ದಿನದ 24 ಘಂಟೆ ಹೊರ ರೋಗಿ ಘಟಕ ಬಂದ್ ನಾಯಿ ಹಂದಿಗಳ ಅಡ್ಡೆಯಾಗಿ ಬದಲಾದ ನಮ್ಮ ದೇವದುರ್ಗದ ತಾಲೂಕು ಸರ್ಕಾರಿ ಆಸ್ಪತ್ರೆ
ಫೋಟೋಗಳನ್ನ ಒಮ್ಮೆ ನೋಡಿದ್ರೆ ಯಾವ್ದೋ ಸಾರ್ವಜನಿಕ ಶೌಚಾಲಯ ಅನ್ನಿಸುತ್ತೆ ಅಲ್ವಾ ವೀಡಿಯೋ ನೋಡಿದ್ರೆ ಯಾವ್ದೋ ಹಾಳು ಬಿದ್ದಿರೋ ಬಂಗಲೆ ಅನ್ಸುತ್ತೆ ಆದ್ರೆ ನಿಮ್ಮ ಊಹೆ ಖಂಡಿತ ತಪ್ಪು ನೀವು ನೋಡಿದ ವಿಡಿಯೋ ಹಾಗೂ ಫೋಟೋಗಳು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಪರಿಸ್ಥಿತಿ ಹೌದು ಹಾಡು ಹಗಲೇ ಈ ಆಸ್ಪತ್ರೆ ಸುತ್ತ ಹಂದಿ ನಾಯಿಗಳದೆ ಕಾರು ಬಾರು ಏನೇ ತುರ್ತು ಪರಿಸ್ಥಿತಿ ಎಂದು ಚಿಕಿತ್ಸೆಗೆ ಈ ಆಸ್ಪತ್ರೆಗೆ ಭೇಟಿ ನೀಡಿದ್ರೆ ಹಾಡು ಹಗಲೇ OPD ಬಂದ್ ಆಗಿದೆ ನಾಳೆ ಬನ್ನಿ ಅನ್ನೋ ಉತ್ತರ ಅದು ಅಲ್ಲಿ ದಿನಕ್ಕೆ ಹತ್ತಾರು ಗರ್ಭಿಣಿಯರು ಹೆರಿಗೆಗೆ ಅಂತ ಬಂದ್ರೆ ಹೆರಿಗೆ ಮಾಡೋದು ಒಬ್ಬರಿಗೆ ಅಥವಾ ಇಬ್ಬರಿಗೆ ಮಾತ್ರ ಏನೇ ಮಿಕ್ಕಿದ ಗರ್ಭಿಣಿಯರಿಗೆ ಹೇಳೋ ಉತ್ತರ ಒಂದೇ ನುರಿತ ವೈದ್ಯರಿಲ್ಲ ಸರಿಯಾದ ಸೌಲಭ್ಯ ಇಲ್ಲ ನಿಮಗೆ ಸಿಜೆರಿಯನ್ ಮಾಡಬೇಕು ರಾಯಚೂರು ಹೋಗಿ ಇಲ್ಲ ಬೇರೆ ಕಡೆ ಹೋಗಿ ದಿನ ನಿತ್ಯ ನೂರಾರು ಬಡ ರೋಗಿಗಳು ಬಂದು ಬೇರೆ ಕಡೆ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಪಡೆದು ಹೋಗ್ತಾ ಇದ್ದು ಸರ್ಕಾರಿ ಆಸ್ಪತ್ರೆಗೆ ಹಿಡಿ ಶಾಪ ಹಾಕ್ತಾ ಇದ್ದಾರೆ ಇಲ್ಲಿ ವೈದ್ಯರ ಕೊರತೆಯೋ ಸರ್ಕಾರದ ನಿರ್ಲಕ್ಷ್ಯವೋ ಅಥವಾ ಇಲ್ಲಿನ ವೈದ್ಯರು ಖಾಸಗಿ ಆಸ್ಪೆತ್ರೆ ನಡೆಸಿ ದುಡ್ಡು ಮಾಡ್ತಾ ಇದ್ದಾರ ಅಂತ ಸಂಬಂಧ ಪಟ್ಟ ಇಲಾಖೆ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಿ ಆರೋಗ್ಯವೆ ಮಹಾ ಭಾಗ್ಯ, ಎನ್ನುವುದು ಹೇಳಲು ಮಾತ್ರ ಮಾತಿಗೆ ಸೀಮಿತ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಹಗಲು ದರೋಡೆ ನಡೆಯುತ್ತಿದ್ದರು ಕಣ್ಮುಚ್ಚಿ ಕುಳಿತ ರಾಜ್ಯಸರ್ಕಾರ ಮತ್ತು ಮೇಲಾಧಿಕಾರಿಗಳು ಇವರಿಗೆಲ್ಲಾ ಸಾತ್ ಕೊಡಬಹುದಾ? ಅಥವಾ ನಮ್ಮನ್ನೇನು ಮಾಡಲು ಸಾಧ್ಯ ಎನ್ನುವ ದುರಂಕಾರವೀರಬಹುದಾ ಇಂತಹ ವೈದ್ಯರಿಗೆ? “ವೈದ್ಯೋ ನಾರಾಯಣ ಹರಿ “ಎಂದು ಮುಗ್ದ ಮನಸ್ಸಿನ ಸಾರ್ವಜನಿಕರು ಇಂತಹ ವೈದ್ಯರನ್ನು ನಂಬಿ ತಮ್ಮ ಜೀವವನ್ನು ಇವರ ಕೈಗೆ ಕೊಡುತ್ತಾರೆ ಆದರೆ ಇಂತವರು ಮಾತ್ರ ನಮ್ಮಲ್ಲಿ ಆಗುವುದಿಲ್ಲ ಅಂತ ಹೇಳಿ ಮುಂದಕ್ಕೆ ಕಮಿಷನ್ ಅಥವಾ ತಮ್ಮದೇ ಸ್ವಂತ ಆಸ್ಪತ್ರೆಗೆ ಕಳುಹಿಸಿ ಬಡವರಿಂದ ಹಣವನ್ನು ಪಿಕಲು ಹೊಸದಾರಿಯನ್ನು ಹುಡುಕುತ್ತಾರೆ,

ಇಂತಹ ಹಲವು ಉದಾಹರಣೆಗಳು ರಾಜ್ಯದಲ್ಲಿ ಸಾಕಷ್ಟು ನಡೆಯುತ್ತಿದ್ದರು ಇಂತವರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳುವುದನ್ನು ಬಿಟ್ಟು ಕಣ್ಮಣಿ ಕುಳಿತಿರುದನ್ನು ನೋಡಿದರೆ, ಇಂತವರ ದುಡಿಮೆಯಲ್ಲಿ ಯಾರ್ಯಾರಿಗಿದೆಯೋ ಸಿಂಹ ಪಾಲು. ಅಲ್ವಾ ರಾಜ್ಯಸರ್ಕಾರ ಸುಮಾರು ಹಣವನ್ನು ಸುರಿದು ಆದುನಿಕ ಉಪಕರಣಗಳನ್ನು ಏಕೆ ಖರೀದಿಸಬೇಕು, ಹಾಗೂ ಸರ್ಕಾರಿ ವೈದ್ಯರಿಗೆ ಲಕ್ಷನುಗಟ್ಟಲೆ ಸಂಬಳವನ್ನು ಏಕೆ ನೀಡಬೇಕು, ಯೋಚನೆ ಮಾಡಲಿ ಇದರ ಬಗ್ಗೆ ಸಂಬಂಧ ಪಟ್ಟ ಶಾಸಕರು ಹಾಗೂ ಮೇಲಾಧಿಕಾರಿಗಳು. ರಾಜ್ಯದಲ್ಲಿ ಒಳ್ಳೆಯ ಹಾಗೂ ನುರಿತ ವೈದ್ಯರು ಸಹ ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿ ಇದ್ದಾರೆ, ಅಂತವರ ಶ್ರಮ ಇಂತಹ ಹಲವು ವೈದ್ಯರಿಂದ ಕಾಣೆಯಾಗುತ್ತಿದೆ, ನೇರವಾಗಿ ಒಂದು ಆಸ್ಪತ್ರೆಯ ಚಿತ್ರಣ ದೇವದುರ್ಗ ಅಂತ ಅಲ್ಲ ಹಲವು ಕಡೆ ನಡೆಯುವ ಹಲವು ಸಂಗತಿಗಳು ಸಹ ಇದಕ್ಕಿಂತ ಜಾಸ್ತಿ ಸಂಖ್ಯೆಯಲ್ಲಿ ಇವೆ ಇನ್ನೂ ಮುಂದಿನ ಸಂಚಿಕೆಯಲ್ಲಿ ಎಳೆ ಎಳೆಯಾಗಿ ರಾಜ್ಯದ ಜನರ ಆರೋಗ್ಯದ ಹಿತಕ್ಕೋಸ್ಕರ ನಮ್ಮ ಒಂದು ದಿಟ್ಟ ನಡೆ… ಎಚ್ಚರಿಕೆ ಇದು ಮೊದಲ ಹೆಜ್ಜೆ ಇನ್ನಾದರೂ ಈ ಸುದ್ದಿ ನೋಡಿಯಾದ್ರು ಎಚೆತ್ತು ದೇವದುರ್ಗ ಸರ್ಕಾರಿ ಆಸ್ಪತ್ರೆಯನ್ನ ಸರಿಯಾಗಿ ಕಾರ್ಯನಿರ್ವಸುವಂತೆ ಮಾಡ್ತಾರಾ ಕಾದು ನೋಡಬೇಕು…
ವರದಿ.ಮುಕ್ಕಣ್ಣ ಹುಲಿಗುಡ್ಡ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
