;

ಸಿಂಧನೂರು :ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಬಿಜೆಪಿ ಕಛೇರಿಗೆ ಆಗಮನ…!!!

ಸಿಂಧನೂರು :ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಬಿಜೆಪಿ ಕಛೇರಿಗೆ ಆಗಮನ.
ನಗರದ ಗಂಗಾವತಿ ರಸ್ತೆಯಲ್ಲಿರುವ ಬಿಜೆಪಿ ಕಾರ್ಯಾಲಯಕ್ಕೆ ಬೇಟಿ ನೀಡಿದ ಗಣಿ ಭೂವಿಜ್ಞಾನ ಮತ್ತು ಮಹಿಳಾ ಮಕ್ಕಳ ಇಲಾಖೆ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ಹಾಲಪ್ಪ. ಬ. ಆಚಾರ ಅವರನ್ನು ಪಕ್ಷದ ಕಾರ್ಯಲಯಕ್ಕೆ ಸ್ವಾಗತಿಸಿ, ಅವರಿಗೆ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ಕೊಲ್ಲಾ ಶೇಷಗಿರಿರಾವ್ ಇತರ ಮುಖಂಡರು ಸನ್ಮಾನಿಸಿ ಗೌರವಿಸಿದರು.

ನಂತರ ಮಾತನಾಡಿದ ಸಚಿವ ಹಾಲಪ್ಪ ಆಚಾರ್ ಕಾರ್ಯಕರ್ತರನ್ನುದ್ದೇಶಿಸಿ ಮುಂದಿನ ದಿನಮಾನಗಳಲ್ಲಿ ಬರುವಂತಹ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ನಮ್ಮ ಸರಕಾರದ ಅಭಿವೃದ್ಧಿಯ ಯೋಜನೆಗಳನ್ನು ಜನರಿಗೆ ಮನ ಮುಟ್ಟಿಸಿ ನಮ್ಮ ಸರ್ಕಾರ ಮಾಡುತ್ತಿರುವಂತಹ ಪ್ರೀತಿಯ ಕರುಣೆಯ ಮಮತೆಯಿಂದ ದೇಶವನ್ನು ಅಭಿವೃದ್ಧಿಗೊಳಿಸುತ್ತಿದೆ.
ನಮ್ಮ ಸಂಘಟನೆ ದೇಶದ ಅಭಿವೃದ್ಧಿಯ ಪತಾಕೆಯನ್ನು ಇಡೀ ವಿಶ್ವಕ್ಕೆ ತೋರಿಸುವಂತಹ ಪ್ರಯತ್ನ ಮಾಡುತ್ತಿರುವುದು ಪ್ರತಿಯೊಬ್ಬ ಮತದಾರರಿಗೂ ಗೊತ್ತಿರುವಂತಹ ವಿಚಾರ ನಾನು ಒಬ್ಬ ಸಾಮಾನ್ಯ ರೈತ ಕುಟುಂಬದಿಂದ ಬಂದಿರುವ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದಲ್ಲಿ ಪ್ರಾಮಾಣಿಕವಾಗಿ ಸಂಘಟನೆ ಮಾಡಿದ ಅಂಶವನ್ನಿಟ್ಟುಕೊಂಡು ನನಗೆ ರಾಜ್ಯದ ಜವಾಬ್ದಾರಿಯನ್ನು ಕೊಟ್ಟಿದೆ ಎಂದು ಕಾರ್ಯಕರ್ತರಿಗೆ ಪಕ್ಷ ಸಂಘಟನೆಯ ಶಕ್ತಿ ಏನೆಂಬುದು ವಿವರಿಸಿದರು.

