಯ ನೀಡಿದೆ. ಶ್ರೀ ಮಠದ ಆಶ್ರಯದಿಂದ ಸಾವಿರಾರರು ಜನರ ಜೀವನಕ್ಕೆ ದಾರಿದೀಪವಾಗಿದೆ.ಎಂದರು
ಈ ಸಂದರ್ಭದಲ್ಲಿ ಕಾನಮಡುಗು ಶ್ರೀ ಶರಣಬಸವೇಶ್ವರ ದಾಸೋಹ ಮಠದ ಧರ್ಮಾಧಿಕಾರಿಗಳಾದ ಶ್ರೀ ದಾ.ಮ. ಐಮಡಿ ಶರಣಾರ್ಯರು, ಸುರೇಖಾ ಶರಣಾರ್ಯರು, ಉಮಾಪತಿ ಶರಣಾರ್ಯ, ಪತ್ರಕರ್ತ ದಯಾನಂದ ಸಜ್ಜನ್, ಬಸವನಗೌಡ, ಬಸವರಾಜ್, ಪಾಟೀಲ್ .ತಿಪ್ಪೇರುದ್ರಯ್ಯ,ಶರಣೇಶ್ ಸೇರಿದಂತೆ ಶ್ರೀ ಮಠದ ಸದ್ಭಕ್ತರು, ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು…

ವರದಿ. ವೀರೇಶ್, ಕೆ, ಎಸ್, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
