ಸಿಂಧನೂರು : 500 ಗಿಡ ಕಡಿದಿದ್ದಕ್ಕೆ 1000ಗಿಡ ನೆಡಲು ಶಿಕ್ಷೆಕೊಡಿ ಅಮರೇಗೌಡ ಮಲ್ಲಾಪೂರು.
ತಾಲೂಕಿನ ಪೂಜ್ಯಶ್ರೀ ಶರಣಬಸವ ತಾತನವರ ಶಾಲೆ ಹಾಗೂ ಪ್ರೌಢಶಾಲೆ ಗುಂಜಳ್ಳಿ ಕ್ಯಾಂಪ್ ಶಾಲೆಯ ಆವರಣದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ನರೇಗಾ ಯೋಜನೆಯಲ್ಲಿ 2019-20ರ ಅಡಿಯಲ್ಲಿ ಹಚ್ಚಿದ 500 ನೂರು ಮರಗಳು ಕಡಿದು ಹಾಕಿದ್ದು 500 ಮರಗಳ ಕಡಿದು ಹಾಕಿದ ಶಾಲೆಯ ಆಡಳಿತ ಅವರಿಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಎಂದು ಸಾಮಾಜಿಕ ಅರಣ್ಯ ವಲಯ ಅಧಿಕಾರಿಗಳಿಗೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ವನಸಿರಿ ತಂಡ ಈಗಾಗಲೇ ಸುಮಾರು 6-7ವರ್ಷಗಳಿಂದ ಹಸಿರು ಶಾಲೆ ಮಾಡಬೇಕು ಎಂದು ಪ್ರತಿ ಒಂದು ಶಾಲೆಗಳಲ್ಲಿ ಗಿಡಗಳು ಹಚ್ಚಿ ಪೋಷಣೆ ಮಾಡುತ್ತಿದ್ದೆವೆ.ಪರಿಸರ ಉಳಿವಿಗಾಗಿ ಸ್ವತಃ ನಾವೇ ಗಿಡಗಳನ್ನು ಬೆಳೆಸಲು ನರ್ಸರಿ ಮಾಡಿದ್ದೇವೆ. ಕಲ್ಯಾಣ ಕರ್ನಾಟಕ ಹಸಿರುಮಯ ಮಾಡಲು ಪಣತೊಟ್ಟಿದ್ದೇವೆ. ಆದರೆ ಈ ಒಂದು ಘಟನೆ ಯಿಂದ ನಮಗೆ ತುಂಬಾ ನೋವುಂಟಾಗಿದೆ. ನಮಗೆ ಒಂದು ಗಿಡ ಬೆಳೆಸುವ ಯೋಗ್ಯತೆ ಇಲ್ಲದಿರುವಾಗ, ಕಡಿಯುವ ಹಕ್ಕು ನಮಗೆಲ್ಲಿದೆ. 500 ಗಿಡಗಳು ಕಡಿದು ಹಾಕಿದ್ದು ಎಷ್ಟರಮಟ್ಟಿಗೆ ಸರಿ ? ಆದಷ್ಟು ಬೇಗಾ ಕಡಿದ ಹಾಕಿದವರ ವಿರುದ್ದ ಸೂಕ್ತ ದಂಡ ಹಾಕಬೇಕು. ಇಲ್ಲದಿದ್ದರೆ ನಾಳೆ ಇನ್ನೋಬ್ಬರು ಮಾಡುತ್ತಾರೆ. ಇದರ ಜೊತೆಗೆ 1 ಗಿಡಕ್ಕೆ 2 ಗಿಡಗಳನ್ನು ಹಚ್ಚುವ ಕಾಯಕ ಆಡಳಿತ ಮಂಡಳಿ ವತಿಯಿಂದ ಆಗಬೇಕು .ಒಂದು ವೇಳೆ ಕ್ರಮ ತೆಗೆದುಕೊಳ್ಳದೆ ಹೋದರೆ ತಮ್ಮ ಕಾರ್ಯಾಲಯ ಮುಂದೆ ಉಗ್ರ ಹೋರಾಟ ಮಾಡಲಾಗುವದು ಎಂದು ಅಮರೇಗೌಡ ಮಲ್ಲಾಪೂರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಗೌರವ ಅಧ್ಯಕ್ಷ ಶಂಕರಗೌಡ ಎಲೆಕೂಡ್ಲಿಗಿ, ಕೆ. ಮಾಂತೇಶ ರೌಡಕುಂದ, ರಮೇಶ್ ಕುನ್ನಟಗಿ, ಪ್ರದೀಪ್ ಪೂಜಾರಿ, ದುರ್ಗೇಶ್ dsp,ಮುತ್ತು ಪಾಟೀಲ್ ಭೂತಲದಿನ್ನಿ, ಹನುಮನಗೌಡ ಮಾಟೂರು, ಮುದಿಯಪ್ಪ ಮನವಿ ಪತ್ರ ಸಲ್ಲಿಸಿದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