ಈ ಸಿಂಧನೂರು ನಗರದಲ್ಲಿ ಅನಾಥ ಹಿರಿಯ ನಾಗರಿಕರ ಸೇವೆಯಲ್ಲಿ ರಾಜ್ಯದ ಮೂಲೆ- ಮೂಲೆಗಳಲ್ಲಿ ಪ್ರಸಿದ್ಧವಾದ ಶ್ರೀಮಠ ಸೇವಾ ಟ್ರಸ್ಟ್(ರಿ) ಹರೇಟನೂರು ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವಂತಹ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮಕ್ಕೆ ಸರಕಾರದ ಸವಲತ್ತುಗಳನ್ನು ನೀಡುವುದಾಗಿ ಶ್ರೀ ಚನ್ನಬಸವ ಸ್ವಾಮಿ ಹಿರೇಮಠ ಅವರಿಗೆ ಭರವಸೆ ಕೊಟ್ಟರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎನ್.ಶಿವನಗೌಡ ಗೊರೆಬಾಳ, ಮಧ್ವರಾಜ್ ಆಚಾರ್ಯ,ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಅಮರೇಶ್ ರೈತನಗರ,ಗ್ರಾಮೀಣ ಮಂಡಲ ಅಧ್ಯಕ್ಷರಾದ ಟಿ. ಹನುಮೇಶ್ ಸಾಲಗುಂದ,ನಗರ ಮಂಡಲ ಅಧ್ಯಕ್ಷರಾದ ಪ್ರೇಮಾ ಸಿದ್ಧಾಂತಿಮಠ, ಶರಣಬಸವ ವಕೀಲರು ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷರು, ಶೈಲಜಾ ಷಡಕ್ಷರಪ್ಪ,ಮಮತಾ ಹಿರೇಮಠ,ಎಂ.ದೊಡ್ಡ ಬಸವರಾಜ್, ಪರಮೇಶಪ್ಪ ಹಾದಿಮನಿ ವಿರಲಕ್ಷೀ, ಶಿವಬಸವನಗೌಡ ಗೊರೆಬಾಳ, ಪ್ರಧಾನ ಕಾರ್ಯದರ್ಶಿಗಳಾದ ಹನುಮಂತರೆಡ್ಡಿ ಹುಡಾ, ರವಿ ರಾಠೋಡ್, ಹನುಮಂತಪ್ಪ ಪುಲದಿನ್ನಿ,ತಿಮ್ಮಾರೆಡ್ಡಿ ಹುಡಾ, M. ರಾಮನಗೌಡ ವಕೀಲರು, ನಿರುಪಾದೆಪ್ಪ ಜೋಳದರಾಶಿ, ವೆಂಕನಗೌಡ ಸಾಸಲಮರಿ, ಮಲ್ಲಿಕಾರ್ಜುನ ಭೀಮರಾಜ ಕ್ಯಾಂಪ್,ಸಿದ್ದು ಹೂಗಾರ್, ರವಿಕುಮಾರ ಉಪ್ಪಾರ್, ಮಲ್ಲಿಕಾರ್ಜುನ ಕಾಟಗಲ್, ನಿರುಪಾದಿ ಸುಕಾಲಪೇಟೆ, ಕೃಷ್ಣಪ್ಪ ರಾಥೋಡ್,ಶಿರಾಜ್ ಪಾಷಾ,ಶಾರದಮ್ಮಅಡಿವಪ್ಪ,ನೀಲಮ್ಮಅಲಬನೂರು,ಜಯಶ್ರೀ ರೆಡ್ಡಿ, ಆನಂದ ಗೊರ್ಕರ್, ಷಣ್ಮುಗಂ, ನಾಗರಾಜ್ ದೇವರಗುಡಿ, ಮಲ್ಲಿಕಾರ್ಜುನ,ಸಂತೋಷ್ ಗೊರೆಬಾಳ,ಸಾಂಬಶಿವರಾವ್ ಭೀಮರಾಜಕ್ಯಾಂಪ್,ವಿನಯ್ ಕುಮಾರ್,ಹಾಗೂ ಇನ್ನು ಮುಂತಾದ ಪಾರ್ಟಿಯ ಪದಾಧಿಕಾರಿಗಳು ಕಾರ್ಯಕರ್ತರು ಪಾಲ್ಗೊಂಡಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;