;

ಜಾತಿಗಣತಿ ವರದಿಯಿಂದ ಸಮಸಮಾಜ ಕನಸು ನನಸು: ಎಚ್. ಕಾಂತರಾಜ್.!

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರದಲ್ಲಿ ಮಾಡಿಸಿರುವ ಜಾತಿ ಮತ್ತು ಸಾಮಾಜಿಕ ಗಣತಿ ವರದಿಯಿಂದ ಸಮಾಜದ ಎಲ್ಲಾ ಜಾತಿಗಳ ಶೋಷಿತರಿಗೆ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಾಗಲಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಎಚ್. ಕಾಂತರಾಜ್ ಹೇಳಿದರು. ವರದಿಯಲ್ಲಿ ಪ್ರತಿಯೊಂದು ಜಾತಿಯ ಸ್ಥಿತಿಗತಿ, ವೃತ್ತಿ, ಪ್ರವೃತ್ತಿ, ಆರ್ಥಿಕ, ಶೈಕ್ಷಣಿಕ ಮಟ್ಟವನ್ನು ದಾಖಲಿಸಲಾಗಿದೆ. ಸುಮಾರು 1.60 ಲಕ್ಷ ಶಿಕ್ಷಕರು ಈ ಕಾರ್ಯ ಮಾಡಿದ್ದು, ಜನರ ಸಮ್ಮತಿ ಪಡೆದು ಅಂತಿಮವಾಗಿ ಅಂಶಗಳನ್ನು ದಾಖಲಿಸಲಾಗಿದೆ.

10 ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ಜತೆಯಲ್ಲಿ ಅವರ ಸ್ಥಿತಿಗಳನ್ನು ದಾಖಲಿಸಲಾಗಿದೆ ಎಂದು ಹೇಳಿದರು. ನನ್ನ ಅವಧಿ ಮುಕ್ತಾಯವಾದಾಗ ಜಾತಿ ಗಣತಿ ವರದಿಯನ್ನು ಆಯೋಗದ ಸದಸ್ಯ ಕಾರ್ಯದರ್ಶಿ ಅವರಿಗೆ ಒಪ್ಪಿಸಲಾಗಿತ್ತು. ಇಷ್ಟು ಮಾತ್ರ ಆಯೋಗದ ಕೆಲಸ. ಸದಸ್ಯ ಕಾರ್ಯದರ್ಶಿ ಸರ್ಕಾರದ ವ್ಯಕ್ತಿಯಾಗಿರುತ್ತಾರೆ. ವರದಿ ಯಾವ ಸರ್ಕಾರ ಮಾಡಿಸಿತು, ಯಾವ ಸರ್ಕಾರ ಜಾರಿ ಮಾಡಿತು ಎನ್ನುವುದಕ್ಕಿಂತ ಮುಖ್ಯ ವರದಿಯಲ್ಲಿ ಯಾವ ಅಂಶಗಳಿವೆ, ಇದರಿಂದ ಸಮಾಜಕ್ಕೆ ಅನುಕೂಲವಾಗುತ್ತದೆಯೋ ಇಲ್ಲವೋ ಎಂಬುದನ್ನು ಮಾತ್ರ ಪರಿಗಣಿಸಬೇಕು’ ಎಂದು ಕಾಂತರಾಜ್ ತಿಳಿಸಿದರು…

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;